-ಹೋತಪೇಟ್ ತಾಂಡಾದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ, ರೈತರಿಗೆ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಣ್ಣಿನ ಆರೈಕೆ, ಮಾಪನ, ಮೇಲ್ವಿಚಾರಣೆ ಮತ್ತು ಮಣ್ಣಿನ ನಿರ್ವಹಣೆ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಸಲಹೆ ನೀಡಿದರು. ಶಹಾಪುರ ತಾಲೂಕಿನ ಹೋತಪೇಟ್ ತಾಂಡಾದಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಗೋಗಿ ಮತ್ತು ಜವಾಹರ ನವೋದಯ ವಿದ್ಯಾಲಯ ಹೋತಪೇಟ್ ಸಂಯುಕ್ತಾಶ್ರಯದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮತ್ತು ರೈತರಿಗೆ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ರವಿ ಪೂಜಾರಿ ಮಾತನಾಡಿ, ಮಣ್ಣು ಮಾದರಿಗಳ ಸಂಗ್ರಹಣೆ ಮತ್ತು ಮಣ್ಣು ಪರೀಕ್ಷೆ ಮಹತ್ವದ ಕುರಿತು ತಿಳಿಸಿದರು. ಗೋಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪರಶುರಾಮ ನಡುಮನಿ, ರೈತರು ಬೆಳೆ ಪದ್ಧತಿ ಬದಲಾಯಿಸಿ, ಶಿಫಾರಸ್ಸು ಮಾಡಿದ ಪ್ರಮಾಣ ರಸಗೊಬ್ಬರ ಬಳಸಲು ತಿಳಿಸಿದರು
ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮಣ್ಣು ಪರೀಕ್ಷೆ ಮಾಡಿದ ಫಲಿತಾಂಶದ ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಯಿತು. ಪ್ರಗತಿಪರ ರೈತರಾದ ಉಮೇಶ ಮತ್ತು ಸಂತೋಷ ರನ್ನು ಸನ್ಮಾನಿಸಲಾಯಿತು.ಜಗದೀಶ, ಸಹ ಶಿಕ್ಷಕರಾದ ಅರವಿಂದಕುಮಾರ, ಮೋನಾಲಿ, ಶರಣು ಹೊಸಕೇರಾ ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರು ಇದ್ದರು. ಆತ್ಮತಾಂತ್ರಿಕ ವ್ಯವಸ್ಥಾಪಕ ಜಗದಿಶ ನಿರೂಪಿಸಿ, ವಂದಿಸಿದರು.
------ಫೋಟೊ: 13ವೈಡಿಆರ್3: ಶಹಾಪುರ ತಾಲೂಕಿನ ಹೋತಪೇಟ್ ತಾಂಡಾದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮತ್ತು ರೈತರಿಗೆ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಜರುಗಿತು.