ನಮ್ಮ ಹೋರಾಟ ಇಂದಿಗೆ 1331ನೇ ದಿನಕ್ಕೆ ತಲುಪಿದೆ. ರಾಜ್ಯ ಸರ್ಕಾರ ರೈತರಿಗೆ ಕೊಟ್ಟ ಭರವಸೆಯ ಮಾತಿಗೆ ಇನ್ಣು ಅಧಿಕೃತ ಮುದ್ರೆ ಒತ್ತದೆ ಮೀನಾಮೇಷ ಎಣಿಸುತ್ತಿದೆ.
ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿ ನಾಲ್ಕು ತಿಂಗಳುಗಳಾದರೂ ಚನ್ನರಾಯಪಟ್ಟಣ ಭೂಸ್ವಾಧೀನ ರದ್ದುಪಡಿಸುವ ಅಧಿಕೃತ ಡಿನೋಟಿಫಿಕೇಶನ್ ಆದೇಶವನ್ನು ಸರ್ಕಾರ ಹೊರಡಿಸದಿರುವ ಕಾರಣ, ಭೂಸ್ವಾಧೀನ ವಿರೋಧಿ ಹೋರಾಟದ ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಧಿಕೃತ ಆದೇಶ ಹೊರಡಿಸದಿರುವ ಕಾರಣ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ.ಈ ಬಗ್ಗೆ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆ ಹೋರಾಟ ಸಮಿತಿಯ ಮುಖಂಡರ ಸಭೆಯ ಬಳಿಕ ಪ್ರಧಾನ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ನಮ್ಮ ಹೋರಾಟ ಇಂದಿಗೆ 1331ನೇ ದಿನಕ್ಕೆ ತಲುಪಿದೆ. ರಾಜ್ಯ ಸರ್ಕಾರ ರೈತರಿಗೆ ಕೊಟ್ಟ ಭರವಸೆಯ ಮಾತಿಗೆ ಇನ್ಣು ಅಧಿಕೃತ ಮುದ್ರೆ ಒತ್ತದೆ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ಮೌಖಿಕ ಆದೇಶವು ಡಿನೋಟಿಫಿಕೇಶನ್ ರೂಪದಲ್ಲಿ ಅಧಿಕೃತವಾಗಿ ಹೊರಬಂದಿಲ್ಲ ಇದು ಮತ್ತೆ ಮತ್ತೆ ರೈತರ ಸಹನೆ ತಾಳ್ಳೆಯನ್ನು ಪರೀಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಸಂಯುಕ್ತ ಹೋರಾಟ ಸಮಿತಿಯಿಂದ ನಮ್ಮ ಧರಣಿಯ ಸ್ಥಳವನ್ನು ಚನ್ನರಾಯಪಟ್ಟಣದಿಂದ ಬೆಂಗಳೂರು ನಗರಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದೇವೆ. ನಾವು ಇದೇ ನ. 26ಕ್ಕೆ ಬೆಂಗಳೂರು ಚಲೋ ಹಮ್ಮಿಕೊಳ್ಳುವ ಮೂಲಕ ಅಲ್ಲಿನ ಫ್ರೀಡಂ ಪಾರ್ಕನಲ್ಲಿ ನಮ್ಮ ಸರ್ಕಾರ ನೋಟಿಕೇಷನ್ ಆದೇಶ ಹೊರಡಿಸುವವರೆಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.ಯುವ ರೈತ ಹೊರಾಟಗಾರ ಗೋಪಿನಾಥ್ ಮಾತನಾಡಿ, ಅಧಿಕೃತ ಆದೇಶ ಹೊರಬೀಳುವವರೆಗೆ ರೈತರ ಆತಂಕ ನಿವಾರಣೆಯಾಗುವುದು, ಕಷ್ಟ ರೈತರ ಸಮಸ್ಯೆ ಬಗೆಹರಿಸುವುದು, ಉಸ್ತುವಾರಿ ಸಚಿವರ ಜವಾಬ್ದಾರಿ 27ರಂದು ನಡೆಯುವ ಸಂಪುಟ ಸಭೆಯಲ್ಲಿ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಬೇಕಿದೆ. ಕೈಗಾರಿಕ ಸಚಿವರು ಮುಖ್ಯಮಂತ್ರಿಗಳು ಅದಕ್ಕೆ ಅಂದು ಅಧಿಕೃತ ಸಹಿ ಹಾಕಿ ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಈ ಸಭೆಯ ಮೂಲಕ ಒತ್ತಾಯಿಸುತ್ತಿದ್ದೆವೆ ಎಂದರು.ಹೋರಾಟ ಸಮಿತಿಯ ಅಧ್ಯಕ್ಷ ನಲ್ಲಪನಹಳ್ಳಿ ನಂಜಪ್ಪ ಮಾತನಾಡಿ, ನಮ್ಮ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪನವರು ಕೂಡ ಅಂದಿನ ಸಭೆಯಲ್ಲಿ ಸರ್ಕಾರದ ಪರವಾಗಿ ಹಾಜರಿದ್ದು, ಭೂಸ್ವಾಧೀನ ರದ್ದತಿ ಆದೇಶಕ್ಕೆ ಸಾಕ್ಷಿಯಾಗಿದ್ದರು. ನಾಲ್ಕು ತಿಂಗಳಾದರೂ ಸರ್ಕಾರದ ಆದೇಶ ಜಾರಿಯಾಗದಿರುವುದನ್ನು ಅವರು ಸೂಕ್ಷ್ಮವಾಗಿ ಪರಿಗಣಿಸಬೇಕು. ಅಲ್ಲದೆ, ನಮ್ಮ ರೈತರ ಹಿತ ಕಾಯುವುದು ಮತ್ತು ಸಮಸ್ಯೆ ಬಗೆಹರಿಸುವುದು ಕೂಡ ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದ್ದು, ಅವರು ಅದರಂತೆ ಡಿನೋಟಿಫಿಕೇಶನ್ ಆದೇಶ ಹೊರಡಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ, ಪ್ರಧಾನ ಸಂಚಾಲಕ ಕಾರಳ್ಳಿ ಶ್ರೀನಿವಾಸ್, ಹೋರಾಟ ಸಮಿತಿಯ ಅಧ್ಯಕ್ಷ ನಲ್ಲಪ್ಪನಹಳ್ಳಿ ನಂಜಪ್ಪ ವೆಂಕಟೇಶ್, ಸುಬ್ರಮಣಿ, ಅಶ್ವತ್ತಪ್ಪ, ಕೃಷ್ಣಪ್ಪ, ಪಿಳಪ್ಪ, ಗೋಪಾಲಗೌಡ, ಮಂಜುನಾಥ್, ತಿಮ್ಮರಾಯಪ್ಪ, ಗೋಪಿನಾಥ್, ನಾರಾಯಣಸ್ವಾಮಿ, ಮೋಹನ್ , ಗೋಪಾಲಪ್ಪ, ವೆಂಕಟೇಶ್, ಚೀಮಾಚನಹಳ್ಳಿ ರಮೇಶ್, ಪ್ರಮೋದ್ , ನಾಗರಾಜು, ಮುನಿಯಪ್ಪ , ಗೋವಿಂದಪ್ಪ ಮುನಿರಾಜು, ಮಧು, ವಿನೋದ್ ವೆಂಕಟರಮಣಪ್ಪ ಮುಂತಾದವರಿದ್ದರು.೨೪ ದೇವನಹಳ್ಳಿ ಚಿತ್ರಸುದ್ದಿ: ೦೨ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಚನ್ನರಾಯಪಟ್ಟಣದ ಭೂಸ್ವಧೀನ ವಿರೋಧಿ ಹೋರಾಟ ಸಮಿತಿಯ ಪದಾದಿಕಾರಿಗಳು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.