ಸರ್ಕಾರಗಳ ಅಣಕು ಶವಯಾತ್ರೆ ಮಾಡಿ ರೈತರ ಆಕ್ರೋಶ

KannadaprabhaNewsNetwork |  
Published : Sep 29, 2026, 01:15 AM IST
28ಕೆಆರ್ ಎಂಎನ್ 3.ಜೆಪಿಜಿಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿದ ರೈತರು ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಬರ ಪಟ್ಟಿಯಿಂದ ಹೊರಗುಳಿದ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವುದು, ಸಾಲಮನ್ನಾ, ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಮಾಡುವ ಮೂಲಕ ಸೋಮವಾರ ವಿನೂತವಾಗಿ ಪ್ರತಿಭಟನೆ ನಡೆಸಿದರು

ರಾಮನಗರ: ಬರ ಪಟ್ಟಿಯಿಂದ ಹೊರಗುಳಿದ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವುದು, ಸಾಲಮನ್ನಾ, ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಮಾಡುವ ಮೂಲಕ ಸೋಮವಾರ ವಿನೂತವಾಗಿ ಪ್ರತಿಭಟನೆ ನಡೆಸಿದರು.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಿಂದ ಪ್ರಾರಂಭವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ ರಾಮನಗರ ತಾಲೂಕು ಆಡಳಿತ ಕಚೇರಿವರೆಗೆ ಸಾಗಿತು. ಅಲ್ಲಿ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಉಪ ವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಳೆದ 140 ವರ್ಷದ ನಂತರ ಘೋರ ಬರಗಾಲ ಆವರಿಸಿದೆ. ಕೆರೆ-ಕಟ್ಟೆ, ಜಲಮೂಲಗಳು ಬತ್ತಿಹೋಗಿವೆ. ರೈತರು ತಾವು ಬೆಳೆದ ಬೆಳೆಗಳಿಗಾಗಿ ಸಂಪೂರ್ಣ ನಷ್ಟಕ್ಕೀಡಾಗಿದ್ದಾರೆ. ಅಂತರ್ಜಲ ಬತ್ತಿಹೋಗಿ ಕೊಳವೆಬಾವಿಗಳ ಅಂತರ್ಜಲ ಖಾಲಿಯಾಗಿ ಹೋಗಿದೆ. ಸಾಮಾನ್ಯವಾಗಿ ಮಳೆ ಮತ್ತು ನೀರು ಇಲ್ಲದೆ ಬರಡಾಗಿದೆ. ಜನರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ದನ-ಕರುಗಳಿಗೆ ಜನರಿಗೆ ಹುಲ್ಲು ನೀರು ಇಲ್ಲದೆ ಪರದಾಡುವಂತಾಗಿದೆ. ಇಷ್ಟೆಲ್ಲಾ ಸಂಕಷ್ಟಗಳು ಎದುರಾಗಿದ್ದರೂ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರ ಎಂದು ಘೋಷಿಸಿ, ಇತ್ತೀಚೆಗೆ ಮತ್ತೆ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಕನಕಪುರ ಚನ್ನಪಟ್ಟಣ ಹಾರೋಹಳ್ಳಿ ತಾಲೂಕುಗಳನ್ನು ಬರ ಈ ಪಟ್ಟಿಗೆ ಸೇರಿಸದೆ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬರದ ಹಿಂದಿನ ಕಾಲದ ಮಾನದಂಡದ ನೆಪ ಹೇಳುತ್ತಾ ಜಾರಿಕೊಳ್ಳುವ ತಂತ್ರ ಮಾಡುತ್ತಿದೆ. ಈ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ರೈತರ ಕೃಷಿ ಸಾಲ ಮನ್ನಾ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50ರ ಅನುಪಾತದಲ್ಲಿ ಸಾಲ ಮನ್ನಾ ಮಾಡಬೇಕು. ಸರ್ಕಾರ ಸಾಲ ಮನ್ನಾ ಘೋಷಿಸುವ ವರೆವಿಗೂ ಬ್ಯಾಂಕುಗಳು ಸಾಲ ವಸೂಲಿ ಮಾಡುವುದನ್ನು ತಡೆಹಿಡಿಯಬೇಕು. ಕೃಷಿಗೆ ಪ್ರಥಮ ಆದ್ಯತೆ ನೀಡಿ ಸರ್ಕಾರ ಒಪ್ಪಿಕೊಂಡಿರುವAತೆ ಕನಿಷ್ಠ 7 ಗಂಟೆಗಳ ಕಾಲ ವಿದ್ಯುತ್ ಅನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಬೇಕು. ರೈತರ ಕೃಷಿ ಚಟುವಟಿಕೆಗೆ ಟಿಸಿ ಕೆಟ್ಟುಹೋದ ಸಂದರ್ಭದಲ್ಲಿ 72 ಗಂಟೆಯೊಳಗೆ ಮರುಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರವನ್ನು ತುಂಬಿಕೊಡಬೇಕು. ವಿಮಾ ಕಂಪನಿಗಳು ಸಂಪೂರ್ಣ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರಿಗೆ ಅದ್ಯತೆ ನೀಡಬೇಕು ಮತ್ತು ಕೇಂದ್ರದ ಮೂಲಕ ಖರೀದಿಸಿರುವ ಭತ್ತ, ಜೋಳ, ರಾಗಿ ಹಣವನ್ನು ಕೂಡಲೇ ರೈತರ ಖಾತೆಗೆ ಜಾನುವಾರುಗಳಿಗೆ ಮೇವು ಪೂರೈಸಬೇಕು. ಜನರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಬೇಕು. ಖರೀದಿ ಹಾಕಬೇಕು. ವಾಸಸ್ಥಳದ ಹತ್ತಿರದಲ್ಲೇ ಉದ್ಯೋಗ ದೊರಕಿಸಬೇಕು ಎಂದು ಒತ್ತಾಯಿಸಿದರು.

ಬಿಡದಿ ಹೋಬಳಿಯ ಭೈರಮಂಗಲ ಕಂಚುಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳ ಲು ಹೊರಟಿರುವ ಸರ್ಕಾರ ಭೂ ಸ್ವಾಧೀನ ಕೈಬೇಡಬೇಕು ರೈತರ ಮೇಲೆ ದೌರ್ಜನ್ಯ ಮಾಡಿರುವ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

ಕನಕಪುರ ತಾಲೂಕಿನ ಹಾರೋಬೆಲೆ ಡ್ಯಾಮ್ ನಿಂದ ರೈತರ ಜಮೀನಿಗೆ ನೀರು ಕೊಡದೆ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ರೈತರಿಗೆ ಅನ್ಯಾಯ ಮಾಡಿರುವ ಕಾವೇರಿ ನೀರಾವರಿ ನಿಗಮದ ಎಇ ಮತ್ತು ಎಇಇ ಗಳನ್ನು ಅಮಾನತ್ತು ಮಾಡಿ ತನಿಕೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ ) ಜಿಲ್ಲಾಧಿಕಾರಿ ಯಶವಂತ ಗುರುಕರ್ ಎರಡು ವರ್ಷದಿಂದ ರೈತರ ಕುಂದು ಕೊರತೆ ಸಭೆಯನ್ನು ಕರೆದಿಲ್ಲ, ಹೋರಾಟ ಮಾಡುವ ಸಂಘಟನೆಗಳಿಗೆ 144 ನಿಷೇಧಾಜ್ಞೆ ಜಾರಿ ಮಾಡಿರುವ ರೈತ ವಿರೋಧಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಚನ್ನಪಟ್ಟಣ ತಾಲೂಕು ತಹಸೀಲ್ದಾರ್ ರೈತರ ಕುಂದು ಕೊರತೆ ಸಭೆ ಯಲ್ಲಿ ದಾಕಲದ ದೂರುಗಳು ಇದುವರೆವಿಗೂ ವಿಲೇವಾರಿ ಮಾಡಿಲ್ಲ. ಸಾರ್ವಜನಿಕರ ಕೈಗೂ ಸಿಗುತ್ತಿಲ್ಲ ಕರ್ತವ್ಯದ ದಿನಗಳಲ್ಲಿ ಕಚೇರಿಗೆ ಗೈರು ರಜಾದಿನಗಳಲ್ಲಿ ಕಚೇರಿಗೆ ಹಾಜರಾಗುತ್ತಿದ್ದಾರೆ. ಕೂಡರೆ ಇವರ ಮೇಲೆ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಮುಖಂಡರಾದ ಕೆ.ಮಲ್ಲಯ್ಯ, ತಿಮ್ಮೇಗೌಡ, ಎಸ್.ಸಿ.ಕೃಷ್ಣಯಯ್, ವಿಜಯ್ ಕುಮಾರ್, ಶಿವರಾಜು ಬಡೀನ್ ಸಾಬ್, ಶಿವರಾಜ್, ಬಿಡದಿ ಹೋರಾಟಗಾರಾದ ನಾಗರಾಜು, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

----------------------------

28ಕೆಆರ್ ಎಂಎನ್ 3.ಜೆಪಿಜಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿದ ರೈತರು ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.

----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಶ್ರೀಪರ್ಣಾ ಸಾಹಾಗೆ ಡಾ. ಅಪ್ಪಾಜಿ ನಾವೀನ್ಯತಾ ಪ್ರಶಸ್ತಿ
ಜ್ಞಾನೇಶ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ