ಕನ್ನಡಪ್ರಭ ವಾರ್ತೆ ಅರಸೀಕೆರೆ
ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ರೈತರೇ ಎಚ್ಚರದಿಂದಿರಿ, ರೋಗಬಾಧೆಯಿಂದ ತೆಂಗು ಮರಗಳು ಸಾವು ತಪ್ಪುತ್ತಿರುವ ಈ ಸಂದರ್ಭ, ನಾವು ಎಲ್ಲಾ ರೈತರು ಒಟ್ಟಾಗಿ ಧ್ವನಿ ಎತ್ತದೇ ಇದ್ದರೆ, ನಮ್ಮ ಪ್ರಮುಖ ವಾಣಿಜ್ಯ ಬೆಳೆ ಸಂಪೂರ್ಣ ನಾಶವಾಗುತ್ತದೆ. ಸರ್ಕಾರವು ತಕ್ಷಣವೇ ತಾಂತ್ರಿಕ ನೆರವು ಮತ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಹೆಚ್ಚು ತೆಂಗು ಬೆಳೆಗಾರರಿದ್ದಾರೆ. ಈಗಾಗಲೇ ಸುಮಾರು 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೋಗಗಳು ಪತ್ತೆಯಾಗಿವೆ. ಕಾಂಡ ಸೋರುವ ರೋಗ, ಬಿಳಿನೊಣ, ಕಪ್ಪು ಹುಳು, ಅಣಬೆ ಹಾಗೂ ಸುಳಿಕೊಳೆ ರೋಗಗಳು ಉಲ್ಬಣಗೊಂಡಿವೆ.ಕೇಂದ್ರ ಸರ್ಕಾರದ ನಿರ್ಲಕ್ಷ್ಯ:
ಅವಶ್ಯಕ ಔಷಧಿ ಸಿಂಪಡಣೆ, ವಿಜ್ಞಾನಿಗಳ ತಂಡದ ಸಮಿತಿಯ ರಚನೆ, ಹಾಗೂ ಕೀಟನಾಶಕ ಕಾರ್ಯಕ್ರಮಗಳ ಅನುಷ್ಠಾನ ಇವು ತಕ್ಷಣವೇ ಪ್ರಾರಂಭವಾಗಬೇಕು. ಅಂತಿಮವಾಗಿ, ನಾವು ಆಂದೋಲನಕ್ಕೂ ತಯಾರಾಗಬೇಕಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ತೋಟಗಾರಿಕಾ ಉಪನಿದೇಶಕ ಕೆ.ಎಸ್. ಯೋಗೀಶ್, ಸಹಾಯಕ ನಿರ್ದೇಶಕಿ ಸೀಮಾ, ವಿಜ್ಞಾನಿಗಳು ಡಾ. ಜಗದೀಶ್, ಡಾ. ನಾಗರಾಜ್ ಹಾಗೂ ರೈತ ಮುಖಂಡರು ಗಂಜಿಗೆರೆ ಚಂದ್ರಶೇಖರ್, ಕಾಟೀಕೆರೆ ಉಮೇಶ್, ಸಂಕೋಡನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.