- ಕುಣೆಬೆಳಕೆರೆ ಉಮಾಮಹೇಶ್ವರ ದೇವಾಲಯದಲ್ಲಿ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಕುಣೆಬೆಳಕೆರೆ ಗ್ರಾಮದ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಅಂದಾಜಿನ ಮೇಲೆ ಉಳುಮೆ ಮಾಡುತ್ತಿದ್ದಾರೆ. ಕೆಲವರು ಯಾರದೋ ಜಮೀನನ್ನು ಇನ್ನಾರೋ ಉಳುಮೆ ಮಾಡುವರಿದ್ದಾರೆ. ಅಳತೆಗೆ ರೈತರು ಒಪ್ಪದೇ ವಾಗ್ವಾದ ನಡೆಸುವ ಪರಿಸ್ಥಿತಿ ಕಾಣುತ್ತಿದ್ದೇವೆ, ಜಮೀನು ಪಾಲು ವಿಭಾಗ, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ, ಅಳತೆ ಹೊಂದಾಣಿಕೆಯಾಗದೇ ರೈತರು ಸಮಸ್ಯೆಗೆ ಸಿಲುಕಿದ್ದಾರೆ ಎಂದರು.
ಇದಕ್ಕೆಲ್ಲಾ ಅಧಿಕಾರಿಗಳೇ ಕಾರಣ ಎಂಬ ಮಾತುಕೇಳಿ ಬರುತ್ತಿದೆ. ಇವೆಲ್ಲಾ ಕಾರಣ ಅರಿತ ಸರ್ಕಾರ ಪೋಡಿ ಮುಕ್ತ ಅಭಿಯಾನ ಹಮ್ಮಿಕೊಂಡಿದೆ. ರೈತರ ಜಮೀನು ಸರಿಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಅಳತೆ ಪೋಡಿ ಕಾರ್ಯಕ್ಕೆ ಅಧಿಕಾರಿಗಳಿಗೆ ರೈತರು ಸತ್ಯವನ್ನು ತಿಳಿಸಬೇಕು. ಆಗ ಸಮಸ್ಯೆಗಳು ಕೊನೆಯಾಗಿ ರೈತರು ನೆಮ್ಮದಿ ಕಾಣಬಹುದು. ರೈತರು ಈ ವಿಷಯದಲ್ಲಿ ಸಹಕರಿಸದಿದ್ದರೆ ವರ್ಷವಾದರೂ ಸಮಸ್ಯೆ ಬಗೆಹರಿಯಲ್ಲ ಎಂದು ಹರೀಶ್ ರೈತರಿಗೆ ಅರಿವು ಮೂಡಿಸಿದರು.ತಹಸೀಲ್ದಾರ್ ಗುರುಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಕಾರ ಬಂದು ಮತ್ತು ಪಹಣಿಗಳಲ್ಲಿ ಪ್ರತ್ಯೇಕ ಮಾಹಿತಿ ದಾಖಲಾದರೆ ಜಮೀನಿನ ವ್ಯವಹಾರ ನಡೆಸಲು ಕಷ್ಟವಾಗಲಿದೆ. ಪೋಡಿ ನಡೆಸಿದರೆ ವ್ಯವಹಾರ ಸುಲಭವಾಗುತ್ತದೆ. ಕಂದಾಯ ಇಲಾಖೆ ಮತ್ತು ಭೂ ಅಳತೆಗೆ ಪ್ರತ್ಯೇಕ ಇಲಾಖೆಗಳಿವೆ. ರೈತರು ಕಂದಾಯ ಇಲಾಖೆಗೆ ದೂರುವ ಬದಲು ಸರ್ವೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
- - -
ಸರ್ಕಾರಿ ಭೂಮಿಗಳಿಗೆ ಬೇರೆ ಅಳತೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕುಣೆಬೆಳಕೆರೆ ಗ್ರಾಮದ ೮೮ ಸರ್ವೆ ನಂಬರ್‌ಗಳಲ್ಲಿನ ಜಮೀನುಗಳನ್ನು ಅಳತೆ ಮಾಡಲಾಗುತ್ತದೆ. ಎರಡು ದಿನಗಳ ನಂತರ ನಂದಿತಾವರೆ, ಗುಳದಹಳ್ಳಿ, ಆದಾಪುರ ಗ್ರಾಮಗಳನ್ನು ಈ ಅಭಿಯಾನ ನಡೆಸಲಾಗುತ್ತದೆ
- - -
ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆಯಲ್ಲಿ ಶಾಸಕ ಹರೀಶ್ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದರು.