ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ರೈತ ಸಂಘದ ಕಾರ್ಯಾದ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತಾನಾಡಿ, ಬರಗಾಲದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೀರು ಹರಿಸಲು ತಾರತಮ್ಯ ಮಾಡಬಾರದು, ಏಕೆಂದರೆ ಈಗಾಗಲೇ ಬಿತ್ತನೆ ಮಾಡಿದ ಭತ್ತ ಕಾಳುಕಟ್ಟುವ ಹಂತದಲ್ಲಿದೆ. ಮೆಣಸಿನಕಾಯಿ ಬೆಳವಣಿಗೆ ಹಂತದಲ್ಲಿದೆ. ಜೊತೆಗೆ ಮಳೆ ಇಲ್ಲದೆ ಜನ ಜಾನು ವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದೆ. ರೈತರು ತಾವು ಬದುಕುವ ಜೊತೆಗೆ ಜಾನುವಾರು ಗಳ ಸಂರಕ್ಷಣೆಗೆ ಹೆಣಗಾಡುತ್ತಿದ್ದಾರೆ. ಇಂತಹ ದುಸ್ಥಿಯಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ನೀರುವ ಬಿಡಲು ಮೀನ ಮೇಷ ಮಾಡಿದರೆ ರೈತರೇ ನಾಲೆಗಳ ಗೇಟುಗಳ ವಶಪಡಿಸಿಕೊಂಡು ನೀರು ಬಿಟ್ಟುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೀರು ಬಿಡುವ ಭರವಸೆ: ಪ್ರತಿಭಟನಾ ರೈತರಿಂದ ಮನವಿ ಸ್ವೀಕರಿಸಿದ ಮುಖ್ಯ ಅಭಿಯಂತರರಾದ ರಮೇಶ ರಾಠೋಡ ಮಾತನಾಡಿ, ಸರ್ಕಾರ ಬಲದಂಡೆ ನಾಲೆಗೆ ನೀರು ಹರಿಸಲು ಸಕರಾತ್ಮಕ ಧೋರಣೆ ಹೊಂದಿದ್ದು, ನೀರು ಹರಿಸುವ ಕುರಿತು ಒಂದೆರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಿದೆ ಎಂದು ಭರವಸೆ ನೀಡಿದ್ದು, ಡಿಸೆಂಬರ್ ತಿಂಗಳವರೆಗೆ ನೀರು ಹರಿಸುವ ಇರಾದೆ ಇದೆ ಎಂದು ಹೇಳಿದರು.ಭಾರಿ ಪೋಲೀಸ್ ಭದ್ರತೆ: ಬೆಳೆಗೆ ನೀರು ಬಿಡಲು ಆಗ್ರಹಿಸಿ ಬಸವಸಾಗರ ಆಣೆಕಟ್ಟೆಗೆ ನುಗ್ಗಲು ರೈತರು ಮುಂದಾಗಿದ್ದಾರೆ ಎಂಬ ಮಾಹಿತಿ ಮೊದಲೇ ತಿಳಿದಿದ್ದ ಪೋಲೀಸ್ ಇಲಾಖೆ ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ನೇತೃತ್ವದಲ್ಲಿ ಸಿಪಿಐ ಗಳಾದ ಹೊಸಕೇರಪ್ಪ, ಶಿವಾನಂದ ಗಾಣಿಗ, ಪುಂಡಲೀಕ ಪಟಾತರ್, ರಾಮಣ್ಣ ಜಲಗೇರಿ ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
---
17ಕೆಪಿಎಲ್ಎನ್ಜಿ02 : ಬಲದಂಡೆ ನಾಲೆಗೆ ನೀರು ಬಿಡಲು ಆಗ್ರಹಿಸಿ ಲಿಂಗಸುಗೂರು ತಾಲೂಕಿನ ಬಸವ ಸಾಗರ ಆಣೆಕಟ್ಟಿಯಿಂದ ಬಲದಂಡೆ ನಾಲೆಗೆ ನೀರು ಹರಿಸಲು ಆಗ್ರಹಿಸಿ ರೈತರು ಮುಖ್ಯ ಅಭಿಯಂತರರಾದ ರಮೇಶ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.