ಬಿತ್ತಿದ ರಾಗಿ ಒಣಗುವ ಭೀತಿಯಲ್ಲಿ ಹೊಸದುರ್ಗದ ರೈತರು

KannadaprabhaNewsNetwork |  
Published : Oct 05, 2025, 01:00 AM IST
ಪೋಟೋ, 4ಎಚ್‌ಎಸ್‌ಡಿ1: ಮಳೆ ಬಾರದಿದ್ದರಿಂದ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ಜಮೀನೊಂದರಲ್ಲಿ ಭಿತ್ತನೆ ಮಾಡಿರುವ ರಾಗಿ ಬೆಳೆ ಒಣಗುತ್ತಿರುವುದು  | Kannada Prabha

ಸಾರಾಂಶ

ಮಳೆ ಬಾರದಿದ್ದರಿಂದ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ಜಮೀನೊಂದರಲ್ಲಿ ಭಿತ್ತನೆ ಮಾಡಿರುವ ರಾಗಿ ಬೆಳೆ ಒಣಗುತ್ತಿರುವುದು.

ಎನ್‌ ವಿಶ್ವನಾಥ್‌ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಉತ್ತರೆಯೂ ಬರಲಿಲ್ಲ ಹಸ್ತಾನೂ ಬರುವಂತೆ ಕಾಣುತ್ತಿಲ್ಲ ಬಿತ್ತಿದ ರಾಗಿ ಬೆಳೆ ಮಳೆಯಿಲ್ಲದೆ ಒಣಗಲಾರಂಭಿಸಿವೆ. ಮಳೆ ಇಂದು ಬರುತ್ತಾ ನಾಳೆ ಬರುತ್ತಾ ಎಂದು ಮುಗಿಲು ನೋಡುವಂತಾಗಿದೆ ರೈತನ ಬದುಕು.

ಹೊಸದುರ್ಗ ತಾಲೂಕಿನ ರೈತರು ಹಲವು ದಶಕಗಳಿಂದ ಒಂದಿಲ್ಲಾ ಒಂದು ಪ್ರಾಕೃತಿಕ ಅವಾಂತರಗಳಿಗೆ ತುತ್ತಾಗುತ್ತಾ ಬರುತ್ತಿದ್ದಾರೆ. ಈ ಬಾರಿ ಪೂರ್ವ ಮುಂಗಾರು ಮಳೆ ಸರಿಯಾಗಿ ಬರದಿದ್ದರಿಂದ ಬಿತ್ತಿದ ಸಾವೆ ಒಣಗಿಹೋಯಿತು. ಆಗಸ್ಟ್‌ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಬೆಳೆಯನ್ನಾದರೂ ಬೆಳೆಯೋಣ ಎಂದು ರಾಗಿ ಬಿತ್ತನೆ ಮಾಡಿದರು. ಉತ್ತಮ ಮಳೆಯಿಂದ ಬೆಳೆಯೂ ಚನ್ನಾಗಿ ಬೆಳೆಯಲಾರಂಭಿಸಿತು ಇದೆ ರೀತಿ ಮಳೆಯಾದರೆ ಈ ಬಾರಿ ಉತ್ತಮ ರಾಗಿ ಬೆಳೆ ಬೆಳೆಯಬಹುದು ಎಂದು ಕನಸು ಕಾಣುತ್ತಿದ್ದ ರೈತನಿಗೆ ಪುಬ್ಬ, ಉತ್ತರೆ, ಹಸ್ತಾ ಮಳೆಗಳು ಕೈಕೊಟ್ಟಿದ್ದರಿಂದ ರೈತನ ಬದಕು ಮುಂದೇನು ಎನ್ನುವಂತಾಗಿದೆ.

*ವಾಡಿಕೆಗಿಂತ ಕಡಿಮೆ ಮಳೆ: ಇಲಾಖೆಯ ವರದಿ ಪ್ರಕಾರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.13ರಷ್ಟು ಕಡಿಮೆಯಾಗಿದೆ. ಅತಿ ಹೆಚ್ಚು ಪ್ರದೇಶದಲ್ಲಿ ಭಿತ್ತನೆಯಾಗಿರುವ ಕಸಬಾ ಹೋಬಳಿಯಲ್ಲಿ ಶೇ.16ರಷ್ಟು ಮಳೆ ಕಡಿಮೆಯಾದರೆ ಶ್ರೀರಾಂಪುರ ಹೋಬಳಿಯಲ್ಲಿ ಶೇ.6ರಷ್ಟು ಹೆಚ್ಚುವರಿ ಮಳೆಯಾಗಿದೆ, ಆಗಸ್ಟ್‌ ತಿಂಗಳಲ್ಲಿ ಕಸಬಾ ಹೊಬಳಿಯಲ್ಲಿ ಶೇ.59, ಮಾಡದಕೆರೆ ಶೇ.112.1, ಮತ್ತೋಡು ಶೇ.112.9, ಶ್ರೀರಾಂಪುರ ಶೇ.114.7ರಷ್ಟು ಒಟ್ಟು 114.9ರಷ್ಟು ಮಳೆಯಾದರೆ ಸೆಪ್ಟಂಬರ್‌ನಲ್ಲಿ ಶೇ.71ರಷ್ಟು ಮಳೆ ಕಡಿಮೆಯಾಗಿದೆ.

*ಬೆಳೆ ಸಮೀಕ್ಷೆ ಕಡ್ಡಾಯ: ಬೆಳೆ ನಷ್ಠಕ್ಕೆ ಸರ್ಕಾರಿಂದ ಪರಿಹಾರ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ತಾವು ಬೆಳೆದ ಬೆಳೆಯನ್ನು ಪಹಣಿಯಲ್ಲಿ ನಮೂದು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಈ ಹಿನ್ನಲೆಯಲ್ಲಿ ರೈತರು ತಾವೇ ಸ್ವತಃ ತಮ್ಮ ಮೋಬೈಲ್‌ನಲ್ಲಿ ಸರ್ಕಾರದ ಆಪ್‌ ಬಳಸಿಕೊಂಡು ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು ಒಂದು ವೇಳೆ ತಮಗೆ ಸಮೀಕ್ಷೆ ಮಾಡಿಕೊಳ್ಳಲು ಬಾರದಿದ್ದರೆ ಗ್ರಾಮ ಲೆಕ್ಕಾಧಿಕಾರಿಗಳ ಅಡಿಯಲ್ಲಿ ಬರುವ ಖಾಸಗಿ ನಿವಾಸಿಗಳ ಸಹಾಯ ಪಡೆದು ಸಮೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಈಶ ತಿಳಿಸಿದರು.

ನೆರವಿನ ನೀರೀಕ್ಷೆಯಲ್ಲಿ ರೈತ: ಸರ್ಕಾರ ರಾಗಿ ಸೇರಿದಂತೆ ಸಿರಿಧಾನ್ಯ ಬೆಳೆಗಳಿಗೆ 5 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ ಕೃಷಿಯಲ್ಲಿ ನಷ್ಟ ಕಾಣುತ್ತಿದ್ದ ರೈತನ ಬದುಕಿನಲ್ಲಿ ಭರವಸೆಯ ಚಿಗುರು ಕಾಣಿಸತೊಡಗಿತ್ತು. ಕಳೆದ 2 ವರ್ಷದಿಂದ ಸಾವೆ ಹಾಗೂ ರಾಗಿ ಬೆಳೆಯಿಂದ ಸ್ವಲ್ಪ ಪ್ರಮಾಣದ ಹಣ ನೋಡುತ್ತಿದ್ದ ರೈತ ಉತ್ತಮ ಬೆಳೆ ಬೆಳೆಯುವ ನೀರೀಕ್ಷೆ ಹೊಂದಿದ್ದ. ಆದರೆ ಪ್ರಕೃತಿಯ ಮುನಿಸಿನಿಂದ ಮಳೆ ಬಾರದೆ ಈಗಾಗಲೇ ಶೇ.50ರಷ್ಟು ಬೆಳೆ ಒಣಗಿದ್ದು ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಸಂಪೂರ್ಣವಾಗಿ ಬೆಳೆ ಹಾಳಾಗುತ್ತದೆ ಹಾಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸುವುದೇ ಎಂಬ ನೀರೀಕ್ಷಯೆಲ್ಲಿದ್ದಾನೆ ರೈತ.ಕಸಬಾ ಹೋಬಳಿಯಲ್ಲಿ 12320 ಹೆಕ್ಟೇರ್‌, ಶ್ರೀರಾಂಪುರ -9530 ಹೆಕ್ಟೇರ್‌, ಮಾಡದಕೆರೆ -5585 ಹೆಕ್ಟೇರ್‌, ಮತ್ತೋಡು -7590 ಹೆಕ್ಟೇರ್‌ ಪ್ರದೇಶದಲ್ಲಿ ಒಟ್ಟು 35025 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಭಿತ್ತನೆಯಾಗಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಉತ್ತಮ ಇಳುವರಿಯ ನೀರೀಕ್ಷೆಯಲ್ಲಿದ್ದ ರೈತರಿಗೆ ಹಿನ್ನಡೆಯಾಗಿದೆ ರೈತರು ನೀರಾಶೆಯಾಗುವುದು ಬೇಡ ಹವಾಮಾನ ಇಲಾಕೆಯ ಪ್ರಕಾರ ಸದ್ಯದಲ್ಲಿಯೇ ಮಳೆ ಬರುವ ನೀರೀಕ್ಷೆಯಿದೆ.

-ಸಿ.ಎಸ್‌.ಈಶ ಸಹಾಯಕ ಕೃಷಿ ನಿರ್ದೇಶಕ ಹೊಸದುರ್ಗ ಪ್ರಕೃತಿಯ ಮೇಲೆ ಆಗುತ್ತಿರುವ ಅನಾಚಾರದಿಂದ ಕೃಷಿಗೆ ಪೂರಕವಾದ ಮಳೆ ನೀರೀಕ್ಷೆ ಸಾಧ್ಯವಿಲ್ಲ ಆದ್ದರಿಂದ ಸರ್ಕಾರ ಉಚಿತ ಸ್ಕೀಂಗಳನ್ನು ನೀಡುವ ಬದಲು ಕೃಷಿಗೆ ಅನುಕೂಲವಾಗುವಂತಹ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕು ಆಗ ಮಾತ್ರ ರೈತ ಆರ್ಥಿಕವಾಗಿ ಸದೃಡನಾಗಲು ಸಾಧ್ಯ.

-ಸೋಮೇನಹಳ್ಳಿ ಸ್ವಾಮಿ, ರೈತ ಮುಖಂಡ

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’