ಸೇವೆ ಮಾಡುವಲ್ಲಿ ರೆಡ್ ಕ್ರಾಸ್ ವಿಶ್ವದಾದ್ಯಂತ ಪ್ರಸಿದ್ಧಿ: ಡಾ.ಮೀರಾ ಶಿವಲಿಂಗಯ್ಯ

KannadaprabhaNewsNetwork |  
Published : Aug 30, 2025, 01:00 AM IST
29ಕೆಎಂಎನ್ ಡಿ12 | Kannada Prabha

ಸಾರಾಂಶ

1864 ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ 1917, 1944 ಮತ್ತು 1963ರ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿರುವುದು ರೆಡ್ ಕ್ರಾಸ್ ಸಂಸ್ಥೆ ಯಾವ ರೀತಿ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂಬುದನ್ನು ತಿಳಿಯುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರವಾಹ, ಚಂಡಮಾರುತಗಳಂತಹ ವಿಪತ್ತುಗಳು ಸಂಭವಿಸಿದಾಗ ರೆಡ್ ಕ್ರಾಸ್ ಸ್ಥಳೀಯ ಸಮುದಾಯಗಳಿಗೆ ಆಹಾರ, ಆಶ್ರಯ ಮತ್ತು ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸುವ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಜಿನೀವಾ ಒಪ್ಪಂದ ದಿನಾಚರಣೆ 2025 ಉದ್ಘಾಟಿಸಿ ಮಾತನಾಡಿದರು.

ರೆಡ್ ಕ್ರಾಸ್ ಒಂದು ಅಂತಾರಾಷ್ಟ್ರೀಯ ಮಾನವೀಯ ಚಳವಳಿಯಾಗಿದ್ದು, ಯುದ್ಧ ಮತ್ತು ವಿಪತ್ತುಗಳ ಸಮಯದಲ್ಲಿ ಬಳಲುತ್ತಿರುವ ಜನರಿಗೆ ತಾರತಮ್ಯವಿಲ್ಲದೆ ಸಹಾಯ ಮಾಡುತ್ತದೆ. ಇದರ ಮುಖ್ಯ ಉದ್ದೇಶಗಳು ಮಾನವ ದುಃಖವನ್ನು ನಿವಾರಿಸುವುದು, ಆರೋಗ್ಯವನ್ನು ಉತ್ತೇಜಿಸುವುದು, ವಿಪತ್ತು ಪರಿಹಾರ ಒದಗಿಸುವುದು ಮತ್ತು ಎಲ್ಲಾ ಜನರಲ್ಲಿ ತಿಳಿವಳಿಕೆ ಮತ್ತು ಶಾಂತಿ ಬೆಳೆಸುವುದು ಎಂದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನಮಂತು ಮಾತನಾಡಿ, ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಸ್ವಿಡ್ಜರ್ ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿ ಸ್ಥಿತವಾಗಿರುವ ಒಂದು ಜನಸೇವಾಪರ ಸಂಸ್ಥೆ. ಜಿನೀವಾ ಒಪ್ಪಂದಗಳಲ್ಲಿ ಭಾಗಿಯಾಗಿರುವ ದೇಶಗಳು ಯುದ್ಧ ಕಾಲದಲ್ಲಿ ಈ ಸಂಸ್ಥೆಗೆ ಯುದ್ಧದಿಂದ ಪ್ರಭಾವಿತರಾಗಿರುವವರನ್ನು ಚಿಕಿತ್ಸೆ ನೀಡುವ ಹಕ್ಕನ್ನು ನೀಡಿವೆ ಎಂದರು.

1864 ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ 1917, 1944 ಮತ್ತು 1963ರ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿರುವುದು ರೆಡ್ ಕ್ರಾಸ್ ಸಂಸ್ಥೆ ಯಾವ ರೀತಿ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂಬುದನ್ನು ತಿಳಿಯುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಂಡ್ಯ ವಿವಿ ಪ್ರಾಧ್ಯಾಪಕ ಪ್ರೊ.ಎಸ್.ಮಂಜು ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಯುವ ರೆಡ್ ಕ್ರಾಸ್ ಘಟಕ ಜಿಲ್ಲಾ ಜಿಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಮಂಗಲ ಎಂ. ಯೋಗೇಶ್ ಹಾಗೂ ಕೃಷ್ಣ ಇದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ