ಅಲ್ಪಸಂಖ್ಯಾತರ ಓಲೈಕೆಗೆ ರೈತರ ಜಮೀನು ವಕ್ಫ್‌ ಪಾಲು

KannadaprabhaNewsNetwork |  
Published : Nov 07, 2024, 11:45 PM IST
7ಎಚ್ಎಸ್ಎನ್7ಎ : ಸಕಲೇಶಪುರ ಪಟ್ಟಣದಲ್ಲಿ ರಾಜ್ಯ ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ಹಾಗೂ ವಕ್ಫ್ ಮಂಡಲಿಯು ನಡೆಸುತ್ತಿರುವ ಆಸ್ತಿ ಕಬಳಿಕೆ ನೀತಿ ಖಂಡಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್ ಮೇಘನಾರವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮುಸ್ಲಿಂ ಓಲೈಕೆ ಕಾಂಗ್ರೆಸ್ ಸರ್ಕಾರ ರೈತರ ಜಮೀನನ್ನು ವಕ್ಫ್‌ ಬೋರ್ಡಿಗೆ ಸೇರಿಸುವ ಸಾಧ್ಯತೆಯಿದೆ. 2013ರಲ್ಲಿ ಇದ್ದ ಯುಪಿಎ ಸರ್ಕಾರ ವಕ್ಫ್ ಬೋರ್ಡ್ ಕಾನೂನು ಯಾವುದೇ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ ಇದರ ವಿರುದ್ಧ ಯಾರೇ ಆಗಲಿ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಾರದಂತ ಹಕ್ಕನ್ನು ನೀಡಲಾಗಿದೆ. ಜಮೀರ್‌ ಅಹಮ್ಮದ್ ಎಂಬ ಕೋಮುವಾದಿ ಸಚಿವ ಅಷ್ಟರೊಳಗೆ ಸಾವಿರಾರು ಎಕರೆ ರೈತರ ಜಮೀನನ್ನು ವಕ್ಫ್‌ ಮಂಡಳಿಗೆ ಸೇರಿಸಲು ಹುನ್ನಾರ ನಡೆಸಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರ ಜಮೀರ್‌ ಅಹಮ್ಮದ್ ಖಾನ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಜ್ಯದಲ್ಲಿ ಹಿಂದೂ ವಿರೋಧಿ ಧರ್ಮಾಧಾರಿತ ಕೋಮುವಾದಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತಿಯಾದ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ರಾಜ್ಯದ ರೈತರ, ಮಠಗಳ, ಶಾಲೆಗಳ ಮತ್ತು ಶತಮಾನಗಳ ಹಿಂದಿನ ದೇವಸ್ಥಾನಗಳ ಜಮೀನು ವಕ್ಫ್‌ ಬೋರ್ಡ್‌ ಪಾಲಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಬಿಜೆಪಿ ತಾಲೂಕು ಅಧಕ್ಷ ವಳಲಹಳ್ಳಿ ಅಶ್ವಥ್ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಮತ್ತು ವಕ್ಫ್ ಮಂಡಲಿಯು ನಡೆಸುತ್ತಿರುವ ಆಸ್ತಿ ಕಬಳಿಕೆ ನೀತಿಯನ್ನು ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಈ ಸಂದರ್ಭದಲ್ಲಿ ರಾಜ್ಯದ ಬೆಳೆಗಾರರು ಮತ್ತು ರೈತರು ನಾಳೆಯಿಂದಲೇ ತಮ್ಮ ತಮ್ಮ ಜಮೀನಿನ ಪಹಣಿಯನ್ನ ಪರಿಶೀಲಿಸಿಕೊಂಡು ತಮ್ಮ ಹಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಸ್ಲಿಂ ಓಲೈಕೆ ಕಾಂಗ್ರೆಸ್ ಸರ್ಕಾರ ರೈತರ ಜಮೀನನ್ನು ವಕ್ಫ್‌ ಬೋರ್ಡಿಗೆ ಸೇರಿಸುವ ಸಾಧ್ಯತೆಯಿದೆ. 2013ರಲ್ಲಿ ಇದ್ದ ಯುಪಿಎ ಸರ್ಕಾರ ವಕ್ಫ್ ಬೋರ್ಡ್ ಕಾನೂನು ಯಾವುದೇ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ ಇದರ ವಿರುದ್ಧ ಯಾರೇ ಆಗಲಿ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಾರದಂತ ಹಕ್ಕನ್ನು ನೀಡಲಾಗಿದೆ. ಈ ನಿರಂಕುಶ ಸರ್ವಾಧಿಕಾರವನ್ನು ಮೊಟಕುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು ಇದನ್ನು ಮನಗಂಡ ಜಮೀರ್‌ ಅಹಮ್ಮದ್ ಎಂಬ ಕೋಮುವಾದಿ ಸಚಿವ ಅಷ್ಟರೊಳಗೆ ಸಾವಿರಾರು ಎಕರೆ ರೈತರ ಜಮೀನನ್ನು ವಕ್ಫ್‌ ಮಂಡಳಿಗೆ ಸೇರಿಸಲು ಹುನ್ನಾರ ನಡೆಸಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರ ಜಮೀರ್‌ ಅಹಮ್ಮದ್ ಖಾನ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಕೋಮು ದಳ್ಳುರಿಗೆ ತಳ್ಳಲಾಗುತ್ತಿದೆ. ವಾಲ್ಮೀಕಿ ಹಗರಣ, ಮೂಡಾ ಹಗರಣಗಳಂತ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷ ಇದೀಷ್ಟು ಸಾಲದಂತೆ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಭಾಗಿಯಾದವರ ಮೊಕದ್ದಮೆಯನ್ನು ಹಿಂಪಡೆಯುವ ಮೂಲಕ ಅತಿಯಾದ ಮುಸ್ಲಿಂರ ಓಲೈಕೆಯನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೇವಲ ರೈತರ ಜಮೀನನ್ನು ಮಾತ್ರಲ್ಲದೆ ಶಾಲಾ ಕಾಲೇಜುಗಳ, ಮಠ ಮಾನ್ಯಗಳ ಹಾಗೂ ದೇವಸ್ಥಾನಗಳ ಜಮೀನನ್ನು ವಕ್ಫ್ ಬೋರ್ಡ್‌ ನೀಡಲು ಮುಂದಾಗಿರುವುದರಿಂದ ಹಿಂದೂಗಳಲ್ಲಿ ಅತ್ಯಂತ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಸಚಿವ ಜಮೀರ್‌ ಅಹಮ್ಮದ್ ಸಹ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಕೌಡಳ್ಳಿ ಲೋಹಿತ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಚಾರ ಮತ್ತು ಲೂಟಿಕೋರ ಸರ್ಕಾರವಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ರೈತರ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಅಧಿಕಾರ ದಾಹಕ್ಕಾಗಿ ವಕ್ಫ್‌ ಮಂಡಳಿಯ ಆಸ್ತಿ ಕಬಳಕೆಯನ್ನು ಬೆಂಬಲಿಸುವ ಮೂಲಕ ರಾಜ್ಯದ ರೈತರನ್ನೇ ಬಲಿ ಕೊಡಲು ಹೊರಟಿರುವುದು ದುರದೃಷ್ಟಕರ, ಮುಖ್ಯಮಂತ್ರಿಗಳೇ ಈ ಕೃತ್ಯಕ್ಕೆ ಆದೇಶ ನೀಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಒಬ್ಬ ಸಚಿವನಾಗಿ ಜಮೀರ್‌ ಅಹಮ್ಮದ್ ನಡೆದುಕೊಳ್ಳುತ್ತಿರುವ ನಡೆ ಸಂವಿಧಾನ ವಿರೋಧಿಯಾಗಿದೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಮ್ಮ ಪಕ್ಷ ರೈತರ ಪರವಾಗಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಮತ್ತು ವಕ್ಫ್ ಬೋರ್ಡ್‌ನ ಕುತಂತ್ರಕ್ಕೆ ರೈತರನ್ನು ಬಲಿಯಾಗಲು ಬಿಡುವುದಿಲ್ಲ. ತಾಲೂಕಿನ ಎಲ್ಲ ರೈತ ಬೆಳೆಗಾರರು ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನೀವು ವಾಸಮಾಡುವ ಮನೆಗಳನ್ನೇ ವಕ್ಫ್ ಮಂಡಳಿ ಹೆಸರಿಗೆ ಬರೆದು ನಮ್ಮನ್ನು ಒಕ್ಕಲೆಬ್ಬಿಸಬಹುದು ಎಂದು ಎಚ್ಚರಿಕೆ ಮಾತುಗಳನ್ನಾಡಿದರು. ಒಂದು ವರ್ಗದ ಜನರ ಪರವಾಗಿ ನಿಂತು ರಾಜ್ಯದ ರೈತರಿಗೆ ಅನ್ಯಾಯ ಎಸಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಂದಿನ ದಿನಗಳಲ್ಲಿ ನಿಮಗೆ ಒಳಿತಾಗುವುದಿಲ್ಲ ರೈತರ ಕಣ್ಣೀರಿನ ಶಾಪ ನಿಮಗೆ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ೧೧ ಗಂಟೆಗೆ ಪಟ್ಟಣದ ಹಳೇಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ತಾಲೂಕು ಬಿಜೆಪಿ ಮಂಡಲ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಮತ್ತು ವಕ್ಫ್ ಮಂಡಳಿಯು ನಡೆಸುತ್ತಿರುವ ಆಸ್ತಿ ಕಬಳಿಕೆ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಮಿನಿ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ನಂತರ ತಹಸೀಲ್ದಾರ್‌ ಮೇಘನಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಮಧು ಬೊಮ್ಮನಕೆರೆ ಮತ್ತು ಅಗ್ನಿ ಸೋಮಶೇಖರ್‌, ಜಿ ಮಹಿಳಾ ಮೋರ್ಚಾ ಅಧಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ವಕ್ತಾರ ಸಾ.ಸು ವಿಶ್ವನಾಥ್, ಬಿಜೆಪಿ ನಗರ ಅಧ್ಯಕ್ಷ ದಿಂಬು ಲೋಕೇಶ್, ಯುವ ಮೋರ್ಚಾ ಅಧ್ಯಕ್ಷ ನಿಕಿಲ, ಪುರಸಭಾ ಸದಸ್ಯೆ ವನಜಾಕ್ಷಿ, ಪಕ್ಷದ ಮುಖಂಡರುಗಳಾದ ಶಿವಪ್ರಕಾಶ್ ಧನಾವತ್, ನವೀನ್ ಶೆಟ್ಟಿ, ಷಣ್ಮುಖ, ಆರ್ಶೀವಾದ್, ಬಿಜೆಪಿ ಶಕ್ತಿ ಕೇಂದ್ರ ಮತ್ತು ಬೂತ್ ಅಧ್ಯಕ್ಷರು, ಮಹಿಳಾ ಮೋರ್ಚಾ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ