ಕನ್ನಡಪ್ರಭ ವಾರ್ತೆ ಯಾದಗಿರಿ
ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ನ್ಯಾಯಲಯವು ರೈತರ ಅರ್ಜಿಗಳನ್ನು ಪರಿಗಣಿಸಿ ನೀರಾವರಿ ಜಮೀನುಗಳಿಗೆ ಎಕರೆಗೆ 80 ರಿಂದ 90 ಲಕ್ಷ, ಒಣ ಬೇಸಾಯಕ್ಕೆ ₹50 ರಿಂದ ₹55 ಲಕ್ಷ ವರೆಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ ಸರ್ಕಾರ ಈ ದರಕ್ಕೆ ಒಪ್ಪದೆ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು. ಇದರಿಂದ 10 ವರ್ಷಗಳಿಂದ ರೈತರು ಪರಿಹಾರ ಪಡೆಯದೆ ತೊಂದರೆ ಅನುಭವಿಸುತ್ತಿದ್ದಾರೆ.ರೈತರು ಒನ್‌ಟೈಮ್ ಸೆಟಲ್ಮೆಂಟ್ ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದರೂ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಿಲ್ಲ ಎಂದರು.
3ನೇ ಹಂತದ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಜಿಲ್ಲಾ ನ್ಯಾಯಾಧೀಶರ ಮುಖಾಂತರ ಪ್ರಕರಣಗಳನ್ನು ರಾಜೀ ಸಂಧಾನದಲ್ಲಿ ಮುಗಿಸಿದ್ದು. ಅದೇ ರೀತಿ ಒಂದು ಮತ್ತು ಎರಡನೇ ಹಂತದ ಪ್ರಕರಣಗಳನ್ನು ರಾಜಿ ಸಂಧಾನ ಮುಖಾಂತರ ಮುಗಿಸಿದರೆ ರೈತರಿಗೆ ಅನುಕೂಲವಾಗಲಿದೆ. ಆದರಿಂದ ಕೂಡಲೇ ಸರ್ಕಾರದಿಂದ ಸಿಗುವ ಪರಿಹಾರ ನೀಡಬೇಕು, ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಸನ್ನತಿ ಬ್ರಿಡ್ಜ್‌ನ ಗೇಟ್ ಎದುರೇ ನಿರಂತರ ಪ್ರತಿಭಟನಾ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ರೈತ ಮುಖಂಡರಾದ ದೇವಿಂದ್ರಪ್ಪ ಕೊಲ್ಕುರ, ಸಂತೋಷ ಕುಮಾರ ಸಾಹು, ಗುರುಬಸವ ರಂಗನಪೇಠೆ, ಮುರಳಿಧರ ಕುಲ್ಕರ್ಣಿ, ಗುರುಪಾದಯ್ಯ ಸನ್ನತಿ, ಶೇಖಪ್ಪ ಶಿರವಾಳ, ಬಸವರಾಜ ಸಿಂಧೆ, ಶರಣಪ್ಪ ಪ್ಯಾಟಿ, ಅಂಬ್ರೇಶ ಹಬ್ಬಳ್ಳಿ, ಚಂದ್ರಶೇಖರ ಗೋಗಿ, ಸುಭಾಷ ರಾಂಪುರ, ಯಲ್ಲಲಿಂಗ ಯಕ್ಷಿಂತಿ ಸೇರಿದಂತೆ ರೈತರು ಇದ್ದರು.