ಮಳೆ ಕೊರತೆಯ ಮಧ್ಯೆ ಹೂವಿನಹಡಗಲಿಯಲ್ಲಿ 6,687 ಹೆಕ್ಟೇರ್ ಬಿತ್ತನೆ
ಮುಂಗಾರು ಮಳೆ ಕೈ ಕೊಟ್ಟರೂ ಹಿಂಗಾರು ಮಳೆ ರೈತರ ಹಿಡಿಯಲಿಲ್ಲ, ಶೇ. 87ರಷ್ಟು ಹಿಂಗಾರು ಮಳೆ ಕೊರತೆ ಮಧ್ಯೆಯೂ 6,687 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ.
ಬರಕ್ಕೆ ಕಂಗೆಟ್ಟ ಹೋಗಿದ್ದ ರೈತರು ಅತಿ ಕಡಿಮೆ ನೀರಿನಲ್ಲಿ ಬೆಳೆಯುವ ರಾಗಿ ಬಿತ್ತನೆಗೆ ಮುಂದಾಗಿದ್ದಾನೆ. ಜತೆಗೆ ರಾಗಿಗೆ ಕೇಂದ್ರದಿಂದ ₹5,205 ಬೆಂಬಲ ಬೆಲೆ ಇರುವ ಕಾರಣ ಹೆಚ್ಚು ರೈತರು ರಾಗಿಯತ್ತ ಮುಖ ಮಾಡಿದ್ದಾರೆ.ತಾಲೂಕಿನಲ್ಲಿ ಹಿಂಗಾರಿನಲ್ಲಿ 19,720 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಅಕ್ಟೋಬರ್-1ರಿಂದ ಈ ವರೆಗೂ 111 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 15 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ. 87ರಷ್ಟು ಮಳೆ ಕೊರತೆ ಉಂಟಾಗಿದೆ.
ಈಗಾಗಲೇ ತಾಲೂಕಿನ ಇಟ್ಟಿಗಿ, ಹಿರೇಹಡಗಲಿ ಮತ್ತು ಹೂವಿನಹಡಗಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಕರೆಕಡ್ಲಿ ಬೀಜ 100 ಕ್ವಿಂಟಲ್‌ನಷ್ಟು ಸಂಗ್ರಹವಿದೆ. ಜತೆಗೆ ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ.
ಕೇಂದ್ರದ ಸರ್ಕಾರ 2026-27ನೇ ಸಾಲಿನ ಮುಂಗಾರು- ಹಿಂಗಾರು ಹಂಗಾಮಿಗಾಗಿ, ಎಫ್‌ಎಕ್ಯೂ ಗುಣಮಟ್ಟದ ಕೃಷಿ ಉತ್ಪನ್ನಗಳಿಗೆ, ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಇದರಲ್ಲಿ ರಾಗಿ ಬೆಳೆಗೆ ₹5,205 ಬೆಂಬಲ ಬೆಲೆ ನಿಗದಿಯಾಗಿದೆ. ಇದರಿಂದ ಸರಿಸುಮಾರು 3 ಸಾವಿರ ಹೆಕ್ಟೇರ್‌ನಷ್ಟು ಹಿಂಗಾರಿನಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಹೂವಿನಹಡಗಲಿ ತಾಲೂಕಿನಲ್ಲಿ ಶೇ. 87ರಷ್ಟು ಹಿಂಗಾರು ಮಳೆ ಕೊರತೆಯಾಗಿದೆ. 19,720 ಹೆಕ್ಟೇರ್ ಬಿತ್ತನೆ ಗುರಿ ಇದೆ. ಅದರಲ್ಲಿ 6687 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಉಳಿದಂತೆ 13,033 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ, ಹೆಚ್ಚು ರೈತರು ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ರಾಗಿ ಬೆಳೆಗೆ ₹5205 ಬೆಂಬಲ ಬೆಲೆ ನಿಗದಿ ಮಾಡಿದ್ದಾರೆ. ಬರ ಪರಿಸ್ಥಿತಿಯಲ್ಲಿ ರೈತರ ಹಿತ ಕಾಪಾಡಲು ಇನ್ನಷ್ಟು ಬೆಂಬಲ ಬೆಲೆ ಹೆಚ್ಚಿಸಬೇಕು.