ಮಲಪ್ರಭಾ ಜಲಾಶಯದಿಂದ ಕೈಗಾರಿಕೆ ನೀರು ಪೂರೈಕೆಗೆ ರೈತರ ವಿರೋಧ

KannadaprabhaNewsNetwork |  
Published : May 07, 2025, 12:48 AM IST
(6ಎನ್.ಆರ್.ಡಿ3 ರೈತ ಮುಖಂಡರು ವಿವಿಧ ಬೇಡಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಗೆ ಮನವಿ ನೀಡುತ್ತಿದ್ದಾರೆ.)   | Kannada Prabha

ಸಾರಾಂಶ

ಮಲಪ್ರಭಾ ಜಲಾಶಯದಿಂದ ಕೈಗಾರಿಕೆ ನೀರು ಕೊಟ್ಟರೆ, ಈ ಭಾಗದ ಜನರಿಗೆ ಕುಡಿಯುವ ನೀರಿನ ಹಾಹಾಕಾರವಾಗುತ್ತದೆ. ಆದ್ದರಿಂದ ಸರ್ಕಾರ ಕೈಗಾರಿಕೆ ನೀರು ಕೊಡಬಾರದೆಂದು ರಾಜ್ಯ ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.

ನರಗುಂದ: ಮಲಪ್ರಭಾ ಜಲಾಶಯದಿಂದ ಕೈಗಾರಿಕೆ ನೀರು ಕೊಟ್ಟರೆ, ಈ ಭಾಗದ ಜನರಿಗೆ ಕುಡಿಯುವ ನೀರಿನ ಹಾಹಾಕಾರವಾಗುತ್ತದೆ. ಆದ್ದರಿಂದ ಸರ್ಕಾರ ಕೈಗಾರಿಕೆ ನೀರು ಕೊಡಬಾರದೆಂದು ರಾಜ್ಯ ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.

ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿವಿಧ ಬೇಡಿಕೆಯ ಮನವಿ ನೀಡಿ ಆನಂತರ ಮಾತನಾಡಿದರು.

ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಜಲಾಶಯದಿಂದ ಕೈಗಾರಿಕೆ ನೀರು ಕೊಟ್ಟರೆ ಈ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರವಾಗುತ್ತದೆ. ಆದ್ದರಿಂದ ಸರ್ಕಾರ ಕೈಗಾರಿಕೆ ನೀರು ಕೊಡಬಾರದು, ಅದೇ ರೀತಿ ಈ ಭಾಗದ 2024-25ನೇ ಸಾಲಿನ ಮುಂಗಾರು ಬೆಳೆ ವಿಮೆ ಹಣ ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಾಲೂಕಿಗೆ ಒಂದ ವಿಮೆ ಕಂಪನಿ ಕಾರ್ಯಲಯ ತೆರೆಯಬೇಕು, ಕೃಷಿ ಪರಿಷತ ರಚನೆಯಾಗಬೇಕು ಎಂದು ಮನವಿ ಮಾಡಿಕೊಂಡರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ನಾಲ್ಕು ದಶಕಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಬಂಡಾಯ ನೆಲ ನರಗುಂದದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದ್ದರಿಂದ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆಗಳಿಗಿರುವ ಅಡತಡೆಯನ್ನು ಸರಿಪಡಿಸಿ ಈ ಯೋಜನೆ ಜಾರಿ ಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು.

|ಈ ಸಂದರ್ಭದಲ್ಲಿ ರೈತ ಮುಖಂಡರಾದ ರಘನಾಥ ನಡವಿನಮನಿ, ಶಿದ್ದಲಿಂಗಪ್ಪ ಮಾಳಣ್ಣವರ, ಪ್ರವೀಣ ಯರಗಟ್ಟಿ, ದೇವಿಂದ್ರ ಗುಡಿಸಾಗರ, ಶಿದ್ದಪ್ಪ ಜಾವೂರ, ಚನ್ನಯ್ಯ ಮಠಪತಿ, ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ