ವಿವಿಧ ಯೋಜನೆಯಡಿ ರೈತರು ಸವಲತ್ತು ಪಡೆಯಬೇಕು: ಕೃಷಿ ಅಧಿಕಾರಿ ಕರಿಯಪ್ಪ

KannadaprabhaNewsNetwork |  
Published : Feb 04, 2024, 01:33 AM IST
ನೇರಲಕೆರೆ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ಸೌಲಭ್ಯ ಕುರಿತು ಕಾರ್ಯಾಗಾರ | Kannada Prabha

ಸಾರಾಂಶ

ರೈತ ಸಂಪರ್ಕ ಕೇಂದ್ರ ಎಂದಿಗೂ ರೈತ ಬಾಂಧವರಿಗಾಗಿ ಕೆಲಸ ಮಾಡುತ್ತಿದೆ, ಅನೇಕ ಯೋಜನೆಗಳಡಿ ರೈತರು ಸವಲತ್ತುಗಳನ್ನು ಪಡೆಯಬೇಕು ಎಂದು ಕೃಷಿ ಅಧಿಕಾರಿ ಕರಿಯಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ರೈತ ಸಂಪರ್ಕ ಕೇಂದ್ರ ಎಂದಿಗೂ ರೈತ ಬಾಂಧವರಿಗಾಗಿ ಕೆಲಸ ಮಾಡುತ್ತಿದೆ, ಅನೇಕ ಯೋಜನೆಗಳಡಿ ರೈತರು ಸವಲತ್ತುಗಳನ್ನು ಪಡೆಯಬೇಕು ಎಂದು ಕೃಷಿ ಅಧಿಕಾರಿ ಕರಿಯಪ್ಪ ಹೇಳಿದ್ದಾರೆ.ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ದಿಂದ ಸಮೀಪದ ನೇರಲಕೆರೆ ಶಿವಕುಮಾರ ಬಯಲು ರಂಗಮಂದಿರದಲ್ಲಿ ರೈತ ಸಂಪರ್ಕ ಕೇಂದ್ರದ ಸೌಲಭ್ಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ರೈತರಿಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರೈತ ಸಂಪರ್ಕ ಕೇಂದ್ರದ ಮೂಲಕ ಕೊಡಿಸಲಾಗುವುದು ಎಂದು ಹೇಳಿದರು.ಗ್ರಾಮದ ಹಿರಿಯ ರೈತ ಎ.ಆರ್.ರಾಜಶೇಖರ್ ಮಾತನಾಡಿ ರೈತರು ಕೃಷಿ ಇಲಾಖೆ ಉಪಯೋಗ ಪಡೆಯಬೇಕು, ಅಡಕೆಯೊಂದಿಗೆ ಮಿಶ್ರ ಬೆಳೆ ಪದ್ಧತಿ ಅಳವಡಿಸಬೇಕು ಎಂದು ಹೇಳಿದರು.ಟಿ.ಎ.ಪಿ.ಸಿ.ಎಂ.ಸಿ.ಅಧ್ಯಕ್ಷ ಸುಧಾಕರ್ ಮಾತನಾಡಿ ರೈತರು ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.

ಶ್ರೀ ಅಮೃತೇಶ್ವರ ಪ್ರೌಢಶಾಲೆ ಸಮಿತಿ ಉಪಾಧ್ಯಕ್ಷ ಷಡಾಕ್ಷರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತರಾದ ಪ್ರಕಾಶ್, ಮರುಳಸಿದ್ದಪ್ಪ, ವಿದ್ಯಾರ್ಥಿನಿ ಪ್ರಿಯಾಂಕ , ಅಕ್ಷತಾ ಹಿರೇಮಠ್ , ಅಕ್ಷತಾ, ಕೃಪಾ , ಪೃಥ್ವಿ ಭಾಗವಹಿಸಿದ್ದರು.3ಕೆಟಿಆರ್.ಕೆ.5ಃ

ತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ಸೌಲಭ್ಯ ಕುರಿತ ಕಾರ್ಯಾಗಾರದಲ್ಲಿ ಗ್ರಾಮದ ಹಿರಿಯ ರೈತ ಎ.ಆರ್.ರಾಜೇಶ್ಖರ್ ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕರಿಯಪ್ಪ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಸುಧಾಕರ್, ಶ್ರೀ ಅಮೃತೇಶ್ವರ ಪ್ರೌಢಶಾಲೆ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ