ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 11, 2026, 02:15 AM IST
ಚಿತ್ರ 10ಬಿಡಿಆರ್5ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯ ಹಿನ್ನೆಲೆಯಲ್ಲಿ ಔರಾದ್‌ (ಬಿ) ಪಟ್ಟಣದಲ್ಲಿ ಶನಿವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್‌ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಾಲ ಮನ್ನಾಗೊಳಿಸಲು ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧ ಎದುರು ಅ.12ರಂದು ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ, ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ ತಿಳಿಸಿದ್ದಾರೆ.

- ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಉದ್ದೇಶ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಾಲ ಮನ್ನಾಗೊಳಿಸಲು ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧ ಎದುರು ಅ.12ರಂದು ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ, ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ 217 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. 19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶ, ₹30 ಸಾವಿರ ಕೋಟಿಯಷ್ಟು ಬೆಳೆ ನಷ್ಟದಿಂದ ರೈತರ ಸಂಕಷ್ಟಕ್ಕೆ ಈಡಾಗಿದ್ದಾರೆ. 40 ಲಕ್ಷ ರೈತರಿಗೆ ₹2500 ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಬೆಳೆ ಪರಿಹಾರ ರೈತರಿಗೆ ನೀಡುವ ಭಿಕ್ಷೆಯಲ್ಲ ಎಂಬುದನ್ನು ಸರ್ಕಾರಕ್ಕೆ ತಿಳಿಸಲು ಧರಣೆ ಹಮ್ಮಿಕೊಂಡಿದ್ದೇವೆ. ಬರಗಾಲದ ಹಿನ್ನೆಲೆ ಕೃಷಿ ಸಾಲ ಮನ್ನಾ ಅಗಬೇಕು ಎಂಬುದು ರಾಜ್ಯದ ರೈತ ಸಮೂಹದ ಒಕ್ಕೊರಲ ಆಗ್ರಹವಾಗಿದೆ ಎಂದಿದ್ದಾರೆ.

ಗ್ರಾಮೀಣ ರೈತ ಮಹಿಳೆಯರು ಖಾಸಗಿ ಫೈನಾನ್ಸಗಳಲ್ಲಿ ವಾರ, ತಿಂಗಳ ಬಡ್ಡಿಗೆ ಸಾಲ ಪಡೆದುಕೊಂಡಿದ್ದು, ಕನಿಷ್ಠ ಎರಡು ವರ್ಷ ಅವಧಿಗೆ ಸಾಲ ವಸೂಲಿ ಕ್ರಮ ನಿಲ್ಲಿಸಲು ಸರ್ಕಾರ ಖಾಸಗಿ ಫೈನಾನ್ಸೆ ಗಳಿಗೆ ಆದೇಶ ಮಾಡಬೇಕೆಂದು ರೈತ ಸಂಘ ಒತ್ತಾಯ ಪಡಿಸಿದೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲದ ಕಾರಣ ಪ್ರತಿ ಎಕರೆಗೆ ಸರ್ಕಾರ ₹25 ಸಾವಿರ ಬರ ಪರಿಹಾರ ನೀಡಬೇಕು, ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ಕನಿಷ್ಠ 9 ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು. ವಿದ್ಯುತ್ ಸಮಸ್ಯೆ ತಪ್ಪಿಸಬೇಕು, ಕಬ್ಬಿನ ಎಫ್‌ಆರ್‌ಪಿ ದರ ಕೇಂದ್ರ ಸರ್ಕಾರ ಏರಿಕೆ ಮಾಡಬೇಕು. ಅಲ್ಲದೇ, ರಾಜ್ಯ ಸರ್ಕಾರ ಸಹ ತಮಿಳುನಾಡು ಮಾದರಿಯಲ್ಲಿ ಎಸ್.ಎ.ಪಿ. ದರ ₹800 ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವ ಕಾರಣ 1 ಕ್ವಿಂಟಲ್ ಒಣ ಅಡಕೆಗೆ ಮಾರುಕಟ್ಟೆಯಲ್ಲಿ ₹17000 ಬೆಲೆ ಕುಸಿದಿದೆ. ಹೀಗೆ ಬೆಲೆ ಇಳಿಕೆಯಿಂದ ಅಡಕೆ ಬೆಳೆಗಾರರಿಗೆ ಸಂಕಷ್ಟವಾಗಿದೆ. ಈ ಕಾರಣ ಅಡಕೆ ಬೆಳೆಗಾರರ ಹಿತರಕ್ಷಣೆ ಮಾಡಬೇಕು. ಅಡಕೆ ಬೆಳೆಗೆ ವಿಶೇಷ ಪ್ಯಾಕೇಚ್ ಘೋಷಣೆ ಮಾಡಬೇಕು ಎಂದಿದ್ದಾರೆ.

ಈ ಎಲ್ಲ ಹಕ್ಕೋತ್ತಾಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲೆಂದೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ.12ರ ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯದ ರೈತರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು. ನಂತರ ವಿಧಾನಸೌಧ ಎದುರು ಸಹ ಧರಣಿ ನಡೆಸಲಾಗುವುದು. ಈ ಹಿಮ್ಮೆಲೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಎಲ್ಲ ರೈತ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರೈತ ಹೋರಾಟಕ್ಕೆ ಶಕ್ತಿ ತುಂಬಬೇಕು. ಅವಳಿ ತಾಲೂಕುಗಳಿಂದ ಬೆಂಗಳೂರಿಗೆ ಬರಲಿರುವ ರೈತರು ಅ.11ರಂದು ಭಾನುವಾರ ಸಂಜೆ ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು
ಯುವಶಕ್ತಿಯಿಂದಲೇ ಪ್ರಜಾಪ್ರಭುತ್ವಕ್ಕೆ ಬಲ: ಸರಸ್ವತಿ ಓಲೆಕಾರ್