ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದುಕೊಂಡ ವೃಕ್ಷಮಾತೆ: ರಂಜಾನ್ ದರ್ಗಾ

KannadaprabhaNewsNetwork |  
Published : Nov 17, 2025, 01:15 AM IST
16ಡಿಡಬ್ಲೂಡಿ1ಕರ್ನಾಟಕ ವಿದ್ಯಾವರ್ಧಕ ಸಂಘವು ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ನಿಧನದ ನಿಮಿತ್ತ ಭಾನುವಾರ ಆಯೋಜಿಸಿದ್ದ ನುಡಿನಮನ | Kannada Prabha

ಸಾರಾಂಶ

ಸಾಲು ಸಾಲು ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕು ಸಾಲುಮರದ ತಿಮ್ಮಕ್ಕನ ವ್ಯಕ್ತಿತ್ವಕ್ಕೆ ಗೌರವ ಬಂದ್ದಿದನ್ನು ಕಾಣುತ್ತೇವೆ ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.

ಧಾರವಾಡ: ಸಾಲು ಸಾಲು ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಬೇರೆ-ಬೇರೆ ಪತ್ರಿಕೆಗಳಲ್ಲಿ ಪ್ರಸಾರವಾಗಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕು ಸಾಲುಮರದ ತಿಮ್ಮಕ್ಕನ ವ್ಯಕ್ತಿತ್ವಕ್ಕೆ ಗೌರವ ಬಂದ್ದಿದನ್ನು ಕಾಣುತ್ತೇವೆ ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ನಿಧನ ನಿಮಿತ್ತ ಭಾನುವಾರ ಆಯೋಜಿಸಿದ್ದ ನುಡಿನಮನದಲ್ಲಿ ಅವರು ಮಾತನಾಡಿ, ತನ್ನ ಹಳ್ಳಿಗೊಂದು ಹೆರಿಗೆ ಆಸ್ಪತ್ರೆಯ ಕನಸು ಕಂಡವಳು. ಅವಳ ಜೀವನ ವಿಧಾನವೇ ಪವಿತ್ರ. ಸರ್ವರನ್ನೂ ಸಮಾನ ದೃಷ್ಟಿಯಿಂದ ಕಂಡವರು. ವಿಶಾಲ ಮನೋಭಾವ ಹೊಂದಿದ್ದರು. ಅಮೇರಿಕಾದಲಿ ತಿಮ್ಮಕ್ಕನ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು.

ವೆಂಕಟೇಶ ಮಾಚಕನೂರ, ಡಾ. ಪ್ರಕಾಶ ಭಟ್, ಡಾ. ಸದಾಶಿವ ಮರ್ಜಿ ನುಡಿನಮನ ಸಲ್ಲಿಸಿ, ಮಗುವಿನಂತೆ ಮರಗಳನ್ನು ಬೆಳೆಸಿದ್ದು ಸ್ತುತ್ಯಾರ್ಹ ಕಾರ್ಯ. ಪರಿಸರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಹೆದ್ದಾರಿಯ ಪಕ್ಕದಲ್ಲಿ ಗಿಡ-ಮರಗಳನ್ನು ಬೆಳೆಸಬೇಕಾದ ಅವಶ್ಯವಿದೆ. ಮಕ್ಕಳಾಗದೇ ಇದ್ದ ತಿಮ್ಮಕ್ಕ ಮರಗಳನ್ನೇ ಮಕ್ಕಳೆಂದು ಸಾಕಿ, ಪೋಷಿಸಿ ಬೆಳೆಸಿದವಳು. ಪರಿಶುದ್ಧ ಸಾತ್ವಿಕ, ಆಧ್ಯಾತ್ಮ ಮನಸ್ಥಿತಿಯನ್ನು ಇಟ್ಟುಕೊಂಡು ಬದುಕಿದವರು. ಭಾವನಾತ್ಮಕ ಜೀವಿಯಾಗಿದ್ದವರು. ಮಾತೃ ಹೃದಯಿಯಾಗಿದ್ದವರು. ಯಾವುದೇ ಪ್ರಶಸ್ತಿಯ ಆಸೆಗಾಗಿ ಅವರು ಮರಗಳನ್ನು ನೆಟ್ಟವರಲ್ಲ. ಸ್ವಯಂ ಪ್ರೇರಿತರಾಗಿ ಜನೋಪಯೋಗಕ್ಕಾಗಿ ನೆಟ್ಟವರು ಎಂದರು.

ಪಂಡಿತ ಮುಂಜಿ, ಸತೀಶ ತುರಮರಿ, ನಿರ್ಮಲಾ ದೇವಿ ಮಾತನಾಡಿ, ಧೃಢ ನಿರ್ಧಾರ, ಸೇವಾ ಮನೋಭಾವನೆ ಇದ್ದರೆ ಏನೆಲ್ಲಾ ಮಾಡಬಹುದು ಅನ್ನುವುದಕ್ಕೆ ಸಾಕ್ಷಿಯಾದವರು. ತಿಮ್ಮಕ್ಕ ಅವರು ನೀಡಿದ ಸಂದೇಶವನ್ನು ಪಾಲಿಸೋಣ. ಭಾರತಿ ನಗರದ ಉದ್ಯಾನವನದಲ್ಲಿ ಆಕಾಶ ಮಲ್ಲಿಗೆ, ಪಾರಿಜಾತ, ಚರಿ, ರಾತ್ರಿ ರಾಣಿ, ಮೊದಲಾದ ಹನ್ನೆರಡು ಗಿಡಗಳನ್ನು ತಿಮ್ಮಕ್ಕನ ಹೆಸರಿನಲ್ಲಿ ಹಚ್ಚಿದ್ದು, ಅವರ ನೆನಪು ಅಜರಾಮರವಾಗಿರಲಿ ಎಂಬ ಉದ್ದೇಶದಿಂದ ಹಚ್ಚಲಾಗಿದೆ ಎಂದು ಹೇ‍ಳಿದರು.

ಬಸವಪ್ರಭು ಹೊಸಕೇರಿ ಮಾತನಾಡಿ, ಗಿಡಗಳ ನಾಶಕ್ಕೆ ಪ್ರತಿಯಾಗಿ ಬದುಕು ಪರಿಸರಕ್ಕೆ ಪೂರಕವಾಗಿರಬೇಕು ಎಂದರು. ಪರಿಮಳ ಜಕ್ಕಣ್ಣವರ ಪರಿಸರ ಗೀತೆಯನ್ನು ಹಾಡಿದರು.

ಅನುರಾಗ ಸಾಂಸ್ಕೃತಿಕ ಬಳಗದ ಕಲಾವಿದರಾದ ಡಾ. ಅನೀಲ ಮೇತ್ರಿ, ಹೇಮಂತ ಲಮಾಣಿ, ಸೋಮುಬಾಯಿ ಕುರಿಗಾರ ಅವರಿಂದ ಪರಿಸರ ಗೀತೆಗಳು ನಡೆದವು.

PREV

Recommended Stories

ಸಹಕಾರಿ ರಂಗದ ಸಾಧನೆಗೆ ಸಂಘಟಿತ ಪ್ರಯತ್ನ ಅಗತ್ಯ: ಜಾಸ್ಮಿನ್ ಕಿಲ್ಲೆದಾರ
ಮೋದಿ ಅಭಿವೃದ್ಧಿಗೆ ಜನ ಬೆಂಬಲ: ಸುನಿಲ್‌ ಕುಮಾರ್‌