ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ನೂತನ ಶಾಖಾ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಂಘದಲ್ಲಿ ನಡೆಯುವ ವ್ಯವಹಾರ ಅತ್ಯಂತ ಸುರಕ್ಷತೆ ಹಾಗೂ ಪಾರದರ್ಶಕತೆಯಿಂದ ಕೂಡಿರುತ್ತದೆ. ರೈತರಿಂದ ರೈತರಿಗಾಗಿ ಸ್ಥಾಪನೆಗೊಂಡಿರುವ ರ್ಯಾಂಮ್ಕೋಸ್ ಸಂಘದಲ್ಲಿ ರೈತರು ಹೆಚ್ಚು ಒಡನಾಟ ಇಟ್ಟುಕೊಂಡು ಸಂಘದ ಏಳಿಗೆಗೆ ಸಹಕಾರ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಂಗಳೂರಿನ ದಿ ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ ಕುಮಾರ ಕೋಡ್ಗಿ, ಬಿ.ಕೆ.ಮೋಹನ್ ಮಾತನಾಡಿದರು.
ತಹಸೀಲ್ದಾರ್ ಕೆ.ಆರ್.ನಾಗರಾಜ್, ಕೆನರಾ ಬ್ಯಾಂಕ ವಿಭಾಗೀಯ ಕಚೇರಿಯ ಡಿಜಿಎಂ ಆರ್.ದೇವರಾಜ್, ರ್ಯಾಂಮ್ಕೋಸ್ ಉಪಾಧ್ಯಕ್ಷ ಎಸ್.ಮಹೇಶ್ವರಪ್ಪ, ನಿರ್ದೇಶಕರಾದ ಸಿ.ಹನುಮಂತು, ಎಚ್.ಟಿ.ಉಮೇಶ್, ಮಹೇಶ್, ಸುಲೋಚನಾ, ಜಿ.ಇ.ಲೋಕೇಶಪ್ಪ, ಬಿ.ಆರ್.ದಶರಥಗಿರಿ, ಎಂ.ಎಸ್.ಬಸವರಾಜ್, ಎಚ್.ಎಸ್.ಸಂಜೀವಕುಮಾರ್, ಲಲಿತಮ್ಮ, ಗಂಗನಗೌಡ, ಸಿ.ಮಲ್ಲೇಶಪ್ಪ, ಆಡಳಿತ ಮಂಡಳಿ ಮಾಜಿ ಸದಸ್ಯರು ಹಾಗೂ ನೂರಾರು ರೈತರು ಹಾಜರಿದ್ದರು.
ಪ್ರಕೃತಿ ಪ್ರಾರ್ಥಿಸಿ, ರ್ಯಾಂಮ್ಕೊಸ್ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕರ ಶಂಕರಮೂರ್ತಿ ನಿರೂಪಿಸಿ ವಂದಿಸಿದರು.