ಬೆಸ್ಕಾಂ ವಿರುದ್ಧ ರೈತ ಸಂಘ ಪ್ರತಿಭಟನೆ

KannadaprabhaNewsNetwork |  
Published : Apr 30, 2026, 01:15 AM IST
  ಫೋಟೋ ಇದೆ : 29 ಕೆಜಿಎಲ್ 1 : ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ | Kannada Prabha

ಸಾರಾಂಶ

ಅಸಮರ್ಪಕ ವಿದ್ಯುತ್‌ ಪೂರೈಕೆಗೆ ಆಕ್ರೋಶ ವ್ಯಕ್ತಪಡಿಸಿ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ಅಸಮರ್ಪಕ ವಿದ್ಯುತ್‌ ಪೂರೈಕೆಗೆ ಆಕ್ರೋಶ ವ್ಯಕ್ತಪಡಿಸಿ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ, ಸರ್ಕಾರ ರೈತರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂಬ ಮನೋಭಾವದಲ್ಲಿ ಇದೆ. ಆದರೆ ಅದು ಸುಳ್ಳು ರೈತರಿಗೆ ಬೇಕಾದ ಸವಲತ್ತುಗಳನ್ನು ಪಡೆಯಲು ಹಾಗೂ ವಿದ್ಯುತ್ ಪರಿವರ್ತಕ ಸೇರಿದಂತೆ ವಿವಿಧ ಉಪಕರಣಗಳ ಖರೀದಿಸಿ ಮಾಡುವ ಕೆಲಸ ಮತ್ತು ಸರ್ಕಾರಕ್ಕೆ ನೀಡುವ ಠೇವಣಿ ಹಣ ಇವುಗಳೆಲ್ಲ ಸೇರಿದರೆ ರೈತರಿಗೆ 24ಗಂಟೆ ಉಚಿತ ವಿದ್ಯುತ್ ನೀಡಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ತಿಳಿಸಿದರು. ರೈತರಿಗೆ ನೀಡಬೇಕಾದ ಮೂಲಭೂತ ಸೌಕರ್ಯ ನೀರು ವಿದ್ಯುತ್ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುವ ಸರ್ಕಾರ ವಿಫಲಗೊಂಡಿದೆ ಆದರೆ ಕೈಗಾರಿಕೆಗಳಿಗೆ ಮಾತ್ರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದರು. ಸರ್ಕಾರ ರೈತನನ್ನು ನಿರಂತರವಾಗಿ ಧೋರಣೆ ಮಾಡುತ್ತಾ ಶೋಷಿತನಾಗಿ ನಡೆಸಿಕೊಂಡು ಬರುತ್ತಿದೆ. ಆತ ಬೆಳೆಯುವ ಯಾವುದೇ ಉತ್ಪನ್ನಗಳಿಗೂ ಉತ್ತಮ ಮಾರುಕಟ್ಟೆ ಇತರ ಸೌಲಭ್ಯ ಪ್ರೋತ್ಸಾಹ ಧನ ಯಾವುದನ್ನು ನೀಡುತ್ತಿಲ್ಲ ಕೇವಲ ಅವನ ಬೆಳೆಯುವ ಬೆಳೆಗೆ ಮನಬಂದಂತೆ ತೆರಿಗೆ ನೀಡಿ ಆತನಿಂದ ಹಣ ಮಾಡುವ ಕೆಲಸ ಮಾಡುತ್ತಿದೆ ಎಂದರು. ಕಳಪೆ ವಿದ್ಯುತ್ ನೀಡುವುದರ ಫಲವಾಗಿ ಪ್ರತಿದಿನ ಸಾವಿರಾರು ರೈತರ ಮೋಟಾರ್ ಗಳು ದುರಸ್ತಿ ಆಗುತ್ತಿವೆ ಇದಕ್ಕೆ ಯಾರು ಜವಾಬ್ದಾರಿ ಎಂದರು. ಅಡಿಕೆ ತೋಟಗಳಲ್ಲಿ ಟ್ಯಾಂಕರ್ ಉಪಯೋಗಿಸಿ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಸರಿಯಾದ ವಿದ್ಯುತ್ ನೀಡುತ್ತಿಲ್ಲ ಇದಕ್ಕೆ ಇಲಾಖೆ ನೇರವಾಗಿ ಹೊಣೆಗಾರಿಕೆ ಎಂದರು. ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ನೀಡುವಂತಹ ಕಾಳಜಿ ಉಳ್ಳ ಸರ್ಕಾರ ರೈತರ ಮೇಲೆ ಉದಾಸಿನತೆ ತೋರುತ್ತಿದೆ ಇದು ತುಂಬಾ ದಿನ ನಡೆಯುವುದಿಲ್ಲ ರೈತನ ಬದುಕಿನ ಜೊತೆ ಆಟ ಆಡುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರಿಗೆ ನೀರು, ಜಾನುವಾರಿಗೆ ಮೇವಿನ ಕೊರತೆಯಾದಂತೆ ಕ್ರಮವಹಿಸಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ಸೂಚನೆ
ಅಭಿವೃದ್ಧಿ ಆಗಿಲ್ಲವೆಂದು ದಿನೇಶ ಶೆಟ್ಟಿ ಕೆಪಿಸಿಸಿಗೆ ಮನದಟ್ಟು