ರೈತರು ಸ್ವಾವಲಂಬನೆಗೆ ಶ್ರಮಿಸಬೇಕು: ಶಾಸಕ ಬಸವರಾಜ

KannadaprabhaNewsNetwork |  
Published : Feb 13, 2025, 12:50 AM IST
ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಹಸುಗಳನ್ನು ವಿತರಣೆ ಮಾಡಿದ ಶಾಸಕ ಬಸವರಾಜ ವಿ.ಶಿವಗಂಗಾ | Kannada Prabha

ಸಾರಾಂಶ

ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಅವಲಂಬಿಸಬೇಕಾಗಿದೆ. ರಾಜ್ಯ ಸರ್ಕಾರ ರೈತರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿ, ಆರ್ಥಿಕ ಪ್ರಗತಿ ಹೊಂದಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

- ಮೆದಿಕೆರೆಯಲ್ಲಿ ಕೃಷಿ ವಿಕಾಸ್ ಯೋಜನೆಯಡಿ ಅರ್ಹರಿಗೆ ಹಸುಗಳ ವಿತರಣೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಅವಲಂಬಿಸಬೇಕಾಗಿದೆ. ರಾಜ್ಯ ಸರ್ಕಾರ ರೈತರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿ, ಆರ್ಥಿಕ ಪ್ರಗತಿ ಹೊಂದಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಬುಧುವಾರ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಲ್ಲಿ ಗ್ರಾಮದ 54 ಫಲಾನುಭವಿಗಳಿಗೆ ಹಸುಗಳ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಹುತೇಕ ರೈತರು ಒಂದೇ ಬೆಳೆಗೆ ಸೀಮಿತರಾಗಿದ್ದಾರೆ. ವಿವಿಧ ಪ್ರಕಾರಗಳ ಕೃಷಿ ಚಟುವಟಿಕೆ ನಡೆಸಿದಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯ. ರೈತರಿಗೆ ಪಶು ಆಧಾರಿತ ಕೃಷಿ ಉತ್ತೇಜಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಪ್ರತಿ ರೈತರಿಗೆ ಆಕಳುಗಳನ್ನು ಖರೀದಿಸಲು ₹30 ಸಾವಿರ ಸಹಾಯಧನ ನೀಡಲಾಗಿದೆ ಎಂದರು.

ಮೆದಿಕೆರೆ ಗ್ರಾಮಕ್ಕೆ ಹೈನುಗಾರಿಕೆಯ ಉತ್ತೇಜನಕ್ಕಾಗಿ ಒಟ್ಟು ₹16.20 ಲಕ್ಷ ಸಹಾಯಧನ ನೀಡಲಾಗಿದೆ. ಈ ಕಾರ್ಯಕ್ರಮದಿಂದ ಪ್ರತಿ ದಿನ 80 ರಿಂದ 120 ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಪ್ರತಿ ಲೀಟರ್‌ಗೆ ₹40 ನಂತೆ ಒಟ್ಟು ₹10 ಸಾವಿರ ಆದಾಯ ಹೆಚ್ಚಾಗುತ್ತದೆ. ರೈತರು ಮಿಶ್ರಕೃಷಿ ಕೈಗೊಳ್ಳಲು ಹೈನುಗಾರಿಕೆ ಅನುಕುಲವಾಗಿದೆ. ಇದರ ಸದುಪಯೊಗ ರೈತರು ಪಡೆಯಬೇಕು ಎಂದು ಹೇಳಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಾಲೂಕು ಕೃಷಿ ಅಧಿಕಾರಿ ಅರುಣ್ ಕುಮಾರ್, ಹೊನ್ನಾಳಿ ರೇವಣಸಿದ್ದನ ಗೌಡ, ಕಾಡಜ್ಜಿ ತಿಪ್ಪೇಸ್ವಾಮಿ, ಡಾ.ಅಶೋಕ್, ಆರ್‌.ಐ. ಶ್ರೀನಿವಾಸ್, ಮೇತಾಬ್ ಆಲಿ, ಏಕಾಂತ್, ಗ್ರಾಪಂ ಸದಸ್ಯ ಮಂಜಪ್ಪ, ರಂಗಸ್ವಾಮಿ, ಡಿ.ವೈ.ರಾಜಣ್ಣ, ಪಿ.ಎಸ್. ಕುಮಾರಣ್ಣ, ಬೀರಲಿಂಗಪ್ಪ, ಟಿ.ಕೆ. ತಿಪ್ಪೇಶ್, ಗ್ರಾಮಸ್ಥರು ಹಾಜರಿದ್ದರು.

- - - -12ಕೆಸಿಎನ್‌ಜಿ7.ಜೆಪಿಜಿ:

ಚನ್ನಗಿರಿ ತಾಲೂಕಿನ ಮೆದಿಕೆರೆಯಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕ ಬಸವರಾಜ ಶಿವಗಂಗಾ ಹಸುಗಳನ್ನು ವಿತರಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ