ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗ ಉಪಾಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ, ಹಲವಾರು ರೈತರು ಸಾಗುವಳಿ ಚೀಟಿ ಪಡೆದಿರುವ ಜಮೀನುಗಳನ್ನು ದುರಸ್ತಿ ಮಾಡಿ ಕೊಡುತ್ತಿಲ್ಲ. ಸರ್ವೆಯವರು ಮತ್ತು ದುರಸ್ತಿ ಮಾಡುವ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದು, ಹಲವಾರು ದಿನಗಳಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಕೂತನಹಳ್ಳಿ, ನಲ್ಲಗುಟ್ಟಹಳ್ಳಿ ಹರಿಸ್ಥಳ ಗ್ರಾಮಗಳ ಸರ್ವೆ ನಂಬರ್ 10, 12, 14, 9, 180 ಈ ಸರ್ವೆ ನಂಬರ್‌ಗಳಲ್ಲಿ ರೈತರು 70-80 ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಬಗರ್ ಹುಕುಂ ಅಕ್ರಮ ಸಕ್ರಮ ಅರ್ಜಿ 53, 57 ರಲ್ಲಿ ಸಾಗುವಳಿ ಚೀಟಿಗಳನ್ನು ರೈತರು ಪಡೆದಿದ್ದು, ಅದು ಪಿ ನಂಬರ್ ನಲ್ಲೇ ಇರುತ್ತದೆ. ರೈತರಿಗೆ ದುರಸ್ತಿ ಮಾಡಿಕೊಡುತ್ತಿಲ್ಲ. ಈ ಸರ್ವೆ ನಂಬರ್ ಗಳ ಜಮೀನುಗಳು 2005ನೇ ಇಸವಿಗೆ ಮೊದಲು ಗೋಮಾಳವಾಗಿದ್ದು, 2005 ರ ನಂತರ ಅರಣ್ಯ ಎಂದು ಸೇರಿಸಲಾಗಿದೆ. ಇದರ ಬಗ್ಗೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇಲ್ಲವಾದಲ್ಲಿ 3000 ಕುಟುಂಬಗಳು ನಿರ್ಗತಿಕರಾಗಿರುತ್ತಾರೆ. ರೈತರ ಬೆಳೆಗಳಿಗೆ ರೈತರು ಯೂರಿಯಾ ಮಾರಲು ಪಹಣಿ ಮತ್ತು ಆಧಾರ್ ಬೆರಳಚ್ಚು ಕೇಳುತ್ತಿದ್ದು, ಅದರಲ್ಲಿ ತುಂಬಾ ಸಮಸ್ಯೆಗಳು ಎದುರಿಸಬೇಕಾಗಿದೆ. ಒಂದು ದೊಡ್ಡ ಕುಟುಂಬ ಬೇರೆ ಹೋಗಿದ್ದಾಗ ಒಬ್ಬರ ಹೆಸರಿನಲ್ಲಿ ಮಾತ್ರ ಎಲ್ಲಾ ಜಮೀನಿನ ಪಹಣಿ ಇರುತ್ತದೆ. ಅದೇ ಕುಟುಂಬದ ಬೇರೆಯವರು ಯೂರಿಯಾ ಪಡೆಯಲು ಸಾಧ್ಯವಿಲ್ಲ. ಕೆಲವು ರೈತರಿಗೆ ಸಾಗುವಳಿ ಚೀಟಿ ಮತ್ತು ಪಹಣಿ ಆಗಿರುವುದಿಲ್ಲ. ಇಂತಹ ರೈತರು ಯೂರಿಯಾ ಖರೀದಿಸುವುದು ಕಷ್ಟ ಮತ್ತು ಇಂತಹ ರೈತರು ತುಂಬಾ ಹೆಚ್ಚು ಜನ ಇದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ಕೆರೆಗಳಿಗೆ ನೀರನ್ನು ಪೂರೈಸುತ್ತಿದ್ದು, ಆ ನೀರು ತುಂಬಾ ಕಳಪೆ ಮಟ್ಟದಲ್ಲಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಆದ ಕಾರಣ ಈ ಭಾಗದ ಕೆರೆಗಳು ಮತ್ತು ಅಂತರ್ಜಲ ಕಲುಷಿತವಾಗಿ ಬೆಳೆಗಳು, ಜನರು ಮತ್ತು ಜಾನುವಾರುಗಳು ಹೊಸ ಹೊಸ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಸರಬರಾಜು ಮಾಡಬೇಕಾಗಿ ಆಗ್ರಹಿಸಿದರು.
ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್ ಮಾತನಾಡಿ, ಬೆಸ್ಕಾಂ ಖಾಸಗೀಕರಣ ಮಾಡಬಾರದು, ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ರೈತರ, ಬಡವರ ಬದುಕು ದುರ್ಬರವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸಲು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ರಾಮಾಂಜಿನಪ್ಪ, ಪದಾಧಿಕಾರಿಗಳಾದ ಯರ್ರಪ್ಪ, ಶ್ರೀನಿವಾಸ, ಪ್ರಕಾಶ್, ಅಶ್ವತ್ತಪ್ಪ, ರಮಾಮಣಿ, ಈಶ್ವರರೆಡ್ಡಿ, ರಾಮಕೃಷ್ಣಪ್ಪ, ಕೃಷ್ಣಪ್ಪ ಮತ್ತಿತರರು ಇದ್ದರು.