ಬಿಪಿಎಲ್ ಕಾರ್ಡ್ ಸಮಸ್ಯೆ ನಿವಾರಿಸಲು ರೈತ ಸಂಘ ಒತ್ತಾಯ

KannadaprabhaNewsNetwork |  
Published : Mar 13, 2026, 01:15 AM IST
೧೨ಕೆಎಲ್‌ಆರ್-೭ಅರ್ನಹಗೊಳಿಸಿರುವ  ಬಡವರ ಬಿ.ಪಿಎಲ್ ಕಾರ್ಡ್ ಸಮಸ್ಯೆ ಸರಿಪಡಿಸಬೇಕು-ಪಡಿತರ ಅಕ್ಕಿ ಕಾಳ ಸಂತೆ ಮಾರಾಟ ತಡೆಗೆ ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಆಹಾರ ಉಪನಿರ್ದೇಶಕ ಮಲ್ಲಿಕಾರ್ಜುನರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಆಹಾರ ಇಲಾಖೆ ಅಧಿಕಾರಿಗಳೇ ಮನೆ ಮನೆಗೆ ತಲುಪಿ ವರದಿ ಪಡೆದುಕೊಂಡು ನೀಡಿರುವ ಬಿಪಿಎಲ್ ಕಾರ್ಡುಗಳನ್ನು ನೂರೊಂದು ನೆಪ ಹೇಳಿ ಅರ್ನಹಗೊಳಿಸುತ್ತಿರುವುದು ಯಾವ ನ್ಯಾಯ. ಬಡವರ ಅನ್ನ ಕಿತ್ತುಕೊಂಡು ಬೀದಿಗೆ ತಳ್ಳುತ್ತಿರುವುದು.

ಕನ್ನಡಪ್ರಭ ವಾರ್ತೆ ಕೋಲಾರಅರ್ನಹಗೊಳಿಸಿರುವ ಬಡವರ ಬಿಪಿಎಲ್ ಕಾರ್ಡ್ ಸಮಸ್ಯೆ ಸರಿಪಡಿಸಬೇಕು ಮತ್ತು ಪಡಿತರ ಅಕ್ಕಿ ಕಾಳ ಸಂತೆ ಮಾರಾಟ ತಡೆಗೆ ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಆಹಾರ ಉಪನಿರ್ದೇಶಕ ಮಲ್ಲಿಕಾರ್ಜುನರಿಗೆ ಮನವಿ ನೀಡಿ ಒತ್ತಾಯಿಸಿದರು.ಲಕ್ಷಾಂತರ ರೈತ, ಕೂಲಿ ಕಾರ್ಮಿಕರ ಪಾಲಿಗೆ ಆಹಾರ ಇಲಾಖೆ ಬಡವರ ವಿರೋಧಿ ಇಲಾಖೆಯಾಗಿ ಮಾರ್ಪಟಿದ್ದೆ. ಕೇಂದ್ರ-ರಾಜ್ಯ ಸರ್ಕಾರದಿಂದ ಬರುವ ಉಚಿತ ಪಡಿತರ ಅಕ್ಕಿ ಸೌಲಭ್ಯಗಳನ್ನು ಪಡೆಯಲು ಹಿಂದೆ ಆಹಾರ ಇಲಾಖೆ ಅಧಿಕಾರಿಗಳೇ ಮನೆ ಮನೆಗೆ ತಲುಪಿ ವರದಿ ಪಡೆದುಕೊಂಡು ನೀಡಿರುವ ಬಿಪಿಎಲ್ ಕಾರ್ಡುಗಳನ್ನು ನೂರೊಂದು ನೆಪ ಹೇಳಿ ಅರ್ನಹಗೊಳಿಸುತ್ತಿರುವುದು ಯಾವ ನ್ಯಾಯ. ಬಡವರ ಅನ್ನ ಕಿತ್ತುಕೊಂಡು ಬೀದಿಗೆ ತಳ್ಳುತ್ತಿರುವುದು ಆಹಾರ ಸಚಿವರಿಗೆ ಅಧಿಕಾರಿಗಳಿಗೆ ನ್ಯಾಯವೇ ಎಂದು ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಪ್ರಶ್ನೆ ಮಾಡಿದರು. ಅಹಾರ ಇಲಾಖೆಯ ಪ್ರಕಾರ ಬಡವರು ಒಳ್ಳೆ ಬಟ್ಟೆ ಹಾಕಬಾರದು ಮನೆ ಕಟ್ಟಬಾರದು ಓಡಾಡಲು ಮನೆಯಲ್ಲಿ ದ್ವಿಚಕ್ರ ವಾಹನ ಇರಬಾರದು ಅಂತಹವರನ್ನು ಗುರ್ತಿಸಿ ಅಸಂಬದ್ಧ ನಿಯಮ ಮುಂದಿಟ್ಟಕೊಂಡು ನೈಜ ಬಡವರಿಗೆ ಬಿ.ಪಿ.ಎಲ್ ಚೀಟಿ ಅನರ್ಹಗೊಳಿಸುತ್ತಿರುವುದು ನ್ಯಾಯವೇ? ಬಡವರ ಹೆಸರಿನಲ್ಲಿ ಶ್ರೀಮಂತರು ಸರ್ಕಾರದ ಅಧಿಕಾರಿಗಳು ಪಡೆದಿರುವ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಅದನ್ನು ಬಿಟ್ಟು ಬಡವರ ಮೇಲೆ ತಮ್ಮ ಪ್ರತಾಪ ತೋರಿಸಿ ಅನ್ನ ಕಿತ್ತುಕೊಂಡು ಬೀದಿಗೆ ತಳ್ಳುವ ನಿರ್ಧಾರ ಕೈಬಿಟ್ಟು ಬಡವರ ಬದಕನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡಿ ಕಟ್ಟಕಡೆಯ ಬಡವರು ಹೊಟ್ಟೆ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಬಡವರಿಗೆ ವಿತರಣೆಯಾಗುತ್ತಿರುವ ಉಚಿತ ಬಡವರ ಅಕ್ಕಿ ಬಡವರ ಹೆಸರಿನಲ್ಲಿ ಪ್ರತಿಷ್ಠಾತಿ ರೈಸ್ ಮಿಲ್ಲುಗಳಿಗೆ ಮಾರಾಟ ಮಾಡುವ ಮುಖಾಂತರ ಬಡವರನ್ನು ಕೋಲಾರ ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು, ಜಿಲ್ಲೆಗಳ ಜೊತೆಗೆ ಆಂಧ್ರ ತಮಿಳುನಾಡು ರಾಜ್ಯಗಳಿಂದ ನಿರಂತರವಾಗಿ ಪಡಿತರ ಅಕ್ಕಿ ಬಂಗಾರಪೇಟೆ ರೈಸ್ ಮಿಲ್‌ಗಳಿಗೆ ಸಾಗಣಿಕೆ ಆಗುತ್ತಿದ್ದರು. ಇದರ ಮಾಹಿತಿ ಆಯಾ ಅಹಾರ ಇಲಾಖೆ ಅಧಿಕಾರಿಗಳಿಗೆ ಇದ್ದರು. ದಂಧೆಕೋರರು ನೀಡುವ ಲಂಚದ ಹಣಕ್ಕೆ ಬಡವರ ಅಕ್ಕಿಯನ್ನು ಮಾರಾಟಕ್ಕೆ ಕುಮ್ಮಕು ನೀಡುತ್ತಿದ್ದಾರೆಯೇ? ಎಂದು ಅಕ್ರೋಶ ವ್ಯಕ್ತಪಡಿಸಿದರು. ಮೂರು ದಿನದೊಳಗೆ ಅರ್ನಹಗೊಳಿಸಿರುವ ಬಡವರ ಬಿಪಿಎಲ್ ಕಾರ್ಡ್ ಸಮಸ್ಯೆ ಸರಿಪಡಿಸಬೇಕು. ಬಡವರ ಪಡಿತರ ಅಕ್ಕಿಯನ್ನು ಕಾಳು ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಗಂಭಿರವಾಗಿ ಪರಿಗಣಿಸಿ ಪಡಿತರ ಅಕ್ಕಿ ಖರೀದಿ ಮಾಡುವ ರೈಸ್ ಮಿಲ್ ಮಾಲೀಕರು ಮತ್ತು ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ಮಾಡಬೇಕು. ಇಲ್ಲಾವಾದರೆ ಜಿಲ್ಲಾಧಿಕಾರಿ ನಿವಾಸದ ಮುಂದೆ ಆಹಾರ ಇಲಾಖೆಯ ಬಡವಿರೋಧಿ ನೀತಿ ಖಂಡಿಸಿ ಅಹೋರ್ರಾತಿ ಹೋರಾಟ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುವ ಎಚ್ಚರಿಸಿದರು.ಮನವಿ ಸ್ವೀಕರಿಸ ಮಾತನಾಡಿದ ಅಹಾರ ಉಪನಿರ್ದೇಶಕರು, ಸಮಸ್ಯೆ ಗಂಭಿರವಾಗಿ ಪರಿಗಣಿಸಿ ಪಡಿತರ ಅಕ್ಕಿ ಕಾಳಸಂತೆ ಮಾರಾಟ ದಂದೆ ಕಡಿವಾಣ ಹಾಕುವ ಭರವಸೆ ನೀಡಿದರು. ಮನವಿ ನೀಡುವಾಗ ವಕ್ಕಲೇರಿ ಹನುಮಯ್ಯ ಅಂಜಿನಪ್ಪ, ತಿಮ್ಮಣ್ಣ, ರಾಜು, ಗಿರೀಶ್, ಜನಾರ್ದನ, ವಿಶ್ವಕುಮಾರ, ರಾಜಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳು: ಜಿ.ಮುನಿರೆಡ್ಡಿ
ಕರ್ನಾಟಕದ ರಫ್ತುಗಳ ಭವಿಷ್ಯ ಅತ್ಯಂತ ಪ್ರಕಾಶಮಾನ