ರಾಜಕೀಯ ಸೇರುವ ಬಗ್ಗೆ ವಿಷ್ಣುಗೆ ಇತ್ತು ಗೊಂದಲ!

Published : Sep 28, 2026, 08:05 AM IST
Dr Vishnuvardhan

ಸಾರಾಂಶ

ನಟ ವಿಷ್ಣುವರ್ಧನ ಅವರ ರಾಜಕೀಯ ಮತ್ತಿತರ ಕ್ಷೇತ್ರಗಳ ಕುರಿತಾದ ಆಸಕ್ತಿಗಳು, ಕನ್ನಡ ಪ್ರೇಮ, ಚಿತ್ರಗಳ ಮೂಲಕ ನೀಡಿದ ಸಂದೇಶಗಳ ಕುರಿತು ‘ವಿಷ್ಣುವರ್ಧನ ಅಮೃತ ಮಹೋತ್ಸವ’ದಲ್ಲಿ ಕನ್ನಡ ದಿನಪತ್ರಿಕೆಗಳ ಸಂಪಾದಕರು ಭಾಗವಹಿಸಿ ನಟನ ಜೊತೆಗಿನ ಒಡನಾಟಗಳನ್ನು ಹಂಚಿಕೊಂಡರು.

ಬೆಂಗಳೂರು : ನಟ ವಿಷ್ಣುವರ್ಧನ ಅವರ ರಾಜಕೀಯ ಮತ್ತಿತರ ಕ್ಷೇತ್ರಗಳ ಕುರಿತಾದ ಆಸಕ್ತಿಗಳು, ಕನ್ನಡ ಪ್ರೇಮ, ಚಿತ್ರಗಳ ಮೂಲಕ ನೀಡಿದ ಸಂದೇಶಗಳ ಕುರಿತು ‘ವಿಷ್ಣುವರ್ಧನ ಅಮೃತ ಮಹೋತ್ಸವ’ದಲ್ಲಿ ಕನ್ನಡ ದಿನಪತ್ರಿಕೆಗಳ ಸಂಪಾದಕರು ಭಾಗವಹಿಸಿ ನಟನ ಜೊತೆಗಿನ ಒಡನಾಟಗಳನ್ನು ಹಂಚಿಕೊಂಡರು.

ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ವಿಷ್ಣುವರ್ಧನ್ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇತ್ತು. ಸ್ನೇಹಿತ ಅಂಬರೀಷ್ ಸೇರಿ ತಮ್ಮ ಆಪ್ತರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದರು. ಆದರೆ, ಅವರಿಗೆ ರಾಜಕೀಯ ಪ್ರವೇಶದ ಬಗ್ಗೆ ಗೊಂದಲವಿತ್ತು. ರಾಜಕೀಯ ಪ್ರವೇಶಿಸಿದರೆ ಸಿನಿಮಾ ಮತ್ತು ಅಭಿಮಾನಿಗಳನ್ನು ಕಳೆದುಕೊಳ್ಳಬೇಕಾಗುವುದೇನೋ ಎನ್ನುವ ಅಳುಕು ಇತ್ತು ಎಂದರು.

ರಾಜಕೀಯ ಸೇರಿದರೆ ಸಿನಿಮಾ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ. ನನ್ನ ರಾಜಕೀಯ ಪ್ರವೇಶವನ್ನು ಅಭಿಮಾನಿಗಳು ಸ್ವೀಕರಿಸುವರಾ? ಎನ್ನುವ ಗೊಂದಲವಿತ್ತು. ಆದರೆ, ರಾಜಕೀಯ ಪಕ್ಷಗಳ ನಾಯಕರು ಟಿಕೆಟ್ ನೀಡಲು ಸಿದ್ದರಾಗಿದ್ದರು. ಗೊಂದಲದಿಂದಾಗಿ ಅವರು ರಾಜಕೀಯ ಪ್ರವೇಶ ಮಾಡಲೇ ಇಲ್ಲ. ಲೌಕಿಕ ಮತ್ತು ದೈವಿಕ ವಿಚಾರಗಳತ್ತಾ ವಾಲಿದರು ಎಂದು ರವಿ ಹೆಗಡೆ ತಿಳಿಸಿದರು.

ಒಳ್ಳೆಯವರಿಗೆ ಯಶಸ್ಸು ದಕ್ಕಲ್ಲ:

ಸಾಮಾನ್ಯವಾಗಿ ರಾಜಕೀಯದಲ್ಲಿ ಒಳ್ಳೆಯ ಜನರಿಗೆ ಯಶಸ್ಸು ದಕ್ಕುವುದಿಲ್ಲ. ಏಕೆಂದರೆ, ಇಷ್ಟವಿಲ್ಲದ, ಬೇಡದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಒಂದು ವೇಳೆ ವಿಷ್ಣುವರ್ಧನ್ ರಾಜಕೀಯ ಪ್ರವೇಶಿಸಿದ್ದರೆ ಯಶಸ್ಸು ಕಷ್ಟವಾಗಿರುತ್ತಿತ್ತು. ಆದರೆ, ಅವರ ಸಮಕಾಲೀನರು ಸಂಸದ, ಶಾಸಕರಾಗಿದ್ದರು ಎಂದು ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.

ಅಭಿಮಾನಿ ಬಳಗವನ್ನು ಉಳಿಸಿಕೊಂಡಿದ್ದಾರೆ ವಿಷ್ಣು

ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ವಿಷ್ಣುವರ್ಧನ ಅವರು ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ನಮ್ಮಿಂದ ಮರೆಯಾದ ನಂತರವೂ ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿದ್ದಾರೆ. ಅನೇಕ ವರ್ಷಗಳ ನಂತರವೂ 20,000 ಜನ ಸೇರಿ 75ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದರೆ ಸಾಮಾನ್ಯ ಸಂಗತಿಯಲ್ಲ. ಒಬ್ಬ ನಟ ಜನ ಮಾನಸದಲ್ಲಿ ಹೇಗೆ ಉಳಿದುಕೊಂಡಿದ್ದಾನೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ಅಭಿಮಾನಗಳೇ ಸಾಕ್ಷಿ ಎಂದರು.

ವಿಜಯವಾಣಿ ಪತ್ರಿಕೆ ಸಂಪಾದಕ ಚನ್ನೇಗೌಡ, ಉದಯವಾಣಿ ಪತ್ರಿಕೆ ಸಂಪಾದಕ ರವಿಶಂಕರ್, ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಮಹಾಬಲ ಸೀತಾಳಭಾವಿ, ಹಿರಿಯ ಪತ್ರಕರ್ತರಾದ ರಂಗನಾಥ ಭಾರದ್ವಾಜ್, ಸದಾಶಿವ ಶೆಣೈ ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಫುಡ್‌ಸ್ಟ್ರೀಟ್‌ ಆದ ಮಾರುತಿ ಮಂದಿರ ಬಸ್‌ ನಿಲ್ದಾಣ
ರಿಯಾಲ್‌ ಆಸೆ ತೋರಿಸಿ ವ್ಯಾಪಾರಿಗೆ 8 ಲಕ್ಷ ರು, ವಂಚನೆ