ರೈತರ ಹೋರಾಟಗಳು ಭ್ರಷ್ಟರನ್ನು ಎಚ್ಚರಿಸುವಂತಾಗಲಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Oct 20, 2024, 01:46 AM IST
19ಕೆಎಂಎನ್ ಡಿ27 | Kannada Prabha

ಸಾರಾಂಶ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೊಲೀಸ್ ಇಲಾಖೆಯ ಕೃಷ್ಣಪ್ಪ, ರೇಖಾ, ಸೆಸ್ಕಾಂ ಇಲಾಖೆಯ ಸುಮಿತ್ರ, ಆರೋಗ್ಯ ಇಲಾಖೆ ಮಹದೇವಮ್ಮ, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ, ನಾಡಕಚೇರಿ ಆನಂದ್, ಆಶಾ ಕಾರ್ಯಕರ್ತೆಯರಾದ ಬಿ.ಎಸ್.ಪವಿತ್ರ, ಎನ್.ಮಹದೇವಮ್ಮ, ಮಮತ, ಸೇರಿದಂತೆ ಹಲವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಭಾರತೀನಗರ

ರೈತರು ಮಾಡುವ ಹೋರಾಟಗಳು ಭ್ರಷ್ಟರನ್ನು ಎಚ್ಚರಿಸುವಂತಾಗಬೇಕು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದ ಸಪ್ತಗಿರಿ ಪಾರ್ಟಿ ಹಾಲ್‌ನಲ್ಲಿ ಶರಣರ ಸಂಘಟನಾ ವೇದಿಕೆ ಆಯೋಜಿಸಿದ್ದ ರೈತರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಒಗ್ಗಟ್ಟಿನಿಂದ ನಾವು ಮಾಡುವ ಪ್ರತಿಯೊಂದು ಹೋರಾಟದಿಂದ ಸಾರ್ವಜನಿಕರಿಗೆ ಒಳಿತು ಉಂಟಾಗಬೇಕು. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಆಗ ಮಾತ್ರ ರೈತ ಸಂಘ, ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ. ರೈತರು, ರೈತ ಸಂಘಕ್ಕೆ ದುಡಿದ ದಿ.ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್, ಕೋಣಸಾಲೆ ನರಸರಾಜು ಅವರ ಹೋರಾಟಗಳು, ಆದರ್ಶಗಳನ್ನು ನಾವು ಸ್ಫೂರ್ತಿಯಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಸರ್ಕಾರ, ಭ್ರಷ್ಟರು ಹೆದರುವುದು ರೈತ ಸಂಘಟನೆಗೆ ಮಾತ್ರ. ರೈತ ಸಂಘಟನೆ ಬಲಿಷ್ಠವಾಗಬೇಕು. ಒಡಕು ಇರಬಾರದು. ಆಗ ಮಾತ್ರ ಶಕ್ತಿ ಪ್ರದರ್ಶಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶರಣ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ವಿಮ್ಸ್ ವೈದ್ಯಾಧಿಕಾರಿ ಡಾ.ಜೆ.ಟಿ.ಸ್ವರೂಪ್ ಅವರಿಗೆ ಜನಮೆಚ್ಚಿದ ಪ್ರಶಸ್ತಿ ನೀಡಲಾಯಿತು. ರೈತ ಮುಖಂಡರಾದ ಲತಾಶಂಕರ್, ಅಣ್ಣೂರು ಮಹೇಂದ್ರ, ಕುರುಬೂರು ಕುಮಾರ್, ಬೊಪ್ಪಸಮುದ್ರದ ಮಲ್ಲೇಶ್, ಕೆ.ಎಂ.ಪುಟ್ಟಸ್ವಾಮಿ, ನೆಲ್ಲೂರು ಜಯರಾಮು, ದೇವಿಪುರದ ಬಸವರಾಜು, ಶಂಭೂನಹಳ್ಳಿ ಸುರೇಶ್, ಯರಗನಹಳ್ಳಿ ರಾಮಕೃಷ್ಣ, ಕೆ.ಪಿ.ದೊಡ್ಡಿ ರಾಮಲಿಂಗೇಗೌಡ, ಸಿದ್ದೇಗೌಡ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೊಲೀಸ್ ಇಲಾಖೆಯ ಕೃಷ್ಣಪ್ಪ, ರೇಖಾ, ಸೆಸ್ಕಾಂ ಇಲಾಖೆಯ ಸುಮಿತ್ರ, ಆರೋಗ್ಯ ಇಲಾಖೆ ಮಹದೇವಮ್ಮ, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ, ನಾಡಕಚೇರಿ ಆನಂದ್, ಆಶಾ ಕಾರ್ಯಕರ್ತೆಯರಾದ ಬಿ.ಎಸ್.ಪವಿತ್ರ, ಎನ್.ಮಹದೇವಮ್ಮ, ಮಮತ, ಸೇರಿದಂತೆ ಹಲವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ರೈತಪರ ಹೋರಾಟಗಾರ ಹೆಬ್ಬಣಿ ಬಬ್ರುವಾಹನ, ಸಮಾಜ ಸೇವಕ ಹಾಗಲಹಳ್ಳಿ ರಘು, ಬ್ಯಾಂಕ್ ಆಫ್ ಬರೋಡ ಹಿರಿಯ ವ್ಯವಸ್ಥಾಪಕ ಮಹದೇಶ್, ವೀರಶೈವ ಅಭಿವೃದ್ಧಿ ಸಂಘದ ಅಧ್ಯಕ್ಷ ಹೊಂಡಾ ಮಹೇಶ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್, ಪತ್ರಕರ್ತ ಅಣ್ಣೂರು ಸತೀಶ್, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತ ವೈ.ಬಿ.ಶ್ರೀ, ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾದ ಆರ್.ಸಿದ್ದಪ್ಪ, ಸಿದ್ದೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌