ದೇಶ ಅಭಿವೃದ್ಧಿಯಾಗಲು ರೈತರು ಸಬಲರಾಗಿ

KannadaprabhaNewsNetwork |  
Published : Nov 17, 2025, 01:15 AM IST
೧೪ಶಿರಾ೧: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪುರ ಗ್ರಾಮದಲ್ಲಿ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಣವಂತರಿಗೆ ಹಣ ಬಂದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಅದೇ ಬಡವನಿಗೆ ಹಣ ಬಂದು ಆತ ಸದೃಢನಾದರೆ ಮಾತ್ರ ದೇಶ ಪ್ರಗತಿ ಯಾಗುತ್ತದೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಹಣವಂತರಿಗೆ ಹಣ ಬಂದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಅದೇ ಬಡವನಿಗೆ ಹಣ ಬಂದು ಆತ ಸದೃಢನಾದರೆ ಮಾತ್ರ ದೇಶ ಪ್ರಗತಿ ಯಾಗುತ್ತದೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.

ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪುರ ಗ್ರಾಮದಲ್ಲಿ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಆರ್ಥಿಕವಾಗಿ ಸಬಲರಾಗಬೇಕು ಕೇವಲ ಕೃಷಿಯನ್ನು ಮಾತ್ರ ಹೊಂದಿ ಆ ಮೂಲಕ ಅಭಿವೃದ್ಧಿ ಹೊಂದಲು ಕಷ್ಟ ಸಾಧ್ಯ ಆದ್ದರಿಂದ ಕೃಷಿಯ ಜೊತೆಗೆ ಹೈನುಗಾರಿಕೆ ಕುರಿ ಸಾಕಣೆ ಮೇಕೆ ಸಾಕಣೆ ಮೀನುಗಾರಿಕೆ ಎಂತಹ ಹೊಸ ಕಸಬುಗಳನ್ನು ರೂಡಿಸಿಕೊಳ್ಳಬೇಕು. ರೈತರಿಗೆ ಕೂಲಿ ಕಾರ್ಮಿಕರಿಗೆ ನೀಡುವ ಸಾಲವನ್ನು ಎಲ್ಲರು ಸಹ ಸದ್ವಿನಿಯೋಗ ಪಡಿಸಿಕೊಳ್ಳಬೇಕು. ತಮಗೆ ಸಿಕ್ಕ ಅವಕಾಶಗಳನ್ನು ಸಾಲ ಸೌಲಭ್ಯಗಳನ್ನು ಸೂಕ್ತ ವಿಧಾನದಿಂದ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಕಡೆ ಗಮನ ಹರಿಸಬೇಕು. ಹಣವನ್ನು ಖರ್ಚು ಮಾಡಿ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ಚಿಕ್ಕನಾಯಕನಹಳ್ಳಿ ಭಾಗದ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ ಮಾತನಾಡಿ ಕೆ ಎನ್ ರಾಜಣ್ಣನವರು ಅಲ್ಪಸಂಖ್ಯಾತರ ಬಡವರ್ಗದವರ ಎಲ್ಲಾ ಜಾತಿ ಜನಾಂಗದವರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು ಈ ಭಾಗದ ರೈತರ ಕಷ್ಟಗಳನ್ನು ಅರಿತಿರುವುದರಿಂದ ಅವರಿಗೆ ರೈತರಿಗೆ ಸಹಾಯ ಮಾಡುವ ಮನಸ್ಸು ಬಂದಿದೆ ಎಂದು ತಿಳಿಸಿದರು.

ಬುಕ್ಕಾಪಟ್ಟಣ ವಿ ಆರ್ ಎಮ್ ಸತ್ಯನಾರಾಯಣರವರು ಮಾತನಾಡಿ ಕೇವಲ ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಕೆಎನ್ ರಾಜಣ್ಣನವರು ಸಹಾಯ ಮಾಡುತ್ತಿಲ್ಲ ಅವರು ಶಿರಾ ಭಾಗದ ಅದರಲ್ಲಿಯೂ ಬುಕ್ಕಾಪಟ್ಟಣ ಭಾಗದ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಮಲಿಂಗಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಕುಂದಪ್ಪ , ಮಾಜಿ ಶಾಸಕ ಸಾಲಿಂಗಯ್ಯ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಜಿಎಸ್ ರವಿ, ಸಿಂಗದಹಳ್ಳಿ ರಾಜ್ ಕುಮಾರ್, ಮಾಜಿ ನಿರ್ದೇಶಕ ಜಿಎನ್ ಮೂರ್ತಿ, ತಾ ಪಂ ಮಾಜಿ ಅಧ್ಯಕ್ಷ ಬಿ ಆರ್ ಮಂಜುನಾಥ್, ಜೆಡಿಎಸ್ ಮುಖಂಡ ಶಾಂತಕುಮಾರ್, ರಾಮಲಿಂಗಾಪುರ ಪಿ ಎ ಸಿ ಎಸ್ ಉಪಾಧ್ಯಕ್ಷೆ ಶೋಭಾ ದೇವರಾಜು, ರಾಮಲಿಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ನಿರ್ದೇಶಕರುಗಳಾದ ಕರೆ ಮಾದೇನಹಳ್ಳಿ ನಾಗರಾಜು, ಪಿ ಎಚ್ ರಾಧಾ, ಆನಂದಪ್ಪ ಜಿ, ಪುಟ್ಟರಾಜು ಎಮ್ ಪಿ, ನಂಜಪ್ಪ ಗಂಗಾಧರ, ಲೋಕೇಶ್ ಕೆ ಮಾದೇನಹಳ್ಳಿ, ಖ್ಯಾತಪ್ಪ, ವಾಸುದೇವ, ಪುಟ್ಟಮ್ಮ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಆರ್‌ಇ ಎಸ್ಪಿ, ಡಿವೈಎಸ್ಪಿ ವಿರುದ್ಧ ದಲಿತ ಇನ್ಸ್‌ಪೆಕ್ಟರ್ ಕಿರುಕುಳ ಆರೋಪ
ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ