ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳೆ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಆರು ತಿಂಗಳು ಗತಿಸಿದರು ಕಬ್ಬು ಪೂರೈಸಿದ ರೈತರಿಗೆ ಹಣ ನೀಡದೆ ಇರುವುದು ರೈತ ವಿರೋಧಿಯಾಗಿದೆ. 48 ಗಂಟೆಗಳಲ್ಲಿ ಮೂಲ ಹಣದೊಂದಿಗೆ ಬಡ್ಡಿ ಸೇರಿಸಿ ರೈತರ ಖಾತೆಗೆ ಕಬ್ಬಿನ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಆಡಳಿತ ಮಂಡಳಿ ಕಚೇರಿಗೆ ಬೀಗ ಜಡಿದು ಧರಣಿ ಸತ್ಯಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.
ರೈತರಾದ ಚನ್ನಬಸಪ್ಪ ಸಿಂಧೂರ, ಪರುಶುರಾಮ ಸುಂಟ್ಯಾನ, ಕಲ್ಲಪ್ಪ ಸಜ್ಜನ, ಶರಣಪ್ಪ ಹಿಪ್ಪರಗಿ, ಸಂಗನಬಸಪ್ಪ ದಳವಾಯಿ, ರಾಚನಗೌಡ ಪಾಟೀಲ, ಯಲಗೂರಪ್ಪ ದಳವಾಯಿ, ಮುತ್ತುರಾಜ ಹೂಗಾರ, ಶಿವಪ್ಪ ಮುರಾಳ, ಗುರಪಾದ ಹಿರೇಮಠ, ಸುರೇಶ ಸುಂಟ್ಯಾನ, ಮಲ್ಲಿಕಾರ್ಜುನ ಗವಿಮಠ, ಮಾನಪ್ಪ ಬಡಿಗೇರ, ಅಶೊಕ ಶಿರಸಂಗಿ, ಹಣಮಂತ ಮುರಾಳ, ಚಂದ್ರಾಮ ಕೊಲಕಾರ, ಮಹೇಶ ನಾಟೀಕಾರ ಮತ್ತಿತರರು ಇದ್ದರು.