ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕು ಕರವೇ ಯುವ ಘಟಕದ ಅಧ್ಯಕ್ಷ ದಯಾನಂದ ಮಾತನಾಡಿ, ತಾಲೂಕಿನ ತೆರೆದಿದ್ದ ರಾಗಿ ಖರೀದಿ ಕೇಂದ್ರಕ್ಕೆ ರೈತರು ನೀಡಿದ ರಾಗಿಗೆ ಈಗಾಗಲೇ ಹಣ ಪಾವತಿ ಮಾಡಿದ್ದಾರೆ. ಆದರೆ ಹಳ್ಳಿಮೈಸೂರು ಹೋಬಳಿಯ ರೈತರು ನೀಡಿರುವ ರಾಗಿಗೆ ಇನ್ನೂ ಹಣ ಪಾವತಿ ಮಾಡದ ಕಾರಣದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಾರು ಬೆಳೆಗೆ ಅಗತ್ಯವಾದ ರಸಗೊಬ್ಬರ ಹಾಗೂ ಇತರೆ ಅಗತ್ಯತೆಗಳನ್ನು ಕೊಳ್ಳಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತರ ಸಮಸ್ಯೆಯ ತೀವ್ರತೆಯನ್ನು ಅರಿತು ರೈತರು ನೀಡಿದ ರಾಗಿಗೆ ಹಣ ಪಾವತಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಉಪ ತಹಸೀಲ್ದಾರ್ ರೂಪೇಶ್ ಅವರಿಗೆ ಮನವಿ ಮಾಡಿದ್ದೇವೆ ಎಂದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಅಧ್ಯಕ್ಷ ಬಾಲು ಹಾಗೂ ಯುವಕ ಘಟಕದ ಅಧ್ಯಕ್ಷ ಭರತ್, ಇತರರು ಇದ್ದರು.