ತಾಲೂಕಿನ ಮಂಗಳೂರು ಗ್ರಾಮದ ಸರ್ವೆ ನಂಬರ್ 406, 432, 435ರಲ್ಲಿ ಹೈ ಪವರ್ ಟ್ರಾನ್ಸಮಿಷನ್ ವೈರ್ ಅಳವಡಿಕೆ ಬೇಡ ಎಂದು ಜಮೀನಿನ ರೈತರು ಕುಳಿತಿದ್ದಾರೆ.
ಮೂರು ದಿನಗಳಿಂದ ಕಂಬ ಅಳವಡಿಕೆ ಬೇಡ ಎಂದು ಪಟ್ಟು ಹಿಡಿದು ಕುಳಿತ ರೈತರು
ಪೊಲೀಸರಿಂದ ವಿಚಾರಣೆ, ನೋಟಿಸ್ ಜಾರಿ
ಕನ್ನಡಪ್ರಭ ವಾರ್ತೆ ಕುಕನೂರು
ತಾಲೂಕಿನ ಮಂಗಳೂರು ಗ್ರಾಮದ ಸರ್ವೆ ನಂಬರ್ 406, 432, 435ರಲ್ಲಿ ಹೈ ಪವರ್ ಟ್ರಾನ್ಸಮಿಷನ್ ವೈರ್ ಅಳವಡಿಕೆ ಬೇಡ ಎಂದು ಜಮೀನಿನ ರೈತರು ಕುಳಿತಿದ್ದಾರೆ.
ರೈತರಾದ ನೀಲಪ್ಪ ಫಕೀರಪ್ಪ ಸೊಟ್ನರ್ ಮಾತನಾಡಿ, ನಮ್ಮ ಜಮೀನುಗಳಲ್ಲಿ ಮೂರು ಕಂಬಗಳು ಬಂದಿವೆ. ನಮ್ಮ ಜಮೀನುಗಳು ತೋಟಗಳಾಗಿವೆ. ನಮ್ಮ ಜಮೀನಿನಲ್ಲಿ ಹೈ ಪವರ್ ಟ್ರಾನ್ಸ್ಮಿಷನ್ ಹಾದು ಹೋಗುವುದಿಂದ ನಮ್ ಪಂಪ್ಸೆಟ್ಗಳಿಗೆ ತೊಂದರೆ ಆಗುತ್ತದೆ. ನಮ್ಮ ಜಮೀನಿನಲ್ಲಿ ಮನೆಗಳಿವೆ. ವೈರ್ಗಳು ಮನೆ ಮೇಲೆ ಹಾದು ಹೋಗುತ್ತವೆ. ಪಂಪ್ಸೆಟ್ಟಿಗೆ ವಾಯರ್ ಅಳವಡಿಕೆಯಿಂದ ಇಂಡಕ್ಷನ್ ತೊಂದರೆ ಆಗುತ್ತದೆ. ನಮ್ಮ ಜಮೀನುಗಳಲ್ಲಿ ಹೈ ಪವರ್ ಟ್ರಾನ್ಸ್ಮಿಷನ್ ಪವರ್ ಕಂಬಗಳು ಬೇಡವೇ ಬೇಡ. ಬೇರೆ ಕಡೆ ಹಾಕಬೇಕು ಎಂದು ಹೇಳಿದರು.
ಮೂರು ದಿನಗಳಿಂದ ಸ್ಥಳದಲ್ಲಿ ವೈರ್ ಅಳವಡಿಕೆ ತಡೆದು ಕುಳಿತಿದ್ದೇವೆ. ನಮ್ಮಗಳ ಮೇಲೆಯೇ ವೈರ್ ಅಳವಡಿಕೆ ಕಂಪನಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ದೂರಿನ ಮೇಲೆ ನಮ್ಮನ್ನು ವಿಚಾರಣೆಗೆ ಬರಲು ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ರೈತರ ಮೇಲೆ ಕಂಪನಿಯವರು ಗೂಂಡಾ ವರ್ತನೆ ಮಾಡುತ್ತಿದ್ದಾರೆ. ಜನರನ್ನು ಕರೆದುಕೊಂಡು ಬಂದು ಹೆದರಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಇದಕ್ಕೆ ಪೊಲೀಸ್ ಇಲಾಖೆ ಸಾಥ್ ನೀಡಬಾರದು. ರೈತರ ಕಷ್ಟ ಸಹ ಅರಿಯಬೇಕಿದೆ. ನಮ್ಮ ಜಮೀನಿನಲ್ಲಿ ವೈರ್ ಅಳವಡಿಕೆಯಿಂದ ಜಮೀನುಗಳು ಹಾಳಾಗುತ್ತವೆ. ಒಮ್ಮೆ ಪರಿಹಾರ ಬರಬಹುದು, ಆದರೆ ಕೃಷಿ ನಂಬಿ ಬದುಕು ನಮಗೆ ಜಮೀನೆ ಮುಖ್ಯ ಎಂದರು.
ಪ್ರಮುಖರಾದ ಮಂಗಳೇಶ ಸೊಟ್ನರ, ಶಿವಪುತ್ರಪ್ಪ ಚೂರಿ, ವೀರೇಶ ಚೂರಿ, ಶಿವರಾಜ ಚೂರಿ, ಮುದಕಪ್ಪ ಚೂರಿ, ನೀಲಪ್ಪ ಸೊಟ್ನರ್, ಬಸವರಾಜ ಚೂರಿ, ರೈತರು ಹಾಗೂ ಮಹಿಳೆಯರಿದ್ದರು.
ನಾನು ಸಹ ರೈತರ ಜಮೀನುಗಳನ್ನು ಬಿಟ್ಟು ಬೇರೆ ಕಡೆ ವೈರ್ ಅಳವಡಿಕೆಗೆ ಕಂಪನಿಯವರಿಗೆ ತಿಳಿಸಿದ್ದೇನೆ. ಅವರ ಕಂಪನಿಯವರ ಕೆಲಸಕ್ಕೆ ರೈತರು ಅಡ್ಡಪಡಿಸಿದ್ದಾರೆ ಎಂದು ಕಂಪನಿಯವರು ದೂರು ನೀಡಿದ ಪ್ರಯುಕ್ತ ನಾನು ರೈತರಿಗೆ ವಿಚಾರಣೆ ನೋಟಿಸ್ ನೀಡಿದ್ದೇನೆ. ರೈತರನ್ನು ಸಹ ನಾನು ಕರೆದು ನಿಮ್ಮ ತೊಂದರೆಯನ್ನು ನನಗೆ ದೂರಿನ ಮೂಲಕ ನೀಡಿ ಎಂದು ಹೇಳಿದ್ದೇನೆ. ರೈತರು ಜಿಲ್ಲಾಧಿಕಾರಿಗೆ ಸಹ ಮನವಿ ಸಲ್ಲಿಸಿದ್ದಾರೆ. ರೈತರ ಜಮೀನು ಬಿಟ್ಟು ಬೇರೆ ಕಡೆ ವೈರ್ ಅಳವಡಿಕೆ ಆದರೆ ರೈತರಿಗೆ ಅನುಕೂಲ ಆಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.