ಕನ್ನಡಪ್ರಭ ವಾರ್ತೆ ಮುಂಡರಗಿ
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದ್ದು, ಅಂತಹ ಸಂವಿಧಾನದ ಆಶಯಗಳನ್ನು ಎಲ್ಲರೂ ಚಾಚುತಪ್ಪದೇ ಪಾಲಿಸಿಕೊಂಡು ಹೋಗಬೇಕು ಎಂದರು.
ತಹಸೀಲ್ದಾರ್ ಕೆ.ರಾಧಾ ಎಲ್ಲರಿಗೂ ಸಂವಿಧಾನ ಪೀಠಿಕೆ ವಾಚನ ಮಾಡಿ ಮಕ್ಕಳಿಗೆ ಶುಭಕೋರಿದರು. ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ನ್ಯಾಯವಾದಿ ವಿಜಯಕುಮಾರ ಅಂಗಡಿ, ನಾಯಾಲಯದ ಸಿಬ್ಬಂದಿ ವೀರಣ್ಣ ಶಿಗ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಶಾಂತಲಾ ಮೆಟ್ಟಿನ, ಬಾಬುಸಾಬ್, ರುದ್ರಪ್ಪ ಗುಳೆದಗುಡ್ಡ, ಪ್ರವೀಣ್ ಹರಿಜನ, ಸುನೀಲ್ ಕರ್ನಾಲ್, ವಾರ್ಡನ್ ಶ್ರೀಕಾಂತ್ ಅರಹುಣಸಿ, ಎಲ್.ಎಂ. ಗಚ್ಚಿನಮನಿ, ಕುಬೇರ ನಾಯ್ಕ, ಸೂಫೀಯಾಬೇಗಂ, ಆರಕ್ಷಕ ಇಲಾಖೆಯ ನಧಾಫ್ ಸೇರಿದಂತೆ ಅನೇಕರಿದ್ದರು. ವಾರ್ಡನ್ ಸೂಫೀಯಾ ನಿರೂಪಿಸಿದರು.