ಮುಂದುವರಿದ ಪ್ರತಿಭಟನೆ: ತಮಟೆ ಚಳ‍ವಳಿ ಮೂಲಕ ರೈತರ ಆಕ್ರೋಶ

KannadaprabhaNewsNetwork |  
Published : Oct 16, 2026, 01:45 AM IST
15ಕೆಜಿಎಲ್23ಕೊಳ್ಳೇಗಾಲದಲ್ಲಿ ಗುಂಡಾಲ್ ಹಿತರಕ್ಷಣಾ ಸಮಿತಿ ಹಾಗೂ ರೈತ ಸಂಘಟನೆಗಳ ವತಿಯಿಂದ 25ನೇದಿನದ ಅಹೋರಾತ್ರಿ ಧರಣಿ ಅಂಗವಾಗಿ ಗುರುವಾರ ತಮಟೆ ಚಳುವಳಿ ನಡೆಸಿ ಅಧಿಕಾರಿಗಳನ್ನು ಎಚ್ಚರಿಸಲಾಯಿತು. ಧಶರಥ್, ಚಿಕ್ಕಮಾಧು,ಕ ಬಸವರಾಜು ಇನ್ನಿತರಿದ್ದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕೊಳ್ಳೇಗಾಲ ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಮಿತಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 25ನೇ ದಿನದಲ್ಲಿ ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಪ್ರತಿಭಟನಾಕಾರರು ತಮಟೆ ಚಳವಳಿ ನಡೆಸುವ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಎಚ್ಚರಿಕೆ ರವಾನಿಸಿದರು.

- ದಪ್ಪ ಚರ್ಮದ ಅಧಿಕಾರಿಗಳಿಗೆ ರೈತರ ಸಮಸ್ಯೆ, ಪ್ರತಿಭಟನೆ ಕೂಗು ಕೇಳುತ್ತಿಲ್ಲ- ಆಕ್ರೋಶಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕೊಳ್ಳೇಗಾಲ ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಮಿತಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 25ನೇ ದಿನದಲ್ಲಿ ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಪ್ರತಿಭಟನಾಕಾರರು ತಮಟೆ ಚಳವಳಿ ನಡೆಸುವ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಎಚ್ಚರಿಕೆ ರವಾನಿಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಖಾಲಿ ಬಿಂದಿಗೆ ತಲೆಮೇಲೆ ಹೊತ್ತು, ಶಂಖ, ಜಾಗಟೆ ಹಾಗೂ ತಮಟೆ ಶಬ್ದದೊಂದಿಗೆ ತಾಲೂಕು ಕಚೇರಿಯವರೆಗೆ ತೆರಳಿ 25ದಿನದ ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ರೈತ ಸಂಘದ ಅಧ್ಯಕ್ಷ ಸರಗೂರು ನಾಗರಾಜು ಮಾತನಾಡಿ, ಕೆರೆ ಅಭಿವೃದ್ದಿಪಡಿಸಿ ಅತಿಕ್ರಮ ತೆರವುಗೊಳಿಸಿ ಗ್ರಾಮಠಾಣೆ ನಿಗದಿಮಾಡಿ ಇ-ಸ್ವತ್ತು ನೀಡಿ ಎಂಬಿತ್ಯಾದಿ ಬೇಡಿಕೆಗಳಿಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಮೌನ ತಾಳಿವೆ. ನ್ಯಾಯಯುತ ಬೇಡಿಕೆಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಈ ವೇಳೆ ಗುಂಡಾಲ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ದಶರಥ್ ಮಾತನಾಡಿ ನಮ್ಮದು ನ್ಯಾಯಯುತ ಪ್ರತಿಭಟನೆ, ನಾವು ಸರ್ಕಾರಿ ಆಸ್ತಿ ಉಳಿಸಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ನಾಲೆಗಳ ಹೂಳೆತ್ತಿಸಿ, ಅತಿಕ್ರಮ ತೆರವು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು 25ದಿನಗಳಿಂದಲೂ ಅಹೋ-ರಾತ್ರಿ ಧರಣಿ ನಡೆಸುತ್ತಿದ್ದೇವೆ, ಆದರೆ ದಪ್ಪ ಚರ್ಮದ ಅಧಿಕಾರಿಗಳಿಗೆ ಇದಾವುದು ಕೇಳುತ್ತಿಲ್ಲ, ಇದೆ ರೀತಿ ಮುಂದುವರಿದರೆ ಪ್ರತಿಭಟನೆ ಉಗ್ರ ಸ್ವರೂಪಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಹಿತ್ತಲದೊಡ್ಡಿ ನಾಗರಾಜು, ತೇರಂಬಳ್ಳಿ ಮೂರ್ತಿ, ಪ್ರಭುಸ್ವಾಮಿ, ಮಂಟೆಸ್ವಾಮಿ, ರಾಜಣ್ಣ ಮೋಳೆ, ಸೋಮಣ್ಣ , ಸಿದ್ದಯ್ಯನಪುರ ಲಕ್ಷಣಮೂರ್ತಿ, ಚಿಕ್ಕಮಾದು, ಬಸವರಾಜು ಎಸ್., ಮರುಸಿದ್ದಯ್ಯ, ಆನಂದ್, ಲಿಂಗರಾಜು, ಮರಯ್ಯ, ಪಿ. ಕೃಷ್ಣರಾಜ್, ಸಿದ್ದಯ್ಯನಪುರ ಕೆಂಪರಾಜು, ಮಾಲಂಗಿ ಬಸವರಾಜು, ಷಣ್ಮುಖಸ್ವಾಮಿ, ಮಲ್ಲರಾಜು, ಮುರಳೀಧರ ಇನ್ನಿತರಿದ್ದರು.

------

15ಕೆಜಿಎಲ್23

ಕೊಳ್ಳೇಗಾಲದಲ್ಲಿ ಗುಂಡಾಲ್ ಹಿತರಕ್ಷಣಾ ಸಮಿತಿ ಹಾಗೂ ರೈತ ಸಂಘಟನೆಗಳ ವತಿಯಿಂದ 25ನೇದಿನದ ಅಹೋರಾತ್ರಿ ಧರಣಿ ಅಂಗವಾಗಿ ಗುರುವಾರ ತಮಟೆ ಚಳವಳಿ ನಡೆಸಿ ಅಧಿಕಾರಿಗಳನ್ನು ಎಚ್ಚರಿಸಲಾಯಿತು. ಧಶರಥ್, ಚಿಕ್ಕಮಾಧು, ಬಸವರಾಜು ಇನ್ನಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್ ಆಪರೇಷನ್ ಸಿಎಂ ಮಾಡಿಸಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಯಲ್ಲಿ ಆಧಾರವಿಲ್ಲ: ಕೆ.ಎಂ.ಉದಯ್
ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ದೊಡ್ಡಅರಸಿನಕೆರೆ ಗ್ರಾಮ: ಶಾಸಕ ಉದಯ್