ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಆಕ್ರೋಶ
ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ನೀರಿಲ್ಲ ಹಾಗಾಗಿ ವಿದ್ಯುತ್ ನೀಡಲು ಇಲಾಖೆಗೆ ಸಾಧ್ಯವಾಗದಿರಬಹುದು ಆದರೆ ಮಳೆಗಾಲದಲ್ಲೂ ಸರಿಯಾಗಿ ವಿದ್ಯುತ್ ನೀಡದೆ ಅಧಿಕಾರಿಗಳು ರೈತರ ವಿರುದ್ಧ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿಯ ಜನ ಸಂಪರ್ಕ ಸಭೆಯಲ್ಲಿ ರೈತರು ಮಾತನಾಡಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಾಮಾನ್ಯ. ಮಳೆಗಾಲದಲ್ಲಿ ರೈತರು ತೋಟ ಹಾಗೂ ಜಮೀನುಗಳ ಕೊಳವೆಬಾವಿ ಸ್ಥಗಿತಗೊಳಿಸುತ್ತಿದ್ದರೂ ವಿದ್ಯುತ್ ವ್ಯತ್ಯಕ್ಕೆ ಕಾರಣವೇನು? ಉಪವಿಭಾಗದ ಎಇ ಸ್ಥಳಕ್ಕೆ ಬಂದು ಪರಿಶೀಲಿಸಿ 3 ದಿನದಲ್ಲಿ ಸರಿ ಪಡಿಸಿ ಎಂದು ಆದೇಶ ಹೊರಡಿ ಸಿದ್ದರು. ಆದರೆ 3 ತಿಂಗಳು ಕಳೆದರೂ ಸಮಸ್ಯೆ ಬಹೆಹರಿದಿಲ್ಲ. ಜನಸಂಪರ್ಕ ಸಭೆಯ ಮಾಹಿತಿ ನೀಡಲ್ಲ. ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರಾ. ಆದರೆ ನಮ್ಮ ಗ್ರಾಮಗಳಿಗೆ ಪತ್ರಿಕೆ ಬರೋದಿಲ್ಲ. ಹೊಗರೇ ಹಳ್ಳಿ ರೈತರ ಸಮಸ್ಯೆಗಳಿಗೆ ಸಹಾಯಕ ಎಂಜಿನಿ ಯರ್ ಸ್ಪಂದಿಸುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಬೇಕು ಎಂದು ರೈತ ಮನು ಒತ್ತಾಯಿಸಿದರು.ಎಮ್ಮೆದೊಡ್ಡಿ ಗ್ರಾಮದ ರೈತ ವಸಂತ್ ಕುಮಾರ್ ಮಾತನಾಡಿ ತೋಟದಲ್ಲಿ ಟಿಸಿ ಸುಟ್ಟು ೨೫ ದಿನಗಳಾಗಿವೆ. ಅರ್ಜಿ ಸಲ್ಲಿ ಸಿದ್ದು ಟಿಸಿ ನೀಡಲು ವಿಳಂಬವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಎಇಇ ವೀಣಾ ಇಲ್ಲಿನ ಉಪ ಕೇಂದ್ರದಲ್ಲಿ ಬಫರ್ ಝೋನ್ ಅಡಿ ಯಾವುದೇ ಟಿಸಿಗಳಿಲ್ಲ. ರಿಪೇರಿ ಮಾಡಿಸಿಯೇ ಕೊಡಬೇಕು. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಗಮನ ಹರಿಸಲಾಗುವುದು ಎಂದರು.
ಅವರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು. ಬಹಳಷ್ಟು ಟಿಸಿಗಳು ಸುಟ್ಟು ಹೋಗಲು ಅನಧಿಕೃತ ಸಂಪರ್ಕಗಳು ಕಾರಣ. ಸ್ಥಳೀಯರೇ ಅವುಗಳನ್ನು ನಿಯಂತ್ರಣ ಮಾಡಬಹುದು ಎಂದರು.
ಕಾಮಗಾರಿ ಸ್ಥಗಿತ ತೋಟದ ಲೈನ್‌ನಲ್ಲಿ ೫ ಕಂಬ ಅಳವಡಿಸಲು ಸೂಚನೆ ನೀಡಲಾಗಿದೆ. ೨ ಕಂಬಗಳನ್ನು ಅಳವಡಿಸಿ ಗುತ್ತಿಗೆ ದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾನೆ. ಇದಕ್ಕೆ ಕಾರಣ ತಿಳಿಸಿ ಎಂದು ಟಿ.ಸಿ.ಷಡಾಕ್ಷರಿ ಹೇಳಿದರು.
೬ ಬೀರೂರು೨