ದೊಡ್ಲ ಡೈರಿ ಮುಂಭಾಗ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 26, 2023, 01:00 AM IST
25ಕೆಪಿಎಲ್2:ಕೊಪ್ಪಳ ತಾಲೂಕಿನ ಇಂದಿರಾನಗರದ ರೈತರಿಂದ ದೊಡ್ಲಾ ಡೈರಿ ಎದುರು ಪ್ರತಿಭಟನೆ ದೊಡ್ಲಾ ಡೈರಿಯಿಂದ ರೈತರ ಜಮೀನಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟಿಸಿದರು. | Kannada Prabha

ಸಾರಾಂಶ

ಜಮೀನುಗಳಿಗೆ ಹೊಂದಿಕೊಂಡು ದೊಡ್ಲ ಡೈರಿ ಇದ್ದು, ಡೈರಿಯಿಂದ ಅಕ್ಕ-ಪಕ್ಕದಲ್ಲಿರುವ ಬೋರ್‌ವೆಲ್‌ಗಳ ನೀರು ಹಾಳಾಗುತ್ತದೆ. ಡೈರಿಯಿಂದ ಬಿಟ್ಟ ರಾಸಾಯನಿಕಯುಕ್ತ ನೀರನ್ನು ಭೂಮಿಯ ಆಳಕ್ಕೆ ಇಳಿಯುತ್ತಿದ್ದು, ಇದರಿಂದ ಸುತ್ತಮುತ್ತ ದುರ್ವಾಸನೆ ಬರುತ್ತಿದೆ.

ಕೊಪ್ಪಳ: ದೊಡ್ಲ ಡೈರಿಯಿಂದ ರೈತರ ಜಮೀನಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಇಂದಿರಾನಗರದ ರೈತರು ಡೈರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಜಮೀನುಗಳಿಗೆ ಹೊಂದಿಕೊಂಡು ದೊಡ್ಲ ಡೈರಿ ಇದ್ದು, ಡೈರಿಯಿಂದ ಅಕ್ಕ-ಪಕ್ಕದಲ್ಲಿರುವ ಬೋರ್‌ವೆಲ್‌ಗಳ ನೀರು ಹಾಳಾಗುತ್ತದೆ. ಡೈರಿಯಿಂದ ಬಿಟ್ಟ ರಾಸಾಯನಿಕಯುಕ್ತ ನೀರನ್ನು ಭೂಮಿಯ ಆಳಕ್ಕೆ ಇಳಿಯುತ್ತಿದ್ದು, ಇದರಿಂದ ಸುತ್ತಮುತ್ತ ದುರ್ವಾಸನೆ ಬರುತ್ತಿದೆ. ಜನರು ಓಡಾಡಲು ತುಂಬ ತೊಂದರೆಯಾಗುತ್ತಿದೆ. ಸುತ್ತಲಿನ ಜಮೀನುಗಳಲ್ಲಿರುವ ಬೋರ್‌ವೆಲ್‌ಗಳು ಹಾಳಾಗಿವೆ. ಈ ನೀರನ್ನು ದನಕರುಗಳು ಸಹ ಕುಡಿಯುತ್ತಿಲ್ಲ. ಅಷ್ಟೊಂದು ಕಲುಷಿತ ಆಗಿವೆ.ಚಿಕ್ಕಮಕ್ಕಳು ಕಲುಷಿತ ನೀರು ಕುಡಿಯುವುದರಿಂದ ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಸುತ್ತಮುತ್ತಲಿನ ಫಲವತ್ತಾದ ಜಮೀನು ಹಾಳಾಗಿ ಜಮೀನು ಬೆಳೆಯದಂತಾಗಿದೆ. ಇದರಿಂದ ರೈತರಿಗೆ ತುಂಬಲಾರದ ನಷ್ಟವುಂಟಾಗುತ್ತಿದೆ. ಇದರ ಬಗ್ಗೆ ಡೈರಿಯವರಲ್ಲಿ ಕೇಳಿಕೊಂಡರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ರೈತರಾದ ಹನುಮಂತಪ್ಪ ಪಮ್ಮಾರ, ಗುಡದಪ‍್ಪ, ಯಂಕಪ್ಪ ನಾಯಕ, ಸಿಂಧನೂರು ಚವ್ಹಾಣ, ತಿರುಪತಿ ಚವ್ಹಾಣ, ಕುಮಾರ ರಾಠೋಡ, ದೊಡ್ಡೇಶ, ರಾಮಪ್ಪ ಕೊಪ್ಪದ, ಮಾರುತಿ ಗೌರಿಪುರ, ಇಂದರಗಿ ಗ್ರಾಪಂ ಸದಸ್ಯ ಮುತ್ತಣ್ಣ ಬಸವಪಟ್ಟಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ