ಕಾಲುವೆಗಳ ಬಂದ್‌ಗೆ ಆದೇಶಕ್ಕೆ ರೈತರು ಕಿಡಿ

KannadaprabhaNewsNetwork |  
Published : Sep 23, 2026, 01:30 AM IST
22ಕೆಪಿಎಸ್ಎನ್ಡಿ1ಎ:  | Kannada Prabha

ಸಾರಾಂಶ

ತಾಲೂಕು ವ್ಯಾಪ್ತಿಯ ಕಾಲುವೆಗಳನ್ನು ಬಂದ್ ಮಾಡುವಂತೆ ರಾಯಚೂರು ಜಿಲ್ಲಾಧಿಕಾರಿ ಆದೇಶ ಮಾಡಿ ರುವುದನ್ನು ವಿರೋಧಿಸಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕಿನ 36ನೇ ವಿತರಣಾ ಕಾಲುವೆಯ ಬಳಿ ಪಕ್ಷಾತೀತವಾಗಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕು ವ್ಯಾಪ್ತಿಯ ಕಾಲುವೆಗಳನ್ನು ಬಂದ್ ಮಾಡುವಂತೆ ರಾಯಚೂರು ಜಿಲ್ಲಾಧಿಕಾರಿ ಆದೇಶ ಮಾಡಿ ರುವುದನ್ನು ವಿರೋಧಿಸಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕಿನ 36ನೇ ವಿತರಣಾ ಕಾಲುವೆಯ ಬಳಿ ಪಕ್ಷಾತೀತವಾಗಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಕೊಪ್ಪಳ ಜಿಲ್ಲೆಯವರು ನೀರನ್ನು ಹೆಚ್ಚು ಪಡೆದಿದ್ದಾರೆ. ಕಾಲುವೆ ಬಂದ್ ಮಾಡುವುದಿದ್ದರೆ ಕೊಪ್ಪಳದಿಂದ ಬಂದ್ ಮಾಡಬೇಕು. ಅಲ್ಲಿಯವರೆಗೂ ಕಾಲುವೆ ಬಂದ್ ಮಾಡಬಾರದು. ಜಿಲ್ಲಾಧಿಕಾರಿಗಳು ಆದೇಶವನ್ನು ಹಿಂಪಡೆಯುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸದೆ ಡಿಸಿ ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಸಮಾನ ಹಕ್ಕಿನ ಪ್ರಕಾರ ನೀರು ಹರಿಸಬೇಕು. ಸಿಂಧನೂರು ತಾಲ್ಲೂಕಿನ ಕೆಳಭಾಗದ ರೈತರಿಗೆ ಸಮಪರ್ಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ನೀರಿನ ವಿಚಾರದಲ್ಲಿ ರೈತರ ನಡುವೆ ಜಗಳ ಹಚ್ಚುವ ಕೆಲಸ ಅಧಿಕಾರಿಗಳು ಮಾಡಬಾರದು. ತಕ್ಷಣವೇ ಡಿಸಿ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ವಿರುದ್ಧ ಸದನದಲ್ಲಿ ಶಾಸಕರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ಬಾಬು, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಡಿವೈಎಸ್ಪಿ ಚಂದ್ರಶೇಖರ ಜಿ.ನಾಯಕ, ನೀರಾ ವರಿ ಇಲಾಖೆಯ ಇಇ ಸತ್ಯನಾರಾಯಣ ಶೆಟ್ಟಿ, ಎಇಇಗಳಾದ ದಾವೂದ್ ಸಾಬ್, ನಾಗಪ್ಪ, ಪ್ರತಿಭಟನಾ ಸ್ಥಳಕ್ಕೆ ಬಂದು ಚರ್ಚಿಸಿದರು. ಪ್ರತಿಭಟನಾ ಧರಣಿಯನ್ನು ಹಿಂತೆಗೆದುಕೊಳ್ಳುವಂತೆ ನಾಯಕರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಅಚಲ ಎಂದು ರೈತರು ಒಕ್ಕೊರಲಿನಿಂದ ಹೇಳಿದರು.

ಈ ಸಂದರ್ಭದಲ್ಲಿ ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ನಗರ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಮಸ್ಕಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ, ಆರ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಮುಖಂಡರಾದ ಆರ್.ತಿಮ್ಮಯ್ಯ ನಾಯಕ, ಅಶೋಕಗೌಡ ಗದ್ರಟಗಿ, ರಂಗನಗೌಡ ಗೊರೇಬಾಳ, ಖಾಜಿ ಮಲಿಕ್ ವಕೀಲ, ಚಿಟ್ಟೂರಿ ಶ್ರೀನಿವಾಸ, ಲಿಂಗರಾಜ ಪಾಟೀಲ್, ಸಾಯಿ ರಾಮಕೃಷ್ಣ, ನಾಗೋಜಿ ಮರಾಠ, ಶಿವರಾಜ ಪಾಟೀಲ್ ಬಸಾಪುರ ಸೇರಿದಂತೆ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ೬ ಸಾವಿರ ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಗುರಿ: ಮಧುಸೂದನ ಸಾಯಿ
ರೈತರ ವಿಶ್ವಾಸ ಗಳಿಸುವಲ್ಲಿ ಕಾರ್ಖಾನೆಗಳು ವಿಫಲ: ಜಿಲ್ಲಾಧಿಕಾರಿ ಡಾ.ಕುಮಾರ