ಡೇರಿ ಅಭಿವೃದ್ಧಿಗೆ ಕಾರ್ಯದರ್ಶಿಗಳು ಶ್ರಮಿಸಬೇಕು

KannadaprabhaNewsNetwork |  
Published : Oct 20, 2024, 01:46 AM IST
19ಕೆಬಿಪಿಟಿ.1.ಬಂಗಾರಪೇಟೆ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ನಡೆದ ಹಾಲು ಸಂಘದ ಕಾರ್ಯದರ್ಶಿಗಳ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿರುವ ಸಹಕಾರ ಒಕ್ಕೂಟದ ಅಧ್ಯಕ್ಷ ವೆಂಕಟೇಶ್ | Kannada Prabha

ಸಾರಾಂಶ

ಹೈನೋದ್ಯಮವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಂಘ ಕಾರ್ಯದರ್ಶಿಗಳಿಗೆ ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿವಳಿಗೆ ಮೂಡಿಸಬೇಕಾಗಿರುವುದರಿಂದ ಇಂದು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಘದ ಅಧ್ಯಕ್ಷರುಗಳಿಗೂ ತರಬೇತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಜಯಸಿಂಹಕೃಷ್ಣಪ್ಪನವರನ್ನು ಮತ್ತೆ ಅದೇ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಅವರ ತಂದೆ ಹೈನೋದ್ಯಮ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯ ಋಣ ತೀರಿಸಬೇಕೆಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ವೆಂಕಟೇಶ್ ಹೇಳಿದರು.ಪಟ್ಟಣದ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ಆರು ಬಾರಿ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ ಜಯಸಿಂಹಕೃಷ್ಣಪ್ಪರನ್ನು ಮತ್ತೆ ಚುನಾಯಿಸಬೇಕು ಎಂದು ಕೋರಿದರು.

ಋಣ ತೀರಿಸುವ ಕೆಲಸ ಮಾಡಿ

ಇಂತಹ ವ್ಯಕ್ತಿಯನ್ನು ಕಾರ್ಯದರ್ಶಿಗಳು ಕೈಬಿಡದೆ ಅವರು ಇರುವತನಕ ಅವರನ್ನೇ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡಬೇಕೆ ವಿನಹ ಅವರ ಸ್ಥಾನಕ್ಕೆ ಯಾರೂ ಆಸೆ ಪಡಬಾರದು. ಜಯಸಿಂಹ ರವರ ಸಾಧನೆ ಗುರುತಿಸಿ ಸಹಕಾರ ರತ್ನ ಪ್ರಶಸ್ತಿಗೂ ಶಿಫಾರಸು ಮಾಡಲಾಗಿದೆ. ಸಂಘದ ಕಾರ್ಯದರ್ಶಿಗಳು ಯಾವುದೇ ರಾಜಕೀಯ ಮಾಡದೆ ಸಂಘಗಳ ಬೆಳವಣಿಗೆಗೆ ಶ್ರಮಿಸಬೇಕೆಂದು ಹೇಳಿದರು.

ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಶಂಕರರೆಡ್ಡಿ ಮಾತನಾಡಿ, ಹೈನೋದ್ಯಮ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಎಂತಹ ಬರಗಾಲದಲ್ಲಿಯೂ ಹೈನೋದ್ಯಮ ರೈತರನ್ನು ಕೈಬಿಡದೆ ಮುನ್ನೆಡೆಸುತ್ತಿದೆ ಎಂದರು.

ಕಾರ್ಯದರ್ಶಿಗಳಿಗೆ ತರಬೇತಿ

ಈ ಉದ್ಯಮವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಂಘ ಕಾರ್ಯದರ್ಶಿಗಳಿಗೆ ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿವಳಿಗೆ ಮೂಡಿಸಬೇಕಾಗಿರುವುದರಿಂದ ಇಂದು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಘದ ಅಧ್ಯಕ್ಷರುಗಳಿಗೂ ತರಬೇತಿ ನೀಡಲಾಗುವುದು ಎಂದರು. ಈ ವೇಳೆ ತರಬೇತಿ ಸಂಪನ್ಮೂಲ ವ್ಯಕ್ತಿಯಾದ ನಾಗರಾಜಯ್ಯ,ವೆಂಕಟಸ್ವಾಮಿ, ಸಹಕಾರ ಒಕ್ಕೂಟ ನಿರ್ದೇಶಕರಾದ ಕೃಷ್ಣಾರೆಡ್ಡಿ,ಪಾಪಣ್ಣ,ಸಹಕಾ ಅಭಿವೃದ್ದಿ ಅಧಿಕಾರಿ ಬಾಲಕೃಷ್ಣ,ರವಿ ಮತ್ತಿತರರು ಇದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ