ರೈತರು ಶ್ರೀಗಂಧ ಬೆಳೆಗೆ ಪ್ರಾಮುಖ್ಯತೆ ಕೊಡಿ: ಕವಿತಾ ಮಿಶ್ರಾ

KannadaprabhaNewsNetwork |  
Published : Jun 06, 2025, 01:28 AM ISTUpdated : Jun 06, 2025, 01:29 AM IST
ವಿಶ್ವ ಪರಿಸರ ದಿನಾಚರಣೆ | Kannada Prabha

ಸಾರಾಂಶ

ವಿಶ್ವದಲ್ಲಿ ಅತಿ ಹೆಚ್ಚು ಎಣ್ಣೆ ಅಂಶವಿರುವ ನಾಡು ನಮ್ಮದು. ಆದ್ದರಿಂದ ಕರ್ನಾಟಕದ ಹೊನ್ನ ಕಳಸ ಶ್ರೀಗಂಧವನ್ನು ಪ್ರತಿಯೊಬ್ಬ ರೈತ ಬೆಳೆದಲ್ಲಿ ಆತನ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬದುಕು ಬಂಗಾರವಾಗುತ್ತದೆ ಎಂದು ರಾಯಚೂರಿನ ಕವಿತಾಳದ ಶ್ರೀಗಂಧ ಕೃಷಿಕರಾದ ಕವಿತಾ ಮಿಶ್ರಾ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ವಿಶ್ವದಲ್ಲಿ ಅತಿ ಹೆಚ್ಚು ಎಣ್ಣೆ ಅಂಶವಿರುವ ನಾಡು ನಮ್ಮದು. ಆದ್ದರಿಂದ ಕರ್ನಾಟಕದ ಹೊನ್ನ ಕಳಸ ಶ್ರೀಗಂಧವನ್ನು ಪ್ರತಿಯೊಬ್ಬ ರೈತ ಬೆಳೆದಲ್ಲಿ ಆತನ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬದುಕು ಬಂಗಾರವಾಗುತ್ತದೆ ಎಂದು ರಾಯಚೂರಿನ ಕವಿತಾಳದ ಶ್ರೀಗಂಧ ಕೃಷಿಕರಾದ ಕವಿತಾ ಮಿಶ್ರಾ ಹೇಳಿದರು.

ಸ್ಥಳೀಯ ಪ್ರಗತಿಪರ ರೈತ ಅಶೋಕಗೌಡ ಪಾಟೀಲ ಅವರ ತೋಟದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಸಿರು ಹಬ್ಬ ಕೃಷಿ ಅರಣ್ಯ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ಶ್ರೀಗಂಧ ಮಳೆಯಾಧಾರಿತ ಬೆಳೆ, ಆಸುಪಾಸಿನಲ್ಲಿ ಬೆಳೆದ ಕಸವೇ ಅದಕ್ಕೆ ಗೊಬ್ಬರ, ಖರ್ಚು ವೆಚ್ಚ ಕಡಿಮೆ ಮತ್ತು ಕಾರ್ಮಿಕರ ಅವಶ್ಯಕತೆಯೇ ಇಲ್ಲ. ಕೇವಲ ಅದರ ಪಾಲನೆ, ಪೋಷಣೆಗೆ ಕಣ್ಗಾವಲಿನ ಅವಶ್ಯಕತೆ ಮಾತ್ರ ಇದೆ. ಪ್ರಸ್ತುತ ೧ ಕೆಜಿ ಶ್ರೀಗಂಧದ ಬೆಲೆ ಮಾರುಕಟ್ಟೆಯಲ್ಲಿ ₹೧೫ ರಿಂದ ₹೨೦ಸಾವಿರವಿದೆ. ೧೦ ರಿಂದ ೧೫ ವರ್ಷಗಳಲ್ಲಿ ರೈತರು ೧ ಎಕ್ರೆ ಭೂಮಿಯಿಂದ ಕನಿಷ್ಠ ₹೩ ರಿಂದ ₹೪ ಕೋಟಿ ಗಳಿಸಬಹುದು. ಈ ರೀತಿ ಆಸ್ಟ್ರೇಲಿಯಾ ಜಗತ್ತಿಗೆ ವಿವಿಧ ತಳಿಯ ಶ್ರೀಗಂಧ ರಫ್ತು ಮಾಡುತ್ತಿದೆ. ನಮ್ಮ ರೈತರು ಸಹಿತ ಕೆಂಪು ಚಂದನ, ಚೆಂದನ, ಸಾಗವಾನಿ, ಹೆಬ್ಬೇವು ಮತ್ತು ಇನ್ನಿತರ ಅರಣ್ಯ ಕೃಷಿ ಮರಗಳನ್ನು ಬೆಳೆದು ಕೋಟಿ ಕೋಟಿ ಹಣ ಗಳಿಸಬೇಕು ಎಂದರು.

ಶ್ರೀಗಂಧ ಕೃಷಿಕ ಕುಷ್ಟಗಿಯ ರಮೇಶ ಬಲ್ಲುಟಗಿ ಮಾತನಾಡಿ, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು. ಈ ವಿದ್ಯೆಯನ್ನು ವೈಜ್ಞಾನಿಕವಾಗಿ ಒರೆಗೆ ಹಚ್ಚಿ ರೈತರು ಬೆಳೆ ತೆಗೆಯಬೇಕಿದೆ. ಲಾಭದಾಯಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಉತ್ತಮ ಆರ್ಥಿಕ ಸಾಂಪ್ರದಾಯಿಕ ಬೆಳೆ ಯಾವುದಾದರೂ ಇದ್ದರೆ ಅದು ಶ್ರೀಗಂಧ ಮರಗಳ ಕೃಷಿ ಎಂದು ಹೇಳಿದರು.

ಶಾಸಕ ಸಿದ್ದು ಸವದಿ ಮಾತನಾಡಿದರು. ಕವಿತಾ ಮಿಶ್ರಾ ಮತ್ತು ರಮೇಶ ಬಲ್ಲುಟಗಿ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತ ಅಶೋಕಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಶಂಕರಗೌಡ ಪಾಟೀಲ, ಗಿರಿಶಗೌಡ ಪಾಟೀಲ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ,ಮಲ್ಲನ್ನಗೌಡ ಪಾಟೀಲ, ರಾಮಣ್ಣ ಸಂಕ್ರಟ್ಟಿ, ಈರಣ್ಣ ದಿನ್ನಿಮನಿ, ಬಸವರಾಜ ಹಿಟ್ಟಿನಮಠ, ಶಿವನಗೌಡ ಪಾಟೀಲ, ಜಿ.ಎಸ್. ಗೊಂಬಿ, ಬಾಲಚಂದ್ರ ರೂಗಿ, ಮಹಾಲಿಂಗಪ್ಪ ಕೌಜಲಗಿ, ಪ್ರಕಾಶ ಅರಳಿಕಟ್ಟಿ ಸೇರಿದಂತೆ ಅನೇಕರಿದ್ದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ,ವಂದಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ