ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕು ಕಚೇರಿ ಮುಂದೆ ರೈತರು 20 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಹೋರಾಟಕ್ಕೆ ಸ್ಪಂದಿಸದ ಕಾರಣ ಹಸುಗಳನ್ನು ತಂದು ಪ್ರತಿಭಟಿಸಲು ಮುಂದಾದ ರೈತರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಶಾಸಕರ ವಿರುದ್ಧ ಘೋಷಣೆ
ಇನ್ನು ತಾಲೂಕು ಕಚೇರಿಗೆ ಹಸುಗಳನ್ನು ಬಿಡದ ಕಾರಣ ಸುಮಾರು 30ಕ್ಕೂ ಹೆಚ್ಚು ನಿಮಿಷಗಳ ಕಾಲ ಬೆಂಗಳೂರು ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆದು ರೈತರು ಪ್ರತಿಭಟನೆಗೆ ಕುಳಿತು ಶಾಸಕರ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ, ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ಶಾಸಕರು ಪ್ರತಿಯೊಂದು ವಿಷಯದಲ್ಲೂ ರೈತರನ್ನು ಕಡೆಗಣಿಸಸುತ್ತಿದ್ದಾರೆ, ಒಂದು ಸುದೀರ್ಘವಾದ ಹೋರಾಟದಲ್ಲಿ ರೈತರು ಭಾಗಿಯಾಗಿ ಇವತ್ತಿನ ದಿನ ಉಪವಾಸ ಕೂರುವ ಪರಿಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಟೀಕಿಸಿದರು. ಈ ನಮ್ಮ ಕ್ಷೇತ್ರದಲ್ಲಿ ಹಲವಾರು ಹಿರಿಯ ಮುಖಂಡರು ಇದ್ದಾರೆ ಮೂರ್ನಾಲ್ಕು ದಿನಗಳ ಒಳಗೆ ಅಧಿಕಾರಿಗಳು ಸ್ಥಳೀಯ ಶಾಸಕರು ಸಭೆ ನಡೆಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅರಬೆತ್ತಲೆ ಸೇವೆ ಮಾಡಲಿಕ್ಕೆ ತಯಾರಿದ್ದೇವೆ, ನಾವು ಪ್ರಾಣ ತ್ಯಾಗ ಮಾಡುವುದಕ್ಕೆ ತಯಾರಿದ್ದೇವೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿಕ್ಕೆ ನಾವು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ ಈ ದಿನ ನಾವು ರಸ್ತೆಯಲ್ಲಿ ಕೂತಿದ್ದೇವೆ, ಈ ಒಂದು ಹೋರಾಟ ಹೇಗೆ ಮುಂದುವರಿಯುತ್ತದೆ ಜಿಲ್ಲಾಧಿಕಾರಿಗಳು ಗೌರಿಬಿದನೂರಿನಲ್ಲಿರುವಂತಹ ಸರ್ವ ಪಕ್ಷಗಳು ಸಂಘಟನೆಗಳ ಮುಖಂಡರನ್ನ ಕರೆದು ಸಭೆ ಮಾಡಿ ಒಂದು ಅಂತಿಮ ನಿರ್ಧಾರ ತೆಗೆದುಕೊಂಡ ಮೇಲೆ ಈ ಒಂದು ಟೆಂಟನ್ನು ಖಾಲಿ ಮಾಡುತ್ತೇವೆ.ಪ್ರತಿಭಟನೆಯಲ್ಲಿ ರೈತ ಮುಖಂಡ ಹರ್ಷವರ್ಧನ್ ರೆಡ್ಡಿ, ಮಧು ಸೂರ್ಯನಾರಾಯಣ ರೆಡ್ಡಿ, ಕೋಡಿರ್ಲಪ್ಪ, ಎ ಕೆ ಆರ್ ಎಸ್ ರವಿಚಂದ್ರನ್ ರೆಡ್ಡಿ, ಮುಂತಾದವರು ಇದ್ದರು.