ದೇವನಹಳ್ಳಿ: ತಾಲೂಕಿನ ಜನತೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರೀ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ಸರ್ಕಾರದಿಂದ ಯಾವುದೇ ಸಹಾಯಧನ ಬರುವುದಿಲ್ಲ. ಸಂಘದ ಸದಸ್ಯರೇ ಹಣ ಹೂಡಿಕೆ ಮಾಡಿ ಅವಶ್ಯಕತೆ ಇರುವ ಸದಸ್ಯರಿಗೆ ಸಾಲ ನೀಡಿ ಅವರಿಂದ ಸಾಲ ಹಿಂಪಡೆಯಬೇಕು. ನಾನು ಸಹ 50 ವರ್ಷದಿಂದ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಹಕಾರ ಕ್ಷೇತ್ರ ನನಗೆ ಬಹಳಷ್ಟು ಕೊಡುಗೆ ನೀಡಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿ ಮಾಡಿರುವ ಅನ್ನಭಾಗ್ಯದಿಂದ ರಾಜ್ಯದಲ್ಲಿ ಹಸಿವಿನಿಂದ ಯಾರು ಬಳಲುತ್ತಿಲ್ಲ. ಪ್ರತಿಯೊಬ್ಬರಿಗೂ ಅನ್ನಭಾಗ್ಯ ಅನುಕೂಲವಾಗಿದೆ. ಅನ್ನಭಾಗ್ಯ ಕೇವಲ ಕಾಂಗ್ರೆಸ್ ಪಕ್ಷದವರಿಗೆ ನೀಡಿಲ್ಲ, ಎಲ್ಲಾ ಪಕ್ಷದವರಿಗೂ ನೀಡಿದ್ದಾರೆಂದು ಹೇಳಿದರು.
ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಂಘ ಸ್ಥಾಪಿಸಿದ್ದು, ಸಂಘದಲ್ಲಿ ತರಬೇತಿ ಸೇರಿದಂತೆ ಸಾಲ ಸೌಲಭ್ಯ ಸಹ ನೀಡಲಾಗುತ್ತಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದಲ್ಲಿ ಸದಸ್ಯತ್ವ ಪಡೆದು ಸಹಕಾರ ಸಂಘದಲ್ಲೇ ವ್ಯವಹರಿಸಿ ಸಂಘದ ಅಭಿವೃದ್ಧಿಗೆ ಸಹಕಾರ ಎಂದರು.ಕಾರ್ಯಕ್ರಮದಲ್ಲಿ ದೊಡ್ದಬಳ್ಳಾಪುರ ವಾಲ್ಮೀಕಿ ಗುರುಪೀಠ ಶ್ರೀ ಬ್ರಹ್ಮಾನಂದ ಗೂರೂಪಿ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಜಿ.ಚಂದ್ರಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಅಂಬರೀಶ್‌ಗೌಡ, ಬಯಪ ಮಾಜಿ ಅಧ್ಯಕ್ಷ ಅಶ್ವಥ್ ನಾರಾಯಣ್, ಬಿ.ಕೆ.ನಾರಾಯಣಸ್ವಾಮಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಶ್ರೀ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘದ ಉಪಾಧ್ಯಕ್ಷ ಯಲಿಯೂರು ಜಿ.ರಾಧಾಕೃಷ್ಣ, ನಿರ್ದೇಶಕರಾದ ಶ್ರೀನಿವಾಸ್, ಎ.ಬಿ.ವೀರಭದ್ರಪ್ಪ, ತಿಮ್ಮರಾಜು, ರೇಣುಕಾ, ನವೀನ್, ಲೊಕೇಶ್, ನವೀನ್, ನಾರಾಯಣಸ್ವಾಮಿ, ಮಹೇಶ್, ಸುಜಾತಮ್ಮ ಉಪಸ್ಥಿತರಿದ್ದರು.
೦೨ ದೇವನಹಳ್ಳಿ ಚಿತ್ರಸುದ್ದಿ: ೧ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಶ್ರೀ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘವನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ವಾಲ್ಮೀಕಿ ಗುರುಪೀಠ ಶ್ರೀ ಬ್ರಹ್ಮಾನಂದ ಗೂರೂಪಿ, ಮಾಜಿರಾದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿ.ಚಂದ್ರಣ್ಣ ಇತರರಿದ್ದರು.