ರಾಜ್ಯದಲ್ಲಿ ಬಡವರ ಏಳಿಗೆಗಾಗಿ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಪಕ್ಷದ ಸರ್ಕಾರ ರೈತರ ಸಾಲಮನ್ನಾ, ಸರ್ಕಾರಿ ನೌಕರರ ಹಳೆ ಪಿಂಚಣಿ ಜಾರಿಗೆ ತರಬೇಕೆಂಬ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಆದರೆ, ಇನ್ನೂ ಒಂದೂವರೆ ವರ್ಷ ನಮ್ಮ ಸರ್ಕಾರವರಲಿದ್ದು, ಈ ಅವಧಿಯಲ್ಲಿ ಈ ಬೇಡಿಕೆಗಳ ಈಡೇರಿಕೆಗೆ ಚಿಂತನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅದ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ಬಡವರ ಏಳಿಗೆಗಾಗಿ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಪಕ್ಷದ ಸರ್ಕಾರ ರೈತರ ಸಾಲಮನ್ನಾ, ಸರ್ಕಾರಿ ನೌಕರರ ಹಳೆ ಪಿಂಚಣಿ ಜಾರಿಗೆ ತರಬೇಕೆಂಬ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಆದರೆ, ಇನ್ನೂ ಒಂದೂವರೆ ವರ್ಷ ನಮ್ಮ ಸರ್ಕಾರವರಲಿದ್ದು, ಈ ಅವಧಿಯಲ್ಲಿ ಈ ಬೇಡಿಕೆಗಳ ಈಡೇರಿಕೆಗೆ ಚಿಂತನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅದ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಪರವಾಗಿ ಪ್ರಚಾರಕ್ಕೆ ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿಯಿಂದ ಸಾಲಮನ್ನಾ ಮಾಡಲು ಆಗಲ್ಲ. ಆದರೆ, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಏನು ಸಹಾಯ ಮಾಡಬೇಕು ಆ ಸಹಾಯ ನಾವು ಮಾಡುತ್ತೇವೆ ಎಂದರು.
ಹಾಗೆಯೇ, ನಾವು ಚುನಾವಣೆಯಲ್ಲಿ ನೀಡಿರುವ ಪ್ರನಾಳಿಕೆಯತೆಯೇ ಹಳೆ ಪಿಂಚಮಿ ವ್ಯವಸ್ಥೆ ಜಾರಿಗೆ ತರಲು ಬದ್ಧ, ಇದಕ್ಕೆ ಇನ್ನೂ ಅವಕಾಶವಿದೆ ಎಂಬುದನ್ನು ನೌಕರರು ಅರಿತು ನಮಗೆ ಬೆಂಬಲಿಸಲಿ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ₹1 ಲಕ್ಷ 5 ಸಾವಿರ ಶಾಲೆಗಳು ಬಂದ್ ಆಗಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದ್ದಾರೆ. ವಾರಕ್ಕೆ ದೇಶದಲ್ಲಿ ಐದು ವಿಶ್ವವಿದ್ಯಾಲಯ ಪ್ರಾರಂಭಿಸುವುದಾಗಿ ಮೋದಿ ಹೇಳಿದ್ದರು.
ಆದರೆ, ಕಳೆದ 12 ವರ್ಷಗಳಲ್ಲಿ ಅವರು ಸ್ಥಾಪಿಸಿರುವ ವಿವಿಗಳು ಮೂರಂಕಿ ಸಹ ದಾಟಿಲ್ಲ. ಸ್ವತಂತ್ರ ಸಂದರ್ಭದಲ್ಲಿ ಶೇ 11 ರಷ್ಟು ಇದ್ದ ಸಾಕ್ಷರತೆಯ ಪ್ರಮಾಣ 2014 ರವರೆಗೆ ಶೇ 70ಕ್ಕೆ ಏರಿಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆಂದರು.
ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ, ನಮ್ಮ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗೆ ಮತದಾರರು ಬೆಂಬಲಿಸುತ್ತಾರೆನ್ನುವ ವಿಶ್ವಾಸ ಇದೆ ಎಂದರು.
ತಿರುಕನ ಕನಸು: ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ವಿಜಯೇಂದ್ರ ಅವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ತಿರುಕನ ಕನಸು ಬೀಳುತ್ತಿರುತ್ತದೆ. ಕಾಂಗ್ರೆಸ್ನಿಂದ ೨೫ ಶಾಸಕರು ಬೇರೆ ಪಕ್ಷಕ್ಕೆ ಬರುತ್ತಾರೆ ಎಂದು ಹೇಳುತ್ತಿರುವುದು, ಇದೇ ರೀತಿಯ ಕನಸು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದರು.
ಸಿಜೆಪಿಗೆ ಕಾಂಗ್ರೆಸ್ನಿಂದ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂಬ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ ತಳ್ಳಿ ಹಾಕಿದ ಅವರು ಫಂಡಿಂಗ್ ಪಡೆಯುವುದು ಹಾಗೂ ಆರ್ಟಿಜಿಎಸ್ ಮೂಲಕ ಲಂಚ ಪಡೆಯುವ ವಿಚಾರಗಳ ಬಗ್ಗೆ ವಿಜಯೇಂದ್ರ ಅವರಿಗೆ ಚೆನ್ನಾಗಿ ತಿಳಿದಿದೆ. ಯುವಕರು ಜೈಲಿಗೆ ಹೋದರೆ ಅವರಿಗೆ ಕಾನೂನು ನೆರವು ನೀಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಫಂಡಿಂಗ್ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಕುರಿತ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಎಚ್.ಡಿ. ಕುಮಾರಸ್ವಾಮಿಗೆ ಸ್ಯಾಟಲೈಟ್ ಮೂಲಕ ವಿಷಯ ತಿಳಿಯುತ್ತದೆಯೇ ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕುಮಾರಸ್ವಾಮಿ ಅವರಿಗೆ ಏನಾದರೂ ಸಾಟ್ಲೈಟ್ ಇನ್ಫಾರ್ಮೇಷನ್ ಸಿಗುತ್ತಾ ? ಶಿವಕುಮಾರ, ಸಿದ್ದರಾಮಯ್ಯ ಏನು ಮಾತಾಡಿದ್ದಾರೆ ಅಂತ ನಮಗೂ ಗೊತ್ತಾಗಿಲ್ಲ. ಕುಮಾರಸ್ವಾಮಿ ಅವರಿಗೆ ಹೇಗೆ ಗೊತ್ತಾಗುತ್ತೆ? ಉಹಾಪೋದ ಬಗ್ಗೆ ಆ ರೀತಿ ಏನು ಮಾತಾಡಬಾರದು. ರಾಜಕೀಯ ನಾಯಕರು ಪರಸ್ಪರ ಭೇಟಿ ನಡೀತಾ ಇರುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.