ರೈತರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು: ಮಹೇಶ್ ಕುಮಾರ್

KannadaprabhaNewsNetwork |  
Published : Oct 06, 2026, 01:45 AM IST
5ಕೆಎಂಎನ್ ಡಿ14 | Kannada Prabha

ಸಾರಾಂಶ

ಆಧುನಿಕವಾಗಿ ಮುಂದುವರಿದರೂ ಕೂಡ ರೈತರು ಸಂಪ್ರದಾಯಕ ಬೆಳೆ ಬೆಳೆಯಲಾಗುತ್ತಿದೆ. ನೀರನ್ನು ಮಿತ ಬಳಸಿ ಕೃಷಿಯನ್ನು ಬೆಳೆಯಬಹುದು ಎನ್ನುವ ಅರಿವು ರೈತರಿಗೆ ಅವಶ್ಯಕ. ಕೃಷಿ ಸಂಬಂಧಿಸಿದ ತರಬೇತಿಗಳಲ್ಲಿ ಹೆಚ್ಚಿನ ರೈತರು ಪಾಲ್ಗೊಳ್ಳುವ ಮೂಲಕ ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕೃಷಿ ಸಂಬಂಧಿಸಿದ ತರಬೇತಿಗಳಲ್ಲಿ ಹೆಚ್ಚಿನ ರೈತರು ಪಾಲ್ಗೊಳ್ಳುವ ಮೂಲಕ ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘ ತಾಲೂಕು ಅಧ್ಯಕ್ಷ ಮಹೇಶ್‌ಕುಮಾರ್ ತಿಳಿಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಧಾರವಾಡದ ವಾಲ್ಮಿ ಸಂಸ್ಥೆಯಿಂದ ಅ.5ರಿಂದ 7ವರೆಗೆ ಮೂರು ದಿನಗಳ ಕಾಲ ನಡೆಯುವ ನೆಲ ಮತ್ತು ಜಲ ಸಂಸ್ಕರಣ ದ ಬಗ್ಗೆ ತರಬೇತಿ ಶಿಬಿರಕ್ಕೆ ರೈತರು ಹೋರಡುವ ವೇಳೆ ಮಾತನಾಡಿದ ಅವರು, ಆಧುನಿಕವಾಗಿ ಮುಂದುವರಿದರೂ ಕೂಡ ರೈತರು ಸಂಪ್ರದಾಯಕ ಬೆಳೆ ಬೆಳೆಯಲಾಗುತ್ತಿದೆ. ನೀರನ್ನು ಮಿತ ಬಳಸಿ ಕೃಷಿಯನ್ನು ಬೆಳೆಯಬಹುದು ಎನ್ನುವ ಅರಿವು ರೈತರಿಗೆ ಅವಶ್ಯಕ ಎಂದರು.

ಧಾರವಾಡದಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಕಾವೇರಿ ಜಲಾನಯನ ಯೋಜನೆ ಕೃಷ್ಣರಾಜಸಾಗರ, ಅಣೆಕಟ್ಟೆ, ಪೂರಿಗಾಲಿ ಹನಿ, ತುಂತುರು ನೀರಾವರಿ, ಹೇಮಾವತಿ, ಕಬಿನಿ, ಶಿಂಷಾ, ಅರ್ಕಾವತಿ, ವೃಷಭಾವತಿ, ಸುವರ್ಣ ಮುಖ ನದಿ ನೀರಾವರಿ ಅಚ್ಚುಕಟ್ಟು ಪ್ರದೇಶದಡಿ ಬರುವ ರೈತರಿಗೆ ಹಾಗೂ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಭೂಮಿ ಹಾಗೂ ನೀರು ಬಳಕೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಬೆಳಗಾವಿ ಹತ್ತಿರದ 9 ಕೋಟಿ ರು. ವೆಚ್ಚದಲ್ಲಿ ರೈತರೇ ಸ್ವತಹ ಹನಿ ಮತ್ತು ತುಂತುರು ನೀರು ಯೋಜನೆ ನಿರ್ಮಾಣ ಮಾಡಿರುವುದನ್ನು ವೀಕ್ಷಣೆ ಮಾಡುವುದು ಹಾಗೂ ಸಾವಯವ ಕೃಷಿಯಲ್ಲಿ ಸಮಗ್ರ ಕೃಷಿ ಮಾಡುತ್ತಿರುವ ಮಲ್ಲೇಶಪ್ಪ ಬಿಸಿ ರೊಟ್ಟಿ ರವರ ತೋಟಕ್ಕೆ ಭೇಟಿ ನೀಡಿ ಹಲವು ವಿಷಯಗಳನ್ನು ಕಲೆಹಾಕಲಾಗುವುದು ಮಾಹಿತಿ ನೀಡಿದರು.

ಈ ವೇಳೆ ಜೈನ್ ಕಂಪನಿ ರಾಘವೇಂದ್ರ, ರೈತ ಮುಖಂಡರಾದ ಕಪಿನಿಗೌಡ, ಚಿಕ್ಕಣ್ಣ, ಬಸವರಾಜು, ದ್ಯಾಪೇಗೌಡ, ಬೋರೇಗೌಡ, ಮಹದೇವಸ್ವಾಮಿ ಸೇರಿದಂತೆ ಹಲವು ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಮತದಾರರ ಶುದ್ಧೀಕರಣಕ್ಕೆ ಎಸ್‌ಐಆರ್ ಅಗತ್ಯ: ಯತ್ನಾಳ
₹5 ಕೋಟಿ ವೆಚ್ಚದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ: ಶಾಸಕ ಮಂಜುನಾಥ್‌