ಮಳೆಯಿಲ್ಲದ ಹಿನ್ನೆಲೆ ಕ್ರಮ । ಹೆಚ್ಚು ತಂಬಾಕು ಬೆಳೆಗಾರರು
ಕನ್ನಡಪ್ರಭ ವಾರ್ತೆ ರಾಮನಾಥಪುರಇಲ್ಲಿಯ ಸುಬ್ರಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರಿದ್ದು, ಮಳೆ ಇಲ್ಲದೆ ತಂಬಾಕು ಮಡಿ ಮಾಡಿದ ಸಸಿಗಳನ್ನು ತಮ್ಮ ತಮ್ಮ ಬೋರ್‌ವೆಲ್‌ಗಳಲ್ಲಿ ನೀರು ಹಾಯಿಸಿಕೊಂಡು ನಾಟಿ ಮಾಡುತ್ತಿದ್ದಾರೆ.
ರಾಮನಾಥಪುರದಲ್ಲಿರುವ ಪ್ಲಾಟ್ ಫಾರಂ 7 ಹಾಗೂ 13ರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪಾದನೆಗೆ ಹೆಚ್ಚು ಅಸಕ್ತಿ ಹೊಂದಿರುವ ರೈತರಿಗೆ ವರುಣನ ಮುನಿಸು ಬಾರಿ ಹೊಡೆತ ನೀಡಿದ್ದು, ನಾಟಿ ಕಾರ್ಯಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ. ಈಗಾಗಲೇ 2 ತಿಂಗಳಾಗುತ್ತ ಬಂದಿರುವುದರಿಂದ ರೈತರು ತಮ್ಮ ಭೂಮಿಯಲ್ಲಿ ನೀರು ಹಾಯಿಸಿಕೊಂಡು ತಂಬಾಕು ಟ್ರೇ ಸಸಿಗಳ ನಾಟಿ ನಡುತ್ತಿದ್ದಾರೆ.ಕಳೆದ ಒಂದು ತಿಂಗಳಿಂದ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ರೈತರು ತಮ್ಮ ಟ್ರೇ ಸಸಿ ಬಿತ್ತನೆ ಮಾಡಿದ ಹಾಗೂ ಟ್ರೇನಲ್ಲಿ ಬೆಳೆಸಿದರೆ ಮಳೆ ಬಿದ್ದ ತಕ್ಷಣ ನಾಟಿ ಮಾಡಿದರೆ ಗಿಡಗಳು ತೇವಾಂಶದ ಕೊರತೆ ಬೇಗನೆ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಬಹುತೇಕ ಹೆಚ್ಚಿನ ರೈತರು ಇತ್ತೀಚೆಗೆ ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಯಲು ಮುಂದಾಗಿದ್ದಾರೆ. ಒಂದೆಡೆ ಸಸಿ ಮಡಿಗಳು ಬೆಳೆದಿದ್ದು ಅದರೆ ಜಮೀನು ಉಳುಮೆ ಕೂಡ ಮಾಡಿಲ್ಲ. ಕೆಲವು ಕಡೆ ಅಲ್ಪ- ಸಲ್ಪ ಮಳೆಯಾಗಿದ್ದು ಅದರೂ ಹದ ಮಳೆಯಾಗದೆ ಭೂಮಿ ಉಳುಮೆ ಆಗಿಲ್ಲ.
ಸಕಾಲದಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾದರೆ ಸಸಿ ಮಡಿಗಳಿಗೆ ಕುತ್ತು ಬರಲಿದೆ. ಕೆಲವು ಕಡೆ ಸಸಿ ಮಡಿಗಳಲ್ಲಿ ರೋಗ ಕಾಣಿಸಿಕೊಳ್ಳಲು ಆರಂಭವಾಗಿದೆ. ಅಲ್ಲದೆ ಕರಿಕಡ್ಡಿ ರೋಗ ಸಂಭವಿಸುವ ಹಂತದಲ್ಲಿದೆ. ಟ್ರೇ ಮಾಡುವಾಗ ಕೋಕೋಫಿಟ್ ಜೊತೆ ಬೆಳೆಸಿದ ಟ್ರೈಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಮಡಿ ಬೆಳಸಿದರೆ ರೋಗವನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ತಂಬಾಕು ಬೆಳೆಗಾರರು.