ಶೌಚಾಲಯ ನಿರ್ಮಿಸಲು ಫ್ಯಾಶನ್‌ ಶೋ ಆಯೋಜನೆ

KannadaprabhaNewsNetwork |  
Published : Feb 22, 2026, 03:00 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಿಳೆಯರ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಆರ್ಥಿಕ ಕ್ರೋಢಿಕರಣಕ್ಕಾಗಿ ನಗರದ ವಿವಾಹಿತ‌ ಮಹಿಳೆಯರಿಗಾಗಿ ಮಿಸೆಸ್ ಬೆಳಗಾವಿ ಡಿವಾ ಶೀರ್ಷಿಕೆಯಡಿ ಮಾ.21ರಂದು ಸಂಜೆ 4 ಗಂಟೆಗೆ ಇಲ್ಲಿನ ತಿಲಕವಾಡಿಯ ಮಿಲೇನಿಯಮಂ ಗಾರ್ಡನ್ ನಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ಬೆಳಗಾವಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಕಿತ್ತೂರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಿಳೆಯರ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಆರ್ಥಿಕ ಕ್ರೋಢಿಕರಣಕ್ಕಾಗಿ ನಗರದ ವಿವಾಹಿತ‌ ಮಹಿಳೆಯರಿಗಾಗಿ ಮಿಸೆಸ್ ಬೆಳಗಾವಿ ಡಿವಾ ಶೀರ್ಷಿಕೆಯಡಿ ಮಾ.21ರಂದು ಸಂಜೆ 4 ಗಂಟೆಗೆ ಇಲ್ಲಿನ ತಿಲಕವಾಡಿಯ ಮಿಲೇನಿಯಮಂ ಗಾರ್ಡನ್ ನಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ಬೆಳಗಾವಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಕಿತ್ತೂರು ಹೇಳಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು, ಈಗಾಗಲೇ ಲಯನ್ಸ್ ಕ್ಲಬ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಈಗ ಅಗತ್ಯ ಇದ್ದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಇದಕ್ಕೆ ಬೇಕಿರುವ ಅನುದಾನ ಸಂಗ್ರಹಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಗರ ಪ್ರದೇಶದ ವಿವಾಹಿತ‌ ಮಹಿಳೆಯರು ಮಾತ್ರ ಈ ಸ್ಪರ್ಧೆಗೆ ಭಾಗವಹಿಸಬಹುದು. 25-35, 36-45, 46,55 ವಯೋಮಾನದ ಮೂರು ಭಾಗಗಳಲ್ಲಿ ಒಟ್ಟು ಮೂರು ಹಂತದಲ್ಲಿ ಈ ಸ್ಪರ್ಧೆ ನಡೆಯಲಿದೆ. ಮಾ.10ರೊಳಗೆ ಪ್ರಾಥಮಿಕ ಹಂತದ ಸುತ್ತಿನಲ್ಲಿ ಶಾರೀರಿಕ ಸದೃಢತೆ, ಪ್ರತಿಭೆ ಹಾಗೂ ಆಹಾರ ತಯಾರಿಕೆ ವಿಭಾಗದಲ್ಲಿ ಪ್ರತಿಯೊಂದು ಗ್ರೂಪ್ ನಿಂದ 10 ಜನರನ್ನು ಪೂರ್ವ ಫೈನಲ್, ಪ್ರಾಥಮಿಕ ಫೈನಲ್ ಹಾಗೂ ಫೈನಲ್ ಆಯ್ಕೆ ಮಾಡಲಾಗುವುದು. ಮಾ.21 ರಂದು ಫೈನಲ್ ಮೊದಲ ಹಂತದಲ್ಲಿ ಕ್ಯಾಟ್ ವಾಕ್ ಮೂಲಕ ಪ್ರತಿ‌ ಗ್ರೂಪ್‌ನಿಂದ ಇಬ್ಬರನ್ನು ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಫೈನಲ್‌ನಲ್ಲಿ ಕ್ಯಾಟ್ ವಾಕ್ ಹಾಗೂ ನಿರ್ಣಾಯಕರ ಪ್ರಶ್ನಾವಳಿ ಮೂಲಕ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು. ಫೈನಲ್ ನಲ್ಲಿ ಮುಖ್ಯ ನಿರ್ಣಾಯಕರನ್ನಾಗಿ ಬಾಲಿವುಡ್ ಸೆಲೆಬ್ರಿಟಿಯನ್ನು ಆಹ್ವಾನಿಸಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಗಿಫ್ಟ್‌ಗಳನ್ನು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀ ಕೊಳಕಿ, ಪ್ರತಿಭಾ ಮುತಾಲಿಕ ಭಾರತಿ ಒಡವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಐ ಶೃಂಗಸಭೆ ಕಾಂಗ್ರೆಸ್‌ ಅಡ್ಡಿಗೆ ಬಿಜೆಪಿ ಆಕ್ರೋಶ
ಬಾಗಲಕೋಟೆಯಲ್ಲಿ ಹಿಂದೂಗಳ ಭವ್ಯ ಶೋಭಾಯಾತ್ರೆ