ಕನ್ನಡಪ್ರಭ ವಾರ್ತೆ ಮುಧೋಳ
ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಹಾಗೂ ಸಿ.ಬಿ.ಎಸ್.ಇ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಶ್ರೀ ಸಂಗಮ ಕೃಷಿ-ಋಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಿಶಿರ ಶಿವಕುಮಾರ ಮಲಘಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜತೆಗೆ ನಮ್ಮ ಪರಂಪರೆಯ ಕೃಷಿಯನ್ನು ಜನರಿಗೆ ತಲುಪಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆ ಮಾಡುತ್ತಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ರೈತ, ಕೃಷಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ಪ್ರತಿ ವರ್ಷ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಬರುವ ದಿನಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ನಿಮ್ಮ ಸಲಹೆಯೊಂದಿಗೆ ಮುನ್ನಡೆಯುತ್ತೇವೆ ಎಂದರು.ಶಾಲಾ ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಶಿವಾನಿ ಮಲಘಾಣ, ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ, ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ, ಪ್ರಾಚಾರ್ಯ ಸುರೇಶ ಭಜಂತ್ರಿ ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿನಿಯರಾದ ಭವಾನೇಶ್ವರಿ ಲೋಂಡೆ ಸ್ವಾಗತಿಸಿದರು. ವೀಣಾ ಪರೀಟ ಮತ್ತು ಸಂಜನಾ ಕುಮಕಾಲೆ ನಿರೂಪಿಸಿ, ಪ್ರಶಸ್ತಿ ವಿತರಿಸಿದರು. ಕೃತಿ ದೇಶಪಾಂಡೆ ಮತ್ತು ಸಾಕ್ಷಿ ಬಾರಕೇರ ವಂದಿಸಿದರು.ಸೇಬು ಹಣ್ಣು ಬೆಳೆದ ರೈತನಿಗೆ ಪ್ರಶಸ್ತಿ ಪ್ರದಾನ:ಕುಳಲಿಯ ಸೇಬು ಹಣ್ಣು ಬೆಳೆದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರರಾದ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿತ ರೈತ ಶ್ರೀಶೈಲ ತೇಲಿ ಅವರಿಗೆ 2025ನೇ ಸಾಲಿನ ಶ್ರೀ ಸಂಗಮನ ಕೃಷಿ ಋಷಿ ಹಾಗೂ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಕ್ಷತಾ ಹುಗ್ಗೆನವರ ಹಾಗೂ ಸಂಗಡಿಗರು ರೈತ ದಿನಾಚರಣೆಯ ಕುರಿತು ಭಾವನಾತ್ಮಕ ನೃತ್ಯ ಪ್ರದರ್ಶನ ಮಾಡಿದರು.------
ಪರಿಶುದ್ಧವಾದ ಮಣ್ಣು ಹಾಗೂ ಮಣ್ಣಲ್ಲಿ ಬೆಳೆಯುವ ಬೆಳೆಗಳು ಇಂದು ಅಪಾಯಕಾರಿ ಮಟ್ಟ ಮೀರಿ ವಿಷಕಾರಿಯಾಗುತ್ತಿದ್ದು, ಅದನ್ನು ತಡೆಗಟ್ಟಲು ಯುವ ರೈತರು ಹಾಗೂ ಭಾವಿ ರೈತರು ಮುಂದಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರೈತರ ಬದುಕು ಹಾಗೂ ಕೃಷಿಯನ್ನು ಪರಿಚಯಿಸುವ ಕಾರ್ಯವಾಗಬೇಕಿದೆ. ಸರಕಾರ ರೈತರಿಗೆ ಹಾಗೂ ಜನಸಾಮಾನ್ಯರಿಗಾಗಿ ಹಲವಾರು ಯೋಜನೆ ಅನುಷ್ಠಾನಗೊಳಿಸಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು.- ಶ್ರೀಶೈಲ ತೇಲಿ ಗತಿಪರ ರೈತ ಕುಳಲಿ