ರೈತರು ಕೊಬ್ಬರಿಗೆ ಮಹತ್ವ ನೀಡಲಿ:ಎಡೀಸಿ ಎಚ್.ಎಲ್.ನಾಗರಾಜು

KannadaprabhaNewsNetwork |  
Published : Oct 10, 2024, 02:20 AM IST
೯ಕೆಎಂಎನ್‌ಡಿ-೪ಮಂಡ್ಯ ನಗರದಲ್ಲಿರುವ ಪಿಇಎಸ್ ಸ್ವಾಮಿ ವಿವೇಕಾನಂದ ರಂಗಮಅದಿರದಲ್ಲಿ ನೆಲದನಿ ಬಳಗ ಆಯೋಜಿಸಿದ್ದ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನಕ್ಕೆ ಗಣ್ಯರೊಂದಿಗೆ ಬೆಲ್ಲ-ಕೊಬ್ಬರಿಕಾಯಿ ತಿನ್ನುವ ಮೂಲಕ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಉದ್ಘಾಟಿಸಿದರು. | Kannada Prabha

ಸಾರಾಂಶ

ಎಳನೀರು ಕೊಯ್ಯುವುದರಿಂದ ಮರಗಳು ದೀರ್ಘಕಾಲ ಉಳಿಯುವುದಿಲ್ಲ. ಅದಕ್ಕಾಗಿ ತೆಂಗು ಬೆಳೆಯಲ್ಲಿ ಆದಾಯ ಕಾಣಬೇಕಾದರೆ ರೈತರು ಕೊಬ್ಬರಿ ಆಗುವವರೆಗೂ ತೆಂಗಿನಕಾಯಿಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಕೇವಲ ಹಣದ ಆಸೆಗೆ ಮೊದಲೇ ಎಳನೀರು ಕೊಯ್ಲು ಮಾಡಿಸಿದರೆ ನಂತರ ಕೊಬ್ಬರಿ ಬೆಲೆ ದುಬಾರಿಯಾಗಿ ನೀವೇ ಕೊಂಡುಕೊಳ್ಳುವ ಸ್ಥಿತಿಗೆ ಬರುತ್ತೀರಾ.

ಕನ್ನಡಪ್ರಭ ವಾರ್ತೆ ಮಂಡ್ಯ

ತೆಂಗು ಬೆಳೆಯಲ್ಲಿ ರೈತರು ಎಳನೀರು ಕೊಯ್ಲು ಕೈಬಿಟ್ಟು ಕೊಬ್ಬರಿಗೆ ಮಹತ್ವ ನೀಡುವುದು ಉತ್ತಮ. ಏಕೆಂದರೆ ಕೊಬ್ಬರಿಯುಕ್ತ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಕೊಬ್ಬರಿ ಬೆಲೆಯೂ ಗಗನಮುಖಿಯಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನೆಲದನಿ ಬಳಗದ ವತಿಯಿಂದ ಆಯೋಜಿಸಿದ್ದ ನಿರ್ದಿಗಂತ ಪ್ರಸ್ತುತಿಯೊಂದಿಗೆ ಶಕೀಲ್ ಅಹಮದ್ ನಿರ್ದೇಶನದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಳನೀರು ಕೊಯ್ಯುವುದರಿಂದ ಮರಗಳು ದೀರ್ಘಕಾಲ ಉಳಿಯುವುದಿಲ್ಲ. ಅದಕ್ಕಾಗಿ ತೆಂಗು ಬೆಳೆಯಲ್ಲಿ ಆದಾಯ ಕಾಣಬೇಕಾದರೆ ರೈತರು ಕೊಬ್ಬರಿ ಆಗುವವರೆಗೂ ತೆಂಗಿನಕಾಯಿಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಕೇವಲ ಹಣದ ಆಸೆಗೆ ಮೊದಲೇ ಎಳನೀರು ಕೊಯ್ಲು ಮಾಡಿಸಿದರೆ ನಂತರ ಕೊಬ್ಬರಿ ಬೆಲೆ ದುಬಾರಿಯಾಗಿ ನೀವೇ ಕೊಂಡುಕೊಳ್ಳುವ ಸ್ಥಿತಿಗೆ ಬರುತ್ತೀರಾ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ೬೫೦ಕ್ಕೂ ಹೆಚ್ಚು ಆಲೆಮನೆಗಳಿವೆ, ಅವುಗಳಿಗೆ ಸಹಕಾರ ನೀಡುವ ಅಗತ್ಯವಿದೆ ಎಂಬುದನ್ನು ಸರ್ಕಾರಕ್ಕೆ ಮನವಿಯನ್ನು ನೀಡಿದ್ದೇವೆ. ಬೆಲ್ಲ ಉತ್ಪಾದನೆಗೆ ಒತ್ತಾಸೆಯಾಗಿ ನಿಲ್ಲುವ ಜೊತೆಗೆ ಸಕ್ಕರೆಯನ್ನು ಪಡಿತರ ವಿತರಣೆಯಲ್ಲಿಯೂ ನೀಡಬೇಕು ಎನ್ನುವ ದೃಷ್ಟಿಯಿಂದ ನೀಡಲಾಗಿದೆ. ಇದರಿಂದ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೂ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂಬುದು ನಮ್ಮ ಭಾವನೆ. ಜನರು ಬೆಲ್ಲವನ್ನು ಹೆಚ್ಚು ಬಳಸಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ನೆಲದನಿ ಬಳಗವು ಬಹಳಷ್ಟು ನಾಟಕಗಳನ್ನು ವೈಚಾರಿಕವಾಗಿ ನಡೆಸಿಕೊಂಡು ಬರುತ್ತಿದೆ, ಇವರಿಗೆ ಸಹಕಾರ ನೀಡಿರುವವರಿಗೂ ಧನ್ಯವಾದ ತಿಳಿಸುತ್ತೇನೆ, ಸಾಂಸ್ಕೃತಿಕ, ಪರಿಸರ ಹಾಗೂ ಆರೋಗ್ಯದ ಕಾರ್ಯಕ್ರಮಗಳನ್ನು ಹೆಚ್ಚು ಮಾಡಿಕೊಂಡು ಬರಲಿ ಎಂದು ಹಾರೈಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ.ಭೈರಿ, ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಸ್ಪಂದನಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆದಿತ್ಯಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಸಮಾನ ಮನಸ್ಕ ವೇದಿಕೆಯ ಮುಕುಂದ, ಬಳಗದ ಪೋಷಕಿ ಎಸ್.ಸಿ.ರುಕ್ಮಿಣಿ ಶಂಕರೇಗೌಡ, ಅಧ್ಯಕ್ಷ ಲಂಕೇಶ್ ಮಂಗಲ ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ