ಕೃಷಿ ಯೋಜನೆ ಯಶಸ್ಸಿಗೆ ರೈತರ ಸಹಭಾಗಿತ್ವ ಮುಖ್ಯ: ಸಹದೇವ ಯರಗೊಪ್ಪ

KannadaprabhaNewsNetwork |  
Published : Apr 20, 2026, 02:15 AM IST
ಕಾರ್ಯಕ್ರಮದಲ್ಲಿ ಸಹದೇವ ಯರಗೊಪ್ಪ ಮಾತನಾಡಿದರು. | Kannada Prabha

ಸಾರಾಂಶ

ನೀಲಗುಂದ ಉಪಜಲಾನಯನ ವ್ಯಾಪ್ತಿಯಲ್ಲಿ ರಿವಾರ್ಡ್ ಯೋಜನೆ ಅನುಷ್ಠಾನಗೊಂಡಿರುವ ರೀತಿ ನೋಡಿದರೆ ನಿಜವಾಗಿಯೂ ಖುಷಿಯಾಗಿದೆ. ಈ ಭಾಗದ ರೈತರು ಬಹಳ ಉತ್ಸುಕತೆ ಮತ್ತು ಆಸಕ್ತಿಯಿಂದ ರಿವಾರ್ಡ್ ಯೋಜನೆಯಲ್ಲಿವುದು ಪಾಲ್ಗೊಂಡಿರುವುದು ನೋಡಿದರೆ ಹೆಮ್ಮೆ ಅನಿಸಿದೆ.

ಗದಗ: ಕೃಷಿ ಇಲಾಖೆಯ ಯೋಜನೆಗಳು ಯಶಸ್ವಿಯಾಗುವುದು ರೈತರ ಸಹಭಾಗಿತ್ವ ಇದ್ದಾಗ ಮಾತ್ರ ಸಾಧ್ಯ ಎಂದು ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ತಿಳಿಸಿದರು.

ತಾಲೂಕಿನ ನೀಲಗುಂದ ಉಪ ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಅನುಷ್ಠಾನವಾಗಿರುವ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ವಿವಿಧ ಕಾಮಗಾರಿಗಳ ಕ್ಷೇತ್ರ ಭೇಟಿಯ ನಂತರ ಮುಳಗುಂದ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಸಭಾಭವನದಲ್ಲಿ ಆಯೋಜಿಸಿದ್ದ ಗುಂಪು ಚರ್ಚೆಯಲ್ಲಿ ಮಾತನಾಡಿದರು.

ನೀಲಗುಂದ ಉಪಜಲಾನಯನ ವ್ಯಾಪ್ತಿಯಲ್ಲಿ ರಿವಾರ್ಡ್ ಯೋಜನೆ ಅನುಷ್ಠಾನಗೊಂಡಿರುವ ರೀತಿ ನೋಡಿದರೆ ನಿಜವಾಗಿಯೂ ಖುಷಿಯಾಗಿದೆ. ಈ ಭಾಗದ ರೈತರು ಬಹಳ ಉತ್ಸುಕತೆ ಮತ್ತು ಆಸಕ್ತಿಯಿಂದ ರಿವಾರ್ಡ್ ಯೋಜನೆಯಲ್ಲಿವುದು ಪಾಲ್ಗೊಂಡಿರುವುದು ನೋಡಿದರೆ ಹೆಮ್ಮೆ ಅನಿಸಿದೆ ಎಂದರು.

ಗದುಗಿನ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿಯ ಕೃಷಿ ಅಧಿಕಾರಿ ಬಸವರಾಜ ಹಾಗೂ ಅಣ್ಣಾ ಸಾಹೇಬ ಚೌಗಲೆ ಇದ್ದರು. ತೆಲಸಂಗ ಕಾರ್ಯಕಾರಿ ಸಮಿತಿಯ ಚನಗೌಡ ಪಾಟೀಲ ಹಾಗೂ ಸಿಕಂದರ್ ಮಡ್ಡಿಮನಿ, ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಯಲ್ಲಪ್ಪ ಕಲ್ಯಾಣಿ, ಶಿವಯ್ಯ ಮನಗೇನಿ, ಚಂದ್ರಶೇಖರ ಜಕ್ಕಮ್ಮನವರ ಸೇರಿದಂತೆ ಯೋಜನೆಯ ಫಲಾನುಭವಿಗಳು ರೈತ ಸಂಘದ ಪದಾಧಿಕಾರಿಗಳು ಹಾಗೂ ರಿವಾರ್ಡ್ ಸಿಬ್ಬಂದಿ ಇದ್ದರು. ಶೇಖರ್ ಸ್ವಾಗತಿದರು. ಎಫ್.ಸಿ. ಗುರಿಕಾರ ವಂದಿಸಿದರು. ಮಂಜುನಾಥ ಬ್ಯಾಳಿ ನಿರೂಪಿದರು.

ಯೋಜನೆಯಡಿಯಲ್ಲಿ ನಡೆದ ಕೃಷಿಹೊಂಡ, ಬದು ನಿರ್ಮಾಣ, ನಾಲಾ ರಿವಿಟ್ ಮೆಂಟ್, ನಾಲಾ ಸ್ಥಿರೀರಿಕರಣ, ಕೋಡಿ ನಿರ್ಮಾಣ, ಚೆಕ್ ಡ್ಯಾಂ, ಗೋಕಟ್ಟೆ ಸೇರಿದಂತೆ ಮಣ್ಣು ಮತ್ತು ನೀರು ಸಂರಕ್ಷಣೆ ಘಟಕದ ಹಲವು ಕಾಮಗಾರಿಗಳನ್ನು ಪರೀಶಿಲನೆ ಮಾಡಿದರು. ಅರಣ್ಯ ಮತ್ತು ತೋಟಗಾರಿಕೆ ಘಟಕದಲ್ಲಿ ನೆಡಲಾದ ಹಲವಾರು ಸಸಿಗಳು ಹಾಗೂ ಸಾಂಸ್ಥಿಕ ನೆಡುತೋಪು ವೀಕ್ಷಿಸಿದರು.

ಚರ್ಚೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಯೋಜನೆಯಡಿಯಲ್ಲಿ ಆಯ್ಕೆಯಾದ ಸ್ವ ಸಹಾಯ ಸಂಘದ ಸದಸ್ಯರು, ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಭಾಗವಹಿದ್ದರು. ಯೋಜನೆಯಡಿಯಲ್ಲಿ ಪಡೆದ ವಿವಿಧ ಉಪಯೋಗದ ಬಗ್ಗೆ ರೈತರು ಮಾಹಿತಿ ನೀಡಿದರು. ಸುತ್ತು ನಿಧಿ ಪಡೆದಿರುವ ಸ್ವ ಸಹಾಯ ಸಂಘದ ಮಹಿಳೆಯರರು ತಮ್ಮ ಅನಿಸಿಕೆ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿ