ಹಾವು ಕಡಿತ: ರೈತ ಮಹಿಳೆ ಸಾವು

KannadaprabhaNewsNetwork | Published : Oct 3, 2023 6:00 PM

ಸಾರಾಂಶ

ಹಾವು ಕಡಿದು ರೈತ ಮಹಿಳೆ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಆತಗೂರು ಹೋಬಳಿ ದೊಡ್ಡಂಕನಹಳ್ಳಿಯಲ್ಲಿ ನಡೆದಿದೆ.
ಮದ್ದೂರು: ಹಾವು ಕಡಿದು ರೈತ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ದೊಡ್ಡಂಕನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಾಜು ಪತ್ನಿ ಮಮತಾ (39) ಮೃತ ರೈತ ಮಹಿಳೆ. ಗ್ರಾಮದ ಮನೆ ಪಕ್ಕದ ಜಮೀನಿನಲ್ಲಿ ಹುಲ್ಲು ತರಲು ಹೋದ ವೇಳೆ ವಿಷಪೂರಿತ ಹಾವು ಕಡಿದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article