ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Jan 28, 2025, 12:45 AM IST
  27 ಜೆ.ಜಿ.ಎಲ್. 1) ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರದ ವ್ಯಾಪ್ತಿ ಭಾಗದಲ್ಲಿ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ಆಗ್ರಹಿಸಿ ಪಲ್ಲಾಗಟ್ಟೆ ,ಮರಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಯ ನೂರಾರು ರೈತರು ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ. | Kannada Prabha

ಸಾರಾಂಶ

ಪಲ್ಲಾಗಟ್ಟೆ ವಿದ್ಯುತ್ ಕೇಂದ್ರ ವ್ಯಾಪ್ತಿ ಭಾಗದ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ, ಪಲ್ಲಾಗಟ್ಟೆ, ಮರಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ಸೋಮವಾರ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

- ಜಗಳೂರು ತಾಲೂಕು ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ - - - ಕನ್ನಡಪ್ರಭ ವಾರ್ತೆ ಜಗಳೂರು

ಪಲ್ಲಾಗಟ್ಟೆ ವಿದ್ಯುತ್ ಕೇಂದ್ರ ವ್ಯಾಪ್ತಿ ಭಾಗದ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ, ಪಲ್ಲಾಗಟ್ಟೆ, ಮರಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ಸೋಮವಾರ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಮರುಕುಂಟೆ ಶಿವಕುಮಾರ್ ಮಾತನಾಡಿ, ಸರ್ಕಾರ ನಿಗದಿಪಡಿಸಿರುವ 7 ಗಂಟೆ ವಿದ್ಯುತ್‌ ಸೌಲಭ್ಯ ಸರಿಯಾಗಿ ನೀಡುತ್ತಿಲ್ಲ. ಒಂದು ದಿನ ಕೊಡುವುದು ಮತ್ತೆ ಇನ್ನೊಂದು ದಿವಸ ಲೈನ್ ಟ್ರಬಲ್ ಇದೆ ಎಂದು ವಿದ್ಯುತ್ ಕೊಡುತ್ತಿಲ್ಲ. ಕಳಪೆ ವಿದ್ಯುತ್‌ನಿಂದಾಗಿ ಅನೇಕ ಮೋಟಾರ್‌ಗಳು ನೀರೆತ್ತುತ್ತಿಲ್ಲ. ಕೆಲವು ಮೋಟರುಗಳು ಸುಟ್ಟುಹೋಗಿವೆ, ಸ್ಟಾರ್ಟರ್‌ಗಳು ಸಹ ಸುಟ್ಟುಹೋಗಿವೆ ಎಂದರು.

ಉರ್ಲುಕಟ್ಟೆ ಲಿಂಗನಗೌಡ ಮಾತನಾಡಿ, ಒಂದು ಕಡೆ ಅಡಕೆ, ಮೆಕ್ಕೇಜೋಳ, ರಾಗಿ ಸೇರಿದಂತೆ ಹಿಂಗಾರು ಬೆಳೆಗಳಿಗೆ ನೀರು ತೊಂದರೆಯಾಗಿದ. ಇನ್ನೊಂದೆಡೆ ಅನೇಕ ಕೆರೆ- ಕಟ್ಟೆಗಳು ನೀರು ತುಂಬಿ ತುಳುಕಿದ್ದರಿಂದ ರೈತರು ಬೆಳೆ ಬೆಳೆಯಲು ಉತ್ಸಹಕರಾಗಿದ್ದ ನಮಗೆ ಸಮರ್ಪಕ ವಿದ್ಯುತ್ ನೀಲ್ಲದೇ ಬೆಳೆಗಳನ್ನು ಉಳಿಸಿಕೊಳ್ಳಲು ಪರಿತಪಿಸುವಂತಾಗಿದೆ. ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರು ಇತ್ತ ಗಮನಹರಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭ ರೈತರಾದ ಎಸ್.ವಿ.ತಿಪ್ಪೇಸ್ವಾಮಿ, ಬಸವರಾಜ್, ಪ್ರವೀಣ್, ಸಿದ್ದೇಶ್, ದಿದ್ದಿಗಿ ರಾಜು, ಉರ್ಲುಕಟ್ಟೆ ರವಿಕುಮಾರ್, ಬಸವರಾಜ್, ಸಿದ್ದೇಶ್ ಸೇರಿದಂತೆ ಮರುಕುಂಟೆ, ದಿದ್ದಿಗಿ, ಮರುಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - - -27ಜೆ.ಜಿ.ಎಲ್.1:

ಜಗಳೂರು ತಾಲೂಕಿನ ಪಲ್ಲಾಗಟ್ಟೆ ವಿದ್ಯುತ್ ಕೇಂದ್ರದ ವ್ಯಾಪ್ತಿ ಭಾಗದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ, ನೂರಾರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ