ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗ ಅರಣ್ಯದಂಚಿನ ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಹೆಚ್ಚಳ ಮಾಡುವಂತೆ ಆಗ್ರಹಿಸಿ ೧೫೩ ದಿನಗಳ ಕಾಲ ನಮ್ಮ ಸಂಘಟನೆಯಿಂದ ಆಹೋರಾತ್ರಿ ಧರಣಿ ನಡೆಸಿದ್ದೇವೆ. ಈಗ ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿರುವ ಕೆಲ ಮಾಧ್ಯಮಗಳು ಅಂದಿನ ಹೋರಾಟದ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರೆ, ಹನೂರು ಭಾಗದ ೪ ರಿಂದ ೫ ಗ್ರಾಮ ಪಂಚಾಯಿತಿಗಳಿಗೆ ಅನೂಕೂಲವಾಗುತ್ತಿತ್ತು. ಆ.೧೫ರಂದು ಹನೂರು ವ್ಯಾಪ್ತಿಯ ಕಾವೇರಿ ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ಮೂವರ ಮೇಲೆ ಅರಣ್ಯಇಲಾಖೆ ನಡೆಸಿದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕರ ಜೊತೆಗಿದ್ದುಕೊಂಡು, ಶೂಟೌಟ್‌ಗೆ ಬಲಿಯಾದ ಮೃತರ ಕುಟುಂಬದವರನ್ನು ಕರೆಸಿ, ಉಸ್ತುವಾರಿ ಸಚಿವರು ಬರುವಷ್ಟರಲ್ಲಿ ಮನವಿಪತ್ರ ಸಿದ್ದಪಡಿಸಿದ್ದೆವು ಎಂದರು.
ಇದೇ ವೇಳೆ ಕ್ಷೇತ್ರದ ಶಾಸಕರು ಮೃತರ ಕುಟುಂಬಗಳಿಗೆ ೧೧ ಲಕ್ಷ ರು. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ನಮ್ಮ ಸಂಘಟನೆಯಿಂದ ಶಾಸಕರ ಮತ್ತೆ ಚರ್ಚಿಸಿ, ತಲಾ ೧೫ ಲಕ್ಷ ರೂ. ಪರಿಹಾರ ಕೊಡುವಂತೆ ಮನವಿ ಮಾಡುವ ಮೂಲಕ ಪರಿಹಾರ ಹೆಚ್ಚಳ ಮಾಡುವುದರಲ್ಲಿ ನಮ್ಮ ಪಾತ್ರವು ಇತ್ತು, ಪ್ರತಿಭಟನೆ ವೇಳೆ ಸಂಘಟನೆಯವರು ಯಾರ ವಿರುದ್ದವೂ ಘೋಷಣೆ ಕೂಗಿಲ್ಲ. ಚಳವಳಿ ಮುಕ್ತಾಯಗೊಳಿಸುವ ಸಂಬಂಧ ಎಲೆಮರೆಕಾಯಿಯಂತೆ ಕೆಲಸ ಮಾಡಿದ್ದೇವೆ ಎಂದರು.ವಾಸ್ತವಾಂಶ ಹೀಗಿದ್ದರೂ, ಕೇವಲ ಒಂದು ಪೋಟೊ ಹಿಡಿದು, ನಡೆದಿರುವ ಕೆಲ ಅಹಿತಕರ ಘಟನೆಗಳಿಗೆ ರೈತಸಂಘಟನೆಯ ಕೈವಾಡವಿದೆ ಎಂದು ಬಿಂಬಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಮ್ಮ ಸಂಘದ ವಿರುದ್ದ ಅಪಪ್ರಚಾರ ಮಾಡುತ್ತಿರುವ ಕೆಲ ಮಾಧ್ಯಮಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡುವುದಾಗಿ ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಆರ್. ಅರ್ಪುದರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ವಸಂತಕುಮಾರ್, ಸ್ಟಾನ್ಲಿ ಬೋಸ್ ರಾಜ್, ಎನ್.ರಾಜು, ವಕೀಲ ಅತಿಶಯಕುಮಾರ್, ಎಸ್. ಜಯದೀಪ್ ಇದ್ದರು.