ರಸ್ತೆ, ಬ್ರಿಡ್ಜ್ ಕಂ ಬ್ಯಾರೆಜ್‌ಗಳ ನಿರ್ಮಾಣದಿಂದ ರೈತರಿಗೆ ಅನುಕೂಲ

KannadaprabhaNewsNetwork | Published : Feb 16, 2025 1:46 AM

ಸಾರಾಂಶ

ಕ್ಷೇತ್ರದಲ್ಲಿ ತೋಟಪಟ್ಟಿ ರಸ್ತೆಗಳು ಮತ್ತು ಬ್ರಿಡ್ಜ್ ಕಂ ಬ್ಯಾರೆಜ್‌ಗಳ ನಿರ್ಮಾಣದಿಂದಾಗಿ ರೈತರಿಗೆ ಅನುಕೂಲವಾಗಲಿದ್ದು, ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ರೈತರ ಜಮೀನಿನ ಅಂತರಜಲಮಟ್ಟ ಸುಧಾರಿಸಲು ನೆರವಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕ್ಷೇತ್ರದಲ್ಲಿ ತೋಟಪಟ್ಟಿ ರಸ್ತೆಗಳು ಮತ್ತು ಬ್ರಿಡ್ಜ್ ಕಂ ಬ್ಯಾರೆಜ್‌ಗಳ ನಿರ್ಮಾಣದಿಂದಾಗಿ ರೈತರಿಗೆ ಅನುಕೂಲವಾಗಲಿದ್ದು, ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ರೈತರ ಜಮೀನಿನ ಅಂತರಜಲಮಟ್ಟ ಸುಧಾರಿಸಲು ನೆರವಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.

ಶೇಡಬಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಲ್ಲಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ₹1.5 ಕೋಟಿ ವೆಚ್ಚದ ಬ್ರಿಡ್ಜ್‌ ಕಂ ಬ್ಯಾರೆಜ್ ನಿರ್ಮಾಣ ಕಾಮಗಾರಿಗೆ ಶನಿವಾರ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸವೇಶ್ವರ ಯಾತ ನೀರಾವರಿ ಯೋಜನೆಗೆ ₹300 ಕೋಟಿ ಹಣ ಬಿಡುಗಡೆಗೆ ಮನವಿ ಮಾಡಲಾಗಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈಗಾಗಲೇ ಒಂದು ಮೋಟಾರ್‌ನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ, ಕಾಲುವೆಗೆ ನೀರು ಹರಿಸಲಾಗಿದೆ ಎಂದರು.ತಾಲೂಕು ಪಂಚಾಯತಿ ಮಾಜಿ ಸದಸ್ಯ ವಸಂತ ಖೋತ ಚಾಲನೆ ನೀಡಿದರು. ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಸಾಗರ ಪವಾರ, ಸಚಿನ ಮಾಳಿ, ಗುತ್ತಿಗೆದಾರ ಕರಣ ಮೋಪಗಾರ, ಪಪಂ ಸದಸ್ಯ ರಮೇಶ ರತ್ನಪ್ಪಗೋಳ, ಬಾಳಾಸಾಹೇಬ ಜಾಯಗೊಂಡೆ, ದಾದಾ ಬನಜವಾಡ, ಪ್ರಕಾಶ ಮಾಳಿ, ಅಣ್ಣಾ ಅರವಾಡೆ, ಸಂತೋಶ ಮಗದುಮ್ಮ, ರಾಜು ಮಗದುಮ್ಮ, ಮಹಾದೇವ ಮಿಠಾರೆ, ಬಾಹುಬಲಿ ಬನಜವಾಡ, ರಾಜು ಅರವಾಡೆ, ರಾಜು ಜಾಯಗೊಂಡೆ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಜೂನ್‌ ತಿಂಗಳಲ್ಲಿ ಎಲ್ಲ 5 ಮೋಟಾರ್‌ಗಳನ್ನು ಪ್ರಾರಂಭಿಸಿ, ಆ ಭಾಗದ ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿ ರೈತರಿಗೆ ಅನುಕೂಲ ಮಾಡಲಾಗುವುದು.

-ರಾಜು ಕಾಗೆ, ಶಾಸಕರು.ಮಹಾಕುಂಭಮೇಳಕ್ಕೆ ಶಾಸಕರು ಹೋಗುತ್ತಿದ್ದಾರೆಂಬ ಸುದ್ದಿ ಸತ್ಯಕ್ಕೆ ದೂರ: ಶಾಸಕ ಕಾಗೆ

ಕಾಗವಾಡ: ಪ್ರಯಾಗರಾಜನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಸರ್ಕಾರದ ವತಿಯಿಂದ ಎಲ್ಲ ಶಾಸಕರು ಹೋಗುತ್ತಿದ್ದಾರೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಂದೆ ಅಂತಹ ಯೋಜನೆ ಇಲ್ಲ, ಅವರವರ ಭಕ್ತಿಗನುಸಾರವಾಗಿ ಹೋಗುತ್ತಿದ್ದಾರೆ. ನಾನಂತೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share this article