ನೀರಾವರಿ, ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದ ಕೊಪ್ಪಳ ಜಿಲ್ಲೆ ರೈತರು

KannadaprabhaNewsNetwork |  
Published : Jun 06, 2025, 11:47 PM IST
ಕಲಾದಗಿ: ಕೊಪ್ಪಳ ಜಿಲ್ಲೆಯ ಮಾದೆನೂರು ಗ್ರಾಮದ ರೈತರು ಶಾರದಾಳ ಗ್ರಾಮಕ್ಕೆ ಭೇಟಿ ನೀಟಿ ನೀರಾವರಿ ಪೈಪಲೈನ್ ಮಾಡಿದ ಬಗೆಯನ್ನು ತಿಳಿದುಕೊಂಡರು. | Kannada Prabha

ಸಾರಾಂಶ

ನೀರಾವರಿ ಸೌಲಭ್ಯ ಅಳವಡಿಸಿಕೊಂಡ ಬಗೆ, ನೂತನ ಕೃಷಿ ಪದ್ಧತಿ, ತೋಟಗರಿಕೆ ಬೆಳೆ ಪದ್ಧತಿ, ಹೈನುಗಾರಿಕೆ ಕ್ರಮ, ಬೆಳೆ ನಿರ್ವಹಣೆಯ ಬಗೆ, ಕಟಾವು ಪದ್ಧತಿ, ವಿವಿಧ ಬೆಳೆ ಬೆಳೆಯಲು ತಗುಲುವ ಖರ್ಚು, ನಿರೀಕ್ಷಿತ ಆದಾಯ ಎಷ್ಟು, ಕಿಲೋಮೀಟರ್ ಗಟ್ಟಲೇ ಪೈಪಲೈನ್ ಮಾಡಿದ ರೀತಿ ಕೃಷಿಗೆ ಸಮ್ಮಂಧಿಸಿದ ಅನೇಕ ವಿಷಯಗಳ ಮಾಹಿತಿಯನ್ನು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮಾದೆನೂರು ಗ್ರಾಮದ ರೈತರು ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಕಲಾದಗಿ

ನೀರಾವರಿ ಸೌಲಭ್ಯ ಅಳವಡಿಸಿಕೊಂಡ ಬಗೆ, ನೂತನ ಕೃಷಿ ಪದ್ಧತಿ, ತೋಟಗರಿಕೆ ಬೆಳೆ ಪದ್ಧತಿ, ಹೈನುಗಾರಿಕೆ ಕ್ರಮ, ಬೆಳೆ ನಿರ್ವಹಣೆಯ ಬಗೆ, ಕಟಾವು ಪದ್ಧತಿ, ವಿವಿಧ ಬೆಳೆ ಬೆಳೆಯಲು ತಗುಲುವ ಖರ್ಚು, ನಿರೀಕ್ಷಿತ ಆದಾಯ ಎಷ್ಟು, ಕಿಲೋಮೀಟರ್ ಗಟ್ಟಲೇ ಪೈಪಲೈನ್ ಮಾಡಿದ ರೀತಿ ಕೃಷಿಗೆ ಸಮ್ಮಂಧಿಸಿದ ಅನೇಕ ವಿಷಯಗಳ ಮಾಹಿತಿಯನ್ನು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮಾದೆನೂರು ಗ್ರಾಮದ ರೈತರು ಪಡೆದುಕೊಂಡರು.

ಶಾರದಾಳ ಗ್ರಾಮದ ಅನೇಕ ಪ್ರಗತಿ ಪರ ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡ ನೀರಾವರಿ ಮಾದರಿಯನ್ನು ಮಾದೇನೂರು ಗ್ರಾಮದ 40ಕ್ಕೂ ಅಧಿಕ ರೈತರಿಗೆ ಮಾಹಿತಿ ನೀಡಿದರು. ಮಾದೆನೂರು ಗ್ರಾಮದ ರೈತ ಮುಖಂಡರು ನೀರಾವರಿ ಮಾಡಿದ ಬಗೆಯನ್ನು ಶಾರದಾಳ ಗ್ರಾಮದ ರೈತ ಸುರೇಶ ಅರಕೇರಿ, ಪ್ರವೀಣ ಅರಕೇರಿ, ಆನಂದ ಅರಕೇರಿ, ಲಕ್ಷ್ಮಣ ಶಿರಬೂರ, ಬಸು ತೆಗ್ಗಿ ಇನ್ನಿತರ ರೈತರಿಂದ ಕೇಳಿ ಮಾಹಿತಿ ಪಡೆದುಕೊಂಡರು, ಕಬ್ಬು ಬೆಳೆಯುವ ಬಗೆ, ಕಟಾವು, ಫ್ಯಾಕ್ಟರಿಗೆ ಕಳಿಸುವ ರೀತಿ, ಬೆಲೆ ಇನ್ನಿತ ಮಾಹಿತಿ ಕೇಳಿ, ಘಟಪ್ರಭಾ ನದಿಯಿಂದ ಹತ್ತಾರು ಕಿಲೋ ಮೀಟರ್ ದೂರ ಪೈಪಲೈನ್ ಮಾಡಿದ ರೀತಿಯನ್ನು ಅಳವಡಿಸಿದ ಬಗೆಯನ್ನು ಕೂತೂಹಲದಿಂದ ಕೇಳಿ ತಿಳಿದುಕೊಂಡರು. ವಿವಿಧ ತೋಟಗಳಿಗೆ ತೆರಳಿ ಪಾತ್ಯಕ್ಷಿಕೆ ನೋಡಿ ಮಾಹಿತಿ ಪಡೆದುಕೊಂಡರು

ಸುರೇಶ ಶಂಕ್ರಪ್ಪ ಅಕೇರಿಯವರ ತೋಟದ ಮನೆಗೂ ತೆರಳಿ ಅಲ್ಲಿ ಹೈನುಗಾರಿಕೆ ಮಾಡಿದ ಶೆಡ್ ಮಾದರಿ ನೋಡಿ ಹೈನುಗಾರಿಯಿಂದ ಬರುವ ಆದಾಯ ಕೇಳಿ ಮಾಹಿತಿ ತಿಳಿದುಕೊಂಡರು.

ಶುಕ್ರವಾರ ಕೊಪ್ಪಳದಿಂದ ಶಾರದಾಳ ಗ್ರಾಮಕ್ಕೆ ಆಗಮಿಸಿದ ಮಾದೆನೂರು ಗ್ರಾಮದ ರೈತರಿಗೆ ಸ್ವಾಗತಿಸಿ ಮಧ್ಯಾಹ್ನ ಬಿಸಿ ಚಪಾತಿ, ಬದ್ನಿಕಾಯಿ ಹೆಸರು ಕಾಳು ಪಲ್ಯೆ, ಚಟ್ನಿ, ಮೊಸರು, ಅನ್ನ ಸಾಂಬರು ಊಟ ಬಡಿಸಿದರು.

ಮಾದೆನೂರು ಗ್ರಾಮದ ಗುರುಬಸಯ್ಯ ಹಿರೇಮಠ, ವಿಜಯಕುಮಾರ ನಾಯಕ, ಈರಣ್ಣ ನಾಯಕ, ಮಲ್ಲಣ್ಣ ಬ್ರಂಗಿ, ಶರಣಪ್ಪ ನಂದಾಪೂರ, ಶರಣಪ್ಪ ಆಡೂರು, ಅಜ್ಪಪ್ಪ ಆಡೂರು, ಸೋಮಣ್ಣ ಆಡೂರು, ಚೆನ್ನಕೇಶವ ನಂದಾಪೂರ, ಶರಣಪ್ಪ ಅಗಡಿ, ಬಸವರೆಡ್ಡಿ ಗೋನಾಳ, ಶಶಿಕಾಂತ ಗೋನಾಳ, ಶಿವಪುತ್ರಪ್ಪ ಬ್ರಂಗಿ, ಗವಿಸಿದ್ದಪ್ಪ ಹೂಗಾರ, ಅಂದಪ್ಪ ಈಟಗಿ, ಚಂದ್ರಪ್ಪ ಜೋಲಕುಂಟಿ, ರಾಮನಗೌಡ ಆಡೂರು, ಉದ್ಯಪ್ಪ ಮಠದಾನಿ, ಬಸಣ್ಣ ಜೋಲಕುಂಟಿ, ನಾಗಪ್ಪ ಎಲಿಗಾರ, ಶಂಕ್ರಪ್ಪ ನಾಯಕ ಇನ್ನಿತರ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು