ಹೊಳೆನರಸೀಪುರ ತಾಲೂಕಿನ ರೈತರಿಗೂ ಬರಪರಿಹಾರ ಬಂದಿಲ್ಲ

KannadaprabhaNewsNetwork |  
Published : Nov 13, 2026, 01:45 AM IST
12ಎಚ್ಎಸ್ಎನ್7 : ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಶಾಸಕ ಎಚ್.ಡಿ.ರೇವಣ್ಣ ಕರೆದಿದ್ದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕನ್ನಡಪ್ರಭ ಪತ್ರಿಕೆಯನ್ನು ಓದುತ್ತಿದ್ದರು. | Kannada Prabha

ಸಾರಾಂಶ

ತೋಟಗಾರಿಕೆಯ ೭ ಸಾವಿರ ಎಕರೆ ಮತ್ತು ಕೃಷಿ ಇಲಾಖೆಯ ₹ ೪೦ ಸಾವಿರ ಎಕರೆ ಕೃಷಿ ಭೂಮಿಯ ರೈತರಿಗೆ ಬರ ಪರಿಹಾರ ಹಣ ನೀಡಬೇಕಿದ್ದ ರಾಜ್ಯ ಸರ್ಕಾರ ಇಲ್ಲಿಯ ತನಕ ಪರಿಹಾರದ ಹಣ ನೀಡಿಲ್ಲ. ರೈತರಿಗೆ ಬರ ಪರಿಹಾರ ಹಣ ವಿತರಿಸಲು ತಾರತಮ್ಯ ತೋರುತ್ತಿರುವ ರಾಜ್ಯ ಸರ್ಕಾರವೂ ರೈತರಿಗೆ ನ್ಯಾಯಸಮ್ಮತವಾಗಿ ಕೊಡಬೇಕಿರುವ ಪರಿಹಾರದ ಹಣವನ್ನು ಹೋರಾಟ ಮಾಡಿಯಾದರೂ ಕೊಡಿಸಬೇಕಾಗುತ್ತದೆ ಎಂದರು. ಮಳೆ ಇಲ್ಲದೇ ಕೆರೆಕಟ್ಟಗಳು ಒಣಗಿದ್ದು. ಜಾನುವಾರುಗಳಿಗೆ ನೀರು ಕುಡಿಸಲಾಗದೇ ರೈತರು ಪರಿತಪಿಸುತ್ತಿದ್ದು, ಇಂತಹ ಸನ್ನವೇಶದಲ್ಲಿ ಕೆರೆಕಟ್ಟೆಗಳಿಗೆ ನೀರ ಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಮ್ಮ ತಾಲೂಕಿನಲ್ಲಿ ಕೃಷಿ ಭೂಮಿ ಹೊಂದಿರುವ ೩೪,೮೫೦ ರೈತರಿಗೆ ಇಲ್ಲಿಯ ತನಕ ಬರ ಪರಿಹಾರದ ಐದು ಸಾವಿರ ರು. ಹಣ ಒಬ್ಬರಿಗೂ ಬಂದಿಲ್ಲ. ಒಟ್ಟು ೧೭,೪೨,೫೦,೦೦೦ ರು. ಹಣ ಪರಿಹಾರ ನೀಡಬೇಕಿದ್ದು, ಹಣವೂ ಇನ್ನೂ ಬರುತ್ತಲೇ ಇದೆ ಎಂದು ಶಾಸಕ ಎಚ್. ಡಿ. ರೇವಣ್ಣ ರಾಜ್ಯಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತೋಟಗಾರಿಕೆಯ ೭ ಸಾವಿರ ಎಕರೆ ಮತ್ತು ಕೃಷಿ ಇಲಾಖೆಯ ₹ ೪೦ ಸಾವಿರ ಎಕರೆ ಕೃಷಿ ಭೂಮಿಯ ರೈತರಿಗೆ ಬರ ಪರಿಹಾರ ಹಣ ನೀಡಬೇಕಿದ್ದ ರಾಜ್ಯ ಸರ್ಕಾರ ಇಲ್ಲಿಯ ತನಕ ಪರಿಹಾರದ ಹಣ ನೀಡಿಲ್ಲ. ರೈತರಿಗೆ ಬರ ಪರಿಹಾರ ಹಣ ವಿತರಿಸಲು ತಾರತಮ್ಯ ತೋರುತ್ತಿರುವ ರಾಜ್ಯ ಸರ್ಕಾರವೂ ರೈತರಿಗೆ ನ್ಯಾಯಸಮ್ಮತವಾಗಿ ಕೊಡಬೇಕಿರುವ ಪರಿಹಾರದ ಹಣವನ್ನು ಹೋರಾಟ ಮಾಡಿಯಾದರೂ ಕೊಡಿಸಬೇಕಾಗುತ್ತದೆ ಎಂದರು. ಮಳೆ ಇಲ್ಲದೇ ಕೆರೆಕಟ್ಟಗಳು ಒಣಗಿದ್ದು. ಜಾನುವಾರುಗಳಿಗೆ ನೀರು ಕುಡಿಸಲಾಗದೇ ರೈತರು ಪರಿತಪಿಸುತ್ತಿದ್ದು, ಇಂತಹ ಸನ್ನವೇಶದಲ್ಲಿ ಕೆರೆಕಟ್ಟೆಗಳಿಗೆ ನೀರ ಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌