ಜಾನುವಾರು ಸಾಕಣೆಯಿಂದ ರೈತರು ಆರ್ಥಿಕವಾಗಿ ಪ್ರಗತಿ ಹೊಂದಲಿ : ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork |  
Published : Sep 20, 2024, 01:44 AM ISTUpdated : Sep 20, 2024, 01:10 PM IST
ಪೋಟೂ ಶಿರ್ಷಿಕೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಶ್ವಾಸ ವೈದ್ಯ, ಅಧಿಕಾರಿಗಳು, ಮುಖಂಡರು ಇದ್ದಾರೆ. | Kannada Prabha

ಸಾರಾಂಶ

ರೈತರು ಪಶು ಇಲಾಖೆಯ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಜಾನುವಾರು ಸಾಕಬೇಕು.ರೈತರ ಆರ್ಥಿಕ ಪ್ರಗತಿಗೆ ಪಶು ಸಾಕಾಣಿಕೆ ಬಳಹಷ್ಟು ಬಲ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

  ಯರಗಟ್ಟಿ :  ರೈತರು ಪಶು ಇಲಾಖೆಯ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಜಾನುವಾರು ಸಾಕಬೇಕು. ರೈತರು ಕೃಷಿ ಚಟುವಟಿಕೆಯೊಂದಿಗೆ ಜಾನುವಾರುಗಳಿಂದ ಹೆಚ್ಚಿನ ಆದಾಯ ಪಡೆಯಬಹುದಾಗಿದ್ದು, ರೈತರ ಆರ್ಥಿಕ ಪ್ರಗತಿಗೆ ಪಶು ಸಾಕಾಣಿಕೆ ಬಳಹಷ್ಟು ಬಲ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಆರ್ ಐಡಿಎಫ್ ಯೋಜನೆಯಡಿ ₹52 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಪಶು ಆಸ್ಪತ್ರೆ ಆರಂಭವಾಗಿದೆ. ಈ ಕಟ್ಟಡ ನಿರ್ಮಾಣದಿಂದ ರೈತರಿಗೆ, ಜಾನುವಾರು ಸಾಕುವವರಿಗೆ ಪ್ರಯೋಜನವಾಗಲಿದೆ. ಸದ್ಯ ದನಗಳ ಸಂಖ್ಯೆ ಕಡಿಮೆಯಾಗಿದೆ. ಜಾನುವಾರು ಸಾಕಲು ಅಧಿಕಾರಿಗಳು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಕಾಲು ಮತ್ತು ಬಾಯಿ ಬೇನೆ, ಕುರಿಗಳು ನೀಲಿ ನಾಲಿಗೆ ರೋಗದಿಂದ ಸಾಕಷ್ಟು ಪ್ರಮಾಣದಲ್ಲಿ ಸಾವಿಗೀಡಾಗುತ್ತವೆ. ಇದನ್ನು ಮನಗಂಡು ತ್ವರಿತಗತಿಯಲ್ಲಿ ಪಶು ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ತಹಸೀಲ್ದಾರ ಎಂ.ಎನ್. ಮಠದ, ಪಪಂ ಮುಖ್ಯಾಧಿಕಾರಿ ಡಿ.ಎನ್. ತಹಶೀಲ್ದಾರ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ್ ಕೂಲೇರ್, ಪಶು ವೈದ್ಯಾಧಿಕಾರಿ ಎಂ.ವಿ. ಪಾಟೀಲ, ಪಪಂ ಸದಸ್ಯರಾದ ಹನುಮಂತ ಹಾರುಗೊಪ್ಪ, ನಿಖಿಲ ಪಾಟೀಲ, ಸಲೀಂಬೇಗ ಜಮಾದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನವರ, ಉಪಾಧ್ಯಕ್ಷ ಬಸವರಾಜ ಆರಿಬೇಂಚಿ, ಮಂಜುನಾಥ ತಡಸಲೂರ, ಗ್ಯಾರಂಟಿ ಯೋಜನೆಗಳ ಅನಷ್ಠಾನ ಸಮತಿ ಅಧ್ಯಕ್ಷ ಗೋಪಾಲ ದಳವಾಯಿ, ಮಲ್ಲು ಜಕಾತಿ, ಶಿವಾನಂದ ಕರಿಗೋಣ್ಣವರ, ರಫೀಕ್ ಡಿ.ಕೆ, ಪಶು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸಾರ್ವನಿಕರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ