ಕನ್ನಡಪ್ರಭ ವಾರ್ತೆ ನಾಪೋಕ್ಲು ಇಲ್ಲಿಗೆ ಸಮೀಪದ ಪಾಲೆಮಾಡು ಅಂಬೇಡ್ಕರ್ ಯುವಕ ಸಂಘ ಹಾಗೂ ಕಿಂಗ್ಸ್ ಇಲೆವೆನ್ ವತಿಯಿಂದ ಆಯೋಜಿಸಲಾದ ಮೂರನೇ ವರ್ಷದ ಹೊದ್ದೂರು ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬ್ರದರ್ಸ್ ಕೂಟಂ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ಬಾಲ್ ಬ್ಲಾಸ್ಟರ್ ತಂಡವನ್ನು ಸೋಲಿಸಿತು. ಬಲಮುರಿ ಗ್ರಾಮದ ಬೊಳ್ಳಚೆಟ್ಟೀರ ಕುಟುಂಬದ ಆಟದ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಹೊದ್ದೂರು ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಬಾಲ್ ಬ್ಲಾಸ್ಟರ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 25 ರನ್ ಕಲೆ ಹಾಕಿತು. ಬ್ರದರ್ಸ್ ಕೂಟಂ ತಂಡ 3.3 ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಾಲ್ ಬ್ಲಾಸ್ಟರ್ ತಂಡ ರನ್ನರ್‌ಅಪ್‌ಗೆ ತೃಪ್ತಿಪಟ್ಟಿತು. ಟೂರ್ನಿಯನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಧನಂಜಯ ಹಾಗೂ ಟ್ರೋಫಿ ದಾನಿ ಸಿ.ಕೆ.ಅಶ್ರಫ್ ಉದ್ಘಾಟಿಸಿದರು. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಧನಂಜಯ ವಹಿಸಿದ್ದರು. ಕ್ರೀಡಾಕೂಟದಲ್ಲಿ ತನು, ಕೌಶಿಕ್, ರಫೀಕ್, ಕುಲದೀಪ್, ಅಯ್ಯಪ್ಪ, ಹರೀಶ್ ಪಾಲ್ಗೊಂಡಿದ್ದರು. ಟ್ರೋಫಿಯನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ನೀಡಿದರೆ, ಬಲಮುರಿಯ ಗುತ್ತಿಗೆದಾರ ಜೀವಿತ್ ಕ್ರೀಡಾಕೂಟದ ಊಟದ ವ್ಯವಸ್ಥೆ ಕಲ್ಪಿಸಿದ್ದರು. * ವೈಯಕ್ತಿಕ ಪ್ರಶಸ್ತಿ ಸರಣಿ ಶ್ರೇಷ್ಠ ಪ್ರಶಸ್ತಿ ಬ್ರದರ್ಸ್ ಕೂಟಂ ತಂಡದ ಶಕೀರ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಬ್ರದರ್ಸ್ ಕೂಟಂ ತಂಡದ ಸುದೀಪ್, ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬ್ರದರ್ಸ್ ಕೂಟಂ ತಂಡದ ಶಕೀರ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಬಾಲ್ ಬ್ಲಾಸ್ಟರ್ ತಂಡದ ವಿನೋದ್ ಪಡೆದರು..